Top

ನಿಯಮ ಉಲ್ಲಂಘಿಸುವುದೇ ಕಾಂಗ್ರೆಸ್​ನವರ ಪ್ರವೃತ್ತಿ-ಸಚಿವ ಬೊಮ್ಮಾಯಿ

ಕಾಂಗ್ರೆಸ್​ನವರದು ನಕಾರಾತ್ಮಕ ಪಾಲಿಟಿಕ್ಸ್

ನಿಯಮ ಉಲ್ಲಂಘಿಸುವುದೇ ಕಾಂಗ್ರೆಸ್​ನವರ ಪ್ರವೃತ್ತಿ-ಸಚಿವ ಬೊಮ್ಮಾಯಿ
X

ಬೆಂಗಳೂರು: ನಿಯಮ ಉಲ್ಲಂಘಿಸುದೇ ಕಾಂಗ್ರೆಸ್​ನವರ ಪ್ರವೃತ್ತಿ. ನಿಯಮ ಉಲ್ಲಂಘಿಸುವುದೇ ಅವರ ಪ್ರವೃತ್ತಿ ಇದು ನಕಾರಾತ್ಮಕ ಪಾಲಿಟಿಕ್ಸ್ ಎಂದು ಎಂದು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರು ಮೊದಲು ಲಸಿಕೆ ಬಂದಾಗ ಮೊದಲು ಮೋದಿ ತೆಗೆದುಕೊಳ್ಳಲಿ ಅಂದ್ರು. ಈಗ ಲಸಿಕೆ ಯಾಕೆ ಕೊಟ್ಟಿಲ್ಲ ಅಂತ ಹೇಳ್ತಾರೆ. ಅವರಿಗೆ ವಿರೋಧ ಮಾಡೋದಕ್ಕೆ ಹಲವು ಮಾರ್ಗಗಳಿವೆ. ಸೋಶಿಯಲ್ ಮೀಡಿಯಾ ಸೇರಿ ಹಲವು ಮಾರ್ಗಗಳಿವೆ. ಕೊರೊನಾ ಸಂದರ್ಭದಲ್ಲಿ ಈ ರೀತಿ ಪ್ರತಿಭಟನೆ ಮಾಡೋದು ಸರಿಯಲ್ಲ ಎಂದರು.

ಇನ್ನು ರಾಜ್ಯದಲ್ಲಿ ಅನ್​ ಲಾಕ್​​ ವಿಚಾರವಾಗಿ ಮಾತನಾಡಿದ ಅವರು, ಸದ್ಯ ಕೆಲವು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಎಲ್ಲಾ ಕೈಗಾರಿಕೆಗಳಿಗೆ ಶೇ.೫೦ ರಷ್ಟು ಅವಕಾಶ ನೀಡಲಾಗಿದೆ. ಸಾರಿಗೆ ವ್ಯವಸ್ಥೆ ಕೈಗಾರಿಕೆಗಳೇ ಮಾಡಿಕೊಳ್ಳಬೇಕು. ಸಾಧ್ಯವಾದಷ್ಟು ವ್ಯಾಕ್ಸಿನೇಷನ್ ಮಾಡಿಸಬೇಕು. ವಸ್ತು ಖರೀದಿಗೆ ೧೦ರಿಂದ ೨ರವರೆಗೆ ವಿಸ್ತರಿಸಲಾಗಿದೆ. ಇದು ಜನ, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಧಾರ್ಮಿಕ, ಮದುವೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಈ ನಿಯಮ ೧೪ರಿಂದ ಜಾರಿಯಾಗಲಿದೆ. ಆದರೆ ಕೆಲವರು ಇವತ್ತಿನಿಂದಲೇ ರಸ್ತೆಗೆ ಬಂದಿದ್ದಾರೆ. ಸಾರ್ವಜನಿಕರು ೧೪ರವರೆಗೆ ಕಠಿಣ ನಿಯಮ ಪಾಲಿಸಬೇಕು ಎಂದು ಮನವಿ ಮಾಡಿಕೊಂಡರು.

Next Story

RELATED STORIES