Top

ಬೆಡ್​​ ಬ್ಲಾಕಿಂಗ್​ ದಂಧೆಯಲ್ಲಿ ಹೆಚ್ಚಿನ ಅಧಿಕಾರಿಗಳ ಬಂಧನ ಸಾಧ್ಯತೆ-ಬೊಮ್ಮಾಯಿ

ಎಲ್ಲಾ ವಲಯದಲ್ಲೂ ತನಿಖೆಗೆ ಸೂಚನೆ

ಬೆಡ್​​ ಬ್ಲಾಕಿಂಗ್​ ದಂಧೆಯಲ್ಲಿ ಹೆಚ್ಚಿನ ಅಧಿಕಾರಿಗಳ ಬಂಧನ ಸಾಧ್ಯತೆ-ಬೊಮ್ಮಾಯಿ
X

ಬೆಂಗಳೂರು: ಬೆಡ್​ ಬ್ಲಾಕಿಂಗ್​ ದಂಧೆ ಬಗ್ಗೆ ನಮ್ಮ ಪ್ರತಿನಿಧಿ ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದಾರೆ. ಕೇಸ್ ಸಿಸಿಬಿಗೆ ವರ್ಗಾವಣೆಯಾಗಿದೆ. ಸಿಸಿಬಿ ಸುಮೋಟೊ ಕೇಸ್ ಹಾಕುತ್ತಿದೆ ಎಂದು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣದ ಎಲ್ಲಾ ವಲಯದಲ್ಲಿ ಈ ರೀತಿಯ ಅಕ್ರಮಗಳು ಆಗಿರಬಹುದು. ತನಿಖೆ ಎಲ್ಲಾ ವಲಯಕ್ಕೆ ವಿಸ್ತರಣೆ ಮಾಡುತ್ತೇವೆ. ಹಲವರನ್ನ ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಇನ್ನು ಪ್ರಕರಣ ಸಂಬಂಧ ಇನ್ನೂ ಹೆಚ್ಚು ಅಧಿಕಾರಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಅರ್ಹರಿಗೆ ಬೆಡ್ ಕೊಡದೇ ಅಪಚಾರ ಮಾಡಿದ್ದಾರೆ. ಸಿಸಿಬಿ ಈಗಾಗಲೇ ಕಾರ್ಯಾಚರಣೆ ಮಾಡುತ್ತಿದೆ. ಯಾರಿದ್ದಾರೆ ಅವರೆಲ್ಲರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.

Next Story

RELATED STORIES