Top

ಉಪಚುನಾವಣೆ ಮತಎಣಿಕೆ: ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ಕಮಲ ಪಾಳಯದ ನಾಯಕರಲ್ಲಿ ಸಂಭ್ರಮ

ರಾಜರಾಜೇಶ್ವರಿ ನಗರ 14ನೇ ಸುತ್ತಿನ ಹಾಗೂ ಶಿರಾದಲ್ಲಿ 12ನೇ ಸುತ್ತಿನ ಮತಎಣಿಕೆ ಮುಗಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಉಪಚುನಾವಣೆ ಮತಎಣಿಕೆ: ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ಕಮಲ ಪಾಳಯದ ನಾಯಕರಲ್ಲಿ ಸಂಭ್ರಮ
X

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಆರ್​ಆರ್​ ನಗರ ಮತ್ತು ಶಿರಾ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಸದ್ಯದ ಬೆಳವಣಿಗೆಯವರೆಗೂ ರಾಜರಾಜೇಶ್ವರಿ ನಗರ 14ನೇ ಸುತ್ತಿನ ಹಾಗೂ ಶಿರಾದಲ್ಲಿ 12ನೇ ಸುತ್ತಿನ ಮತಎಣಿಕೆ ಮುಗಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ರಾಜರಾಜೇಶ್ವರಿ ನಗರದಲ್ಲಿ 14ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 34,517 ಮತಗಳೊಂದಿಗೆ ಮುನ್ನಡೆಯಲ್ಲಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೆಚ್​ ಅವರು 39,415 ಮತಗಳನ್ನು ಪಡೆದುಕೊಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು 4,660 ಮತಗಳನ್ನು ಪಡೆದಿದ್ದು, ಮತ ಎಣಿಕೆ ಮುಂದುವರೆದಿದೆ.

ಇನ್ನು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 12ನೇ ಸುತ್ತಿನ ಮತ ಎಣಿಕೆ ಅಂತ್ಯಗೊಂಡಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರು 7,870 ಮತಗಳ ಅಂತರದೊಂದಿಗೆ ಮುನ್ನಡೆಯಲ್ಲಿದ್ದಾರೆ. ರಾಜೇಶ್ ಗೌಡ ಅವರು 37,808 ಮತಗಳು ಬಂದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರಿಗೆ 29,938 ಮತಗಳು ಲಭ್ಯವಾಗಿದ್ದು, ಜೆಡಿಎಸ್ ಅಭ್ಯರ್ಥಿಗಳು ಅಮ್ಮಾಜಮ್ಮಗೆ 19,522 ಮತಗಳು ಪಡೆದುಕೊಂಡಿದ್ದಾರೆ.

ಸದ್ಯ ಎರಡೂ ಕ್ಷೇತ್ರದಲ್ಲೂ ಆರಂಭಿಕ ಹಂತದ ಮತಎಣಿಕೆಯಿಂದ ಬಿಜೆಪಿ ಮುನ್ನಡೆ ಸಾಧಿಸಿಕೊಂಡು ಬಂದಿರುವ ಕಾರಣ ರಾಜ್ಯದ ಕಮಲ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದ್ದು, ಗೆಲುವಿನ ಹಂತ ಸನಿಹದಲ್ಲಿರುವ ಹಿನ್ನೆಲೆಯಲ್ಲಿ ಸಚಿವ ಬಿ.ಶ್ರೀರಾಮುಲು, ಆರ್.ಅಶೋಕ, ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯ ಇತರೆ ನಾಯಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಪರಸ್ಪರ ಸಿಹಿ ಹಂಚಿ, ಸಂಭ್ರಮಿಸಿದ್ದಾರೆ.

Next Story

RELATED STORIES