Top

ನಾಳೆ ಬೆಳಿಗ್ಗೆ ನಟ ದರ್ಶನ್ ಪ್ರಚಾರಕ್ಕೆ ಬರುತ್ತಾರೆ - ಬಿಜೆಪಿ ಅಭ್ಯರ್ಥಿ ಮುನಿರತ್ನ

ಮುಂದೆ ಯಶ್ ಅಥವಾ ಬೇರೆ ಯಾರು ಬರುತ್ತಾರೆ ಅಂತ ಹೇಳುತ್ತೇನೆ

ನಾಳೆ ಬೆಳಿಗ್ಗೆ ನಟ ದರ್ಶನ್ ಪ್ರಚಾರಕ್ಕೆ ಬರುತ್ತಾರೆ - ಬಿಜೆಪಿ ಅಭ್ಯರ್ಥಿ ಮುನಿರತ್ನ
X

ಬೆಂಗಳೂರು: ನಾನು ಮತ ಕೇಳಲು ಕಣ್ಣೀರು ಹಾಕಿಲ್ಲ, 25 ವರ್ಷದ ಹಿಂದೆ ತಾಯಿ ತೀರಿ ಹೋಗಿದ್ದಾರೆ. ಅವರ ನೆನೆದು ಕಣ್ಣೀರೆ ಬಂದಿದೆ ಅಷ್ಟೇ ಎಂದು ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಗುರುವಾರ ಹೇಳಿದ್ದಾರೆ.

ಮುನಿರತ್ನ ಕಣ್ಣೀರ ಬಗ್ಗೆ ಡಿಕೆ ಸುರೇಶ್ ಹೇಳಿಕೆ ನೀಡುವ ವಿಷಯ ಕುರಿತು ಮಾತನಾಡಿದ ಅವರು, ನಾನು ಕೆಲಸದ ಮೇಲೆ ಮತ ಕೇಳೋನು, ಕಣ್ಣೀರ ಮೇಲೆ ಅಲ್ಲ. ಡಿ.ಕೆ ಸುರೇಶ್ ದೆಹಲಿಯಲ್ಲಿ ಕಣ್ಣೀರು ಹಾಕಿದ್ದಾಗ ನಾನು ಕನಿಕರ ವ್ಯಕ್ತಪಡಿಸಿದ್ದೆ. ಅವರು ವ್ಯಂಗ್ಯ ಮಾಡಿದ್ದಾರೆ ಬಿಡಿ ಎಂದು ಹೇಳಿದರು.

ಇನ್ನು ದಿನೇಶ್ ಗುಂಡೂರಾವ್ ರಾಜಕಾರಣಿಯೇ ಅಲ್ಲ. ಅವರು ಅವರ ಅಪ್ಪನ ಹೆಸರಲ್ಲಿ ಬದುಕುತ್ತಿದ್ದಾರೆ. ಅವರ ಬಗ್ಗೆ ಯಾಕೆ ಮಾತಾಡ್ತಿರಿ ಬಿಡಿ ಎಂದು ಗರಂ ಆದರು.

ಇದೇ ವೇಳೆ ಸ್ಟಾರ್​ ಪ್ರಚಾರಕ್ಕೆ ಬಗ್ಗೆ ಮಾತನಾಡಿದ ಅವರು, ಈಗ ದರ್ಶನ ಭೇಟಿ ಮಾಡಿ ಪ್ರಚಾರದ ಬಗ್ಗೆ ಮಾತನಾಡಿದೆ. ನಾಳೆ ಬೆಳಿಗ್ಗೆ 9 ಗಂಟೆಗೆ ದರ್ಶನ್ ಪ್ರಚಾರ ಮಾಡ್ತಾರೆ. ರಾತ್ರಿ 10 ಗಂಟೆಯ ವರೆಗೂ ಪ್ರಚಾರ ಮಾಡುತ್ತಾರೆ. ಕ್ಷೇತ್ರದ ಪ್ರತಿ ವಾರ್ಡ್​​ನಲ್ಲಿ ಕೂಡ ಪ್ರಚಾರ ಮಾಡ್ತಾರೆ ಎಂದರು.

ದರ್ಶನ ಅವರ ಜೊತೆಗೆ ಮಾತಾಡಿದ್ದೇನೆ ಅವರು ನಾಳೆ ಬರುತ್ತಾರೆ. ನಿನ್ನೆ ಕ್ಷೇತ್ರದಲ್ಲಿ ಖುಷ್ಬೂ ಬಂದಿದರು. ಈಗ ತಾರಾ, ಶೃತಿ ಅವರು ಇದ್ದಾರೆ, ಅವರು ಪ್ರಚಾರ ಮಾಡುತ್ತಿದ್ದಾರೆ. ದರ್ಶನ್ ನಾಳೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 10 ಗಂಟೆ ವರೆಗೂ ಪ್ರಚಾರ ಕಾರ್ಯದಲ್ಲಿ ಇರುತ್ತಾರೆ. ಮುಂದೆ ಯಶ್ ಅಥವಾ ಬೇರೆ ಯಾರು ಬರುತ್ತಾರೆ ಅಂತ ಹೇಳುತ್ತೇನೆ ಎಂದು ಮುನಿರತ್ನ ಅವರು ಹೇಳಿದ್ದಾರೆ.

Next Story

RELATED STORIES