Top

ಮಕ್ಕಳಿಗೆ ಉಚಿತವಾಗಿ ಟೆಸ್ಟ್ ಮಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಈಗ ಮಕ್ಕಳಿಗೆ ಮೇಲಿಂದ ಮೇಲೆ ಟೆಸ್ಟ್ ಮಾಡ್ತಾ ಇರಬೇಕು. ಮಕ್ಕಳಿಗೆ ಉಚಿತ ಟೆಸ್ಟ್ ಮಾಡಬೇಕು.

ಮಕ್ಕಳಿಗೆ ಉಚಿತವಾಗಿ ಟೆಸ್ಟ್ ಮಾಡಬೇಕು - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
X

ಬೆಂಗಳೂರು: ನಾನು ಎರಡು ಬಾರಿ ಪತ್ರ ಬರೆದಿದ್ದೆ. ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ-ಕಾಲೇಜು ತೆರೆಯೋದು ಬೇಡಿ ಅಂತ ಹೇಳಿದ್ದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ಕಾಲೇಜು ಪ್ರಾರಂಭಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮಕ್ಕಳಿಗೆ ಡಿಸ್ಟೆನ್ಸ್​ ಮೇಂಟೇನ್ ಮಾಡೋದು, ಸ್ಯಾನಿಟೈಸರ್ ಹಾಕೋಳೋದು ಆಗೋದಿಲ್ಲ. ಕಾಲೇಜು ತೆಗಿಲೇಬಾರದು ಅಂತ ಹೇಳಿದ್ದೆ. ಕಾಲೇಜು ತೆಗೆದಿದ್ದಾರೆ ಎಂದರು.

ಇನ್ನು ಈಗ ಮಕ್ಕಳಿಗೆ ಮೇಲಿಂದ ಮೇಲೆ ಟೆಸ್ಟ್ ಮಾಡ್ತಾ ಇರಬೇಕು. ಮಕ್ಕಳಿಗೆ ಉಚಿತವಾಗಿ ಟೆಸ್ಟ್ ಮಾಡಬೇಕು. ಹಾಜರಿ ಕಡ್ಡಾಯಗೊಳಿಸಬಾರದು. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಣೆದು ಮಾಡುತ್ತಿದ್ದಾರಾ ಅನ್ನೋದು ನನಗೆ ಗೊತ್ತಿಲ್ಲ. ಖಾಸಗಿಯವರು ಸಂಬಳ ಕೊಡಬೇಕು. ಪ್ರವೇಶ ಶುಲ್ಕ ತೆಗೆದುಕೊಳ್ಳದೇನೇ ಇರೋಕಾಗಲ್ಲ. ಹೀಗಾಗಿ ಅವರು ಸರ್ಕಾರದ ಮೇಲೆ ಒತ್ತಡ ಹೇರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮರಾಠಾ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ವಿಚಾರ ಬಗ್ಗೆ ಮಾತನಾಡಿದ ಅವರು, ಇದು ಓಲೈಕೆ ರಾಜಕಾರಣ. ಬಡತನದಲ್ಲಿ ಇರೋ ಬಹಳಷ್ಟು ಸಮುದಾಯಗಳಿವೆ. ಬೇರೆಯವರಿಗೂ ಮಾಡಬೇಕಲ್ಲವಾ(?) ಇವರಿಗೂ ಮಾಡಿದ ಮೇಲೆ ಬೇರೆಯವರಿಗೂ ಮಾಡಬಹುದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

Next Story

RELATED STORIES