Top

CM ಸ್ಥಾನಕ್ಕೆ ಯಾರ ಹೆಸರನ್ನೂ ಶಿಫಾರಸ್ಸು ಮಾಡಲ್ಲ- ಸಿಎಂ ಬಿಎಸ್​ವೈ

ಯಾವ ಸಮುದಾಯಕ್ಕೂ ಸಿಎಂ ಸ್ಥಾನ ಕೊಡಿ ಎಂದು ಮಾತನಾಡಲ್ಲ

CM ಸ್ಥಾನಕ್ಕೆ ಯಾರ ಹೆಸರನ್ನೂ ಶಿಫಾರಸ್ಸು ಮಾಡಲ್ಲ- ಸಿಎಂ ಬಿಎಸ್​ವೈ
X

ಬೆಂಗಳೂರು: ನಾನು ಯಾರನ್ನು ಸಿಎಂ ಮಾಡಬೇಕೆಂದು ಹೇಳುವುದಿಲ್ಲ. ಯಾವುದೇ ಹೆಸರನ್ನು ನಾನು ಶಿಫಾರಸ್ಸು ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಮುದಾಯಕ್ಕೂ ಸಿಎಂ ಸ್ಥಾನ ಕೊಡಿ ಎಂದು ಮಾತನಾಡಲ್ಲ. ಇನ್ನೂ ಹೈಕಮಾಂಡ್ ಸಂದೇಶ ಬಂದಿಲ್ಲ. ಹೈಕಮಾಂಡ್ ಯಾವ ತೀರ್ಮಾನ ಬೇಕಾದರೂ ಮಾಡಲಿ ಎಂದರು.

ಇನ್ನು ೨೫ಕ್ಕೆ ಹೈಕಮಾಂಡ್​​ ಸಂದೇಶ ಬರಬಹುದು ಎಂದು ಕಾಯುತ್ತಿದ್ದೇನೆ. ಎರಡು ತಿಂಗಳ ಹಿಂದೆಯೇ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ. ಪಕ್ಷ ಸಂಘಟನೆ ಮಾಡುತ್ತೇನೆ. ಪಕ್ಷ ಅಧಿಕಾರಕ್ಕೆ ತರುವಲ್ಲಿ ಪ್ರಯತ್ನ ಮಾಡುತ್ತೇನೆ ಎಂದರು.

Next Story

RELATED STORIES