Top

25ರಂದು ಹೈಕಮಾಂಡ್​ನಿಂದ ಬರುವ ತೀರ್ಮಾನಕ್ಕೆ ಬದ್ಧ-ಸಿಎಂ ಬಿಎಸ್​ವೈ

ಬಿಜೆಪಿಯಲ್ಲಿ 75 ವರ್ಷಗಳ ದಾಟಿದವರಿಗೆ ಅವಕಾಶ ಇಲ್ಲ

25ರಂದು ಹೈಕಮಾಂಡ್​ನಿಂದ ಬರುವ ತೀರ್ಮಾನಕ್ಕೆ ಬದ್ಧ-ಸಿಎಂ ಬಿಎಸ್​ವೈ
X

ಬೆಂಗಳೂರು: ರಾಷ್ಟ್ರೀಯ ನಾಯಕರು ನೀಡುವ ಸೂಚನೆಯಂತೆ ಕೆಲಸ ಮಾಡುತ್ತೇನೆ. ಇದೇ ತಿಂಗಳ 25ರಂದು ವರಿಷ್ಠರು ನೀಡುವ ತೀರ್ಮಾನಕ್ಕೆ ಬದ್ಧ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆಯ ಕುರಿತು 25ಕ್ಕೆ ಹೈಕಮಾಂಡ್ ನಿಂದ ‌ಸಂದೇಶ ಬರಲಿದೆ. ಹೈಕಮಾಂಡ್ ಹೇಳಿದಂತೆ ಕೇಳುವೆ ಎಂದು ಹೇಳಿದ್ದಾರೆ.

ಇನ್ನು ಬಿಜೆಪಿಯಲ್ಲಿ 75 ವರ್ಷಗಳ ದಾಟಿದವರಿಗೆ ಅವಕಾಶ ಇಲ್ಲ. ನನ್ನ ಕೆಲಸ ನೋಡಿ ಹೈಕಮಾಂಡ್ ಅವಕಾಶ ಮಾಡಿಕೊಟ್ಟಿದೆ. ಯಾರೂ ಪ್ರತಿಭಟನೆ ಚಳುವಳಿ ಮಾಡಬಾರದು. ಸ್ವಾಮೀಜಿಗಳ ಶ್ರೀರಕ್ಷೆ ನನ್ನ ಮೇಲಿದೆ. ನಾನು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರ ತರವ ಸಂಕಲ್ಪ ಮಾಡಿದ್ದೀನಿ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಗುರಿ ಇದೆ ಎಂದರು.

Next Story

RELATED STORIES