Top

ಅನಾವಶ್ಯಕ ಗೊಂದಲ: ಬಿಜೆಪಿ ನಾಯಕರ ಔತಣಕೂಟ ರದ್ದು

ಡಿನ್ನರ್ ಪಾರ್ಟಿ ರದ್ದು ಮಾಡಿದ ಸಿಎಂ ಬಿಎಸ್​ವೈ

ಅನಾವಶ್ಯಕ ಗೊಂದಲ: ಬಿಜೆಪಿ ನಾಯಕರ ಔತಣಕೂಟ ರದ್ದು
X

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ನಾಯಕರಿಗೂ ಸಿಎಂ ಯಡಿಯೂರಪ್ಪ ಆಯೋಸಿದ್ದ ಔತಣಕೂಟ ರದ್ದು ಮಾಡಲಾಗಿದೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಅನಾವಶ್ಯಕ ಗೊಂದಲ ಆಗುತ್ತಿರುವ ಹಿನ್ನೆಲೆಯಲ್ಲಿ ಶಾಸಕಾಂಗ ಸಭೆ ರದ್ದುಗೊಳಿಸಿದ್ದ ಸಿಎಂ ಬಿಎಸ್​ವೈ ಭಾನುವಾರದ ಡಿನ್ನರ್ ಪಾರ್ಟಿ ಕೂಡ ರದ್ದು ಮಾಡಿದ್ದಾರೆ.

ಇನ್ನು ಇಂದು ಸಂಜೆ 4 ಗಂಟೆಗೆ ವಿಧಾನ ಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಯಡಿಯೂರಪ್ಪ ಸಚಿವರ ಜೊತೆ ತಮ್ಮ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

Next Story

RELATED STORIES