Top

ತೈಲ ಬೆಲೆ ಏರಿಕೆ: ರಾಜ್ಯಾದ್ಯಂತ 5 ದಿನ ಕಾಂಗ್ರೆಸ್​ ಪ್ರತಿಭಟನೆ

5,000 ಪೆಟ್ರೋಲ್‌ ಬಂಕ್​​ಗಳ ಮುಂದೆ ಕಾಂಗ್ರೆಸ್​​ ಧರಣಿ

ತೈಲ ಬೆಲೆ ಏರಿಕೆ: ರಾಜ್ಯಾದ್ಯಂತ 5 ದಿನ ಕಾಂಗ್ರೆಸ್​ ಪ್ರತಿಭಟನೆ
X

ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯರ್ತರು ರಾಜ್ಯಾದ್ಯಂತ ಇಂದು ಕೇಂದ್ರ ಸಕಾರ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.

ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್​ ಐದು ದಿನಗಳ ಕಾಲ ನಿರಂತರ ಹೋರಾಟ ನಡೆಸಲಿದ್ದು, ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಮುಂದೆ, ‌ನಾಳೆ ಎಲ್ಲಾ ತಾಲೂಕು ಕೇಂದ್ರಗಳ ಎದುರು, ದಿನಾಂಕ 13ರಂದು ಹೋಬಳಿ ಮಟ್ಟದಲ್ಲಿ, 14ರಂದು ಗ್ರಾಮ ಪಂಚಾಯ್ತಿಗಳ ಮುಂದೆ, ಹಾಗೂ ಕೊನೆಯ ದಿನ ದಿನಾಂಕ 15ರಂದು ರಾಜ್ಯವ್ಯಾಪಿ 5,000 ಪೆಟ್ರೋಲ್​ ಬಂಕ್​ಗಳ ಮುಂದೆ ಧರಣಿ ನಡೆಸಲು ರಾಜ್ಯ ಕಾಂಗ್ರೆಸ್​ ನಿರ್ಧರಿಸಿದೆ.

ಇಂದಿನಿಂದ ಪ್ರತಿಭಟನೆ ಆರಂಭವಾಗಲಿದ್ದು, ನಗರದ ಶೇಷಾದ್ರಿಪುರಂನ ಶಿವಾನಂದ ಸರ್ಕಲ್ ಸಮೀಪದ ರೆಡ್ಡಿ ಪೆಟ್ರೋಲ್ ಬಂಕ್ ಬಳಿ ರಾಜ್ಯ ಕಾಂಗ್ರೆಸ್​ ಹಿರಿಯ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ , ಸೇರಿದಂತೆ ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

Next Story

RELATED STORIES