Top

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್ ನಾಯಕ ಬಿಎಸ್​ವೈ

ಯಡಿಯೂರಪ್ಪ ಕಾಲು ಹಿಡಿದು ಬಿಜೆಪಿಗೆ ಬಂದ್ರಿ, ಇವತ್ತು ಅವರ ವಿರುದ್ಧ ಮಾತನಾಡುತ್ತಿದ್ದಿರಾ(?)

ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್ ನಾಯಕ ಬಿಎಸ್​ವೈ
X

ಬೆಂಗಳೂರು: ಯಡಿಯೂರಪ್ಪ ಕಾಲು ಹಿಡಿದು ಬಿಜೆಪಿಗೆ ಬಂದ್ರಿ, ಇವತ್ತು ಅವರ ವಿರುದ್ಧ ಮಾತನಾಡುತ್ತಿದ್ದಿರಾ(?) ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಬದಲಾಗ್ತಾರೆ ಎಂಬ ಯತ್ನಾಳ್ ಅವರ ಹೇಳಿಕೆ ಕುರಿತು ನಗರದಲ್ಲಿಂದು ಮಾಧ್ಯಮದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕು. ಅದರ ಬಗ್ಗೆ ನಮಗೂ ಕಾಲಜಿ ಇದೆ. ಬನ್ನಿ ಒಟ್ಟಾಗಿ ಹೋಗಿ ಅನುದಾನ ಕೇಳೋಣ. ಅದು ಬಿಟ್ಟು ಪಕ್ಷ ವಿರೋಧಿ ಹೇಳಿಕೆ ನೀಡಬೇಡಿ ಎಂದು ಟಾಂಗ್​ ಕೊಟ್ಟಿದ್ದಾರೆ.

ಇನ್ನು ಯಡಿಯೂರಪ್ಪ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್ ನಾಯಕ. ಯಡಿಯೂರಪ್ಪ ನಾಯಕತ್ವವನ್ನು ಕೇಂದ್ರದ ವರಿಷ್ಠರು ಒಪ್ಪಿದ್ದಾರೆ. ಪ್ರಧಾನಮಂತ್ರಿ ನಿಮಗೆ ಕರೆ ಮಾಡಿ ಯಡಿಯೂರಪ್ಪ ಅವರನ್ನು ಇಳಿಸುತ್ತೇವೆ ಅಂತಾ ಹೇಳಿದ್ರಾ(?) ಒಂದು ಕಡೆ ಪಕ್ಷಕ್ಕೆ ಮುಜುಗರ ಆಗುವ ಹಾಗೇ ಮಾತಾಡ್ತೀರಿ, ಇನ್ನೊಂದು ಕಡೆ ಪ್ರಧಾನಿ ಹೆಸರು ಹೇಳ್ತೀರಿ. ಕಳೆದ ವರ್ಷ ಪ್ರವಾಹ ಆದಾಗ ನೀವೇ ನೇರವಾಗಿ ಪ್ರಧಾನಿ ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಿಸಬೇಕಿತ್ತು. ಅದರ ಬದಲು ಬಹಿರಂಗವಾಗಿ ಪ್ರಧಾನಿ ವಿರುದ್ಧ ಹೇಳಿಕೆ ಕೊಡಲಿಲ್ವಾ(?) ಈಗ ನಮಗೆ ಯಡಿಯೂರಪ್ಪ ನಾಯಕ ಅಲ್ಲ, ಮೋದಿ, ಅಮಿತ್​ ಶಾ ಅಂತಾ ಹೇಳ್ತೀರಿ. ಬಿಜೆಪಿಗೆ ಎಲ್ಲರೂ ನಾಯಕರೇ. ಹಾಗಾದ್ರೆ ಹಿಂದೆ ಯಡಿಯೂರಪ್ಪ ಅವರನ್ನು ಕೈಕಾಲು ಕಟ್ಟಿ ತಾವು ಬಿಜೆಪಿಗೆ ಬರಲಿಲ್ವಾ(?) ಆಗ ಯಡಿಯೂರಪ್ಪ ನಾಯಕ ಆಗಿರಲಿಲ್ವಾ(?) ಯಾಕೆ ಈ ರೀತಿ ಹೇಳಿಕೆ ಕೊಡ್ತಿದ್ದೀರಿ(?) ಹಗಲುಗನಸು ಕಾಣ್ತಾ ದುರಹಂಕಾರದ ಮಾತಾಡ್ತಿದ್ದೀರಿ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಬಿಜೆಪಿ ಅಧಿಕಾರಕ್ಕೆ ತಂದ ಉದ್ದೇಶ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಶಾಸಕರ ಕೆಲಸ ಆಗುತ್ತಿಲ್ಲ ಅಂತ, ಸಿಎಂ ಆಗಲು ಯಡಿಯೂರಪ್ಪ ಹಿತಾಸಕ್ತಿ ಏನೂ ಇಲ್ಲ, ಸಿಎಂ ಸ್ಥಾನ ಖಾಲಿ ಇಲ್ಲ, ಏನು ನೀವು ದುರಹಂಕಾರದ ಮಾತು ಮಾತಾಡ್ತೀರಾ(?) ಉತ್ತರ ಕರ್ನಾಟಕ ಶಾಸಕರು ಎಲ್ಲರೂ ನಿಮ್ಮ ಬೆಂಬಲಕ್ಕೆ ಇದ್ದಾರಾ(?) ಯಡಿಯೂರಪ್ಪ ವಿರುದ್ಧ ಹೇಳಿಕೆ ಕೊಡಿ ಅಂತಾ ಹೇಳಿದ್ದಾರಾ(?) ಅಭಿವೃದ್ಧಿ ಪ್ರಶ್ನೆ ಬಂದಾಗ ನಾವೆಲ್ಲಾ ಉತ್ತರ ಕರ್ನಾಟಕ ಪರ ಕೈ ಎತ್ತುತ್ತೇವೆ. ಹೋಗ್ರೀ, ಪ್ರಧಾನಿ ಭೇಟಿ ಮಾಡ್ರೀ, ಅನುದಾನ ತನ್ರೀ. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಅವರು ಏನು ಅನ್ಯಾಯ ಮಾಡಿದ್ದಾರೆ(?) ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಅವರು ಮಾತನಾಡಿದ್ದಾರೆ.

Next Story

RELATED STORIES