Top

ದೇಶದಲ್ಲಿ ಒಂದೇ ದಿನ 3,82,315 ಮಂದಿಗೆ ಕೊರೊನಾ ಸೋಂಕು ದೃಢ

ಕಳೆದ 24 ಗಂಟೆಗಳಲ್ಲಿ 3,780 ಸೋಂಕಿತರ ಸಾವು

ದೇಶದಲ್ಲಿ ಒಂದೇ ದಿನ 3,82,315 ಮಂದಿಗೆ ಕೊರೊನಾ ಸೋಂಕು ದೃಢ
X

ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 3,82,315 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಒಂದೇ ದಿನ 3,780 ಸೋಂಕಿತರು ಸಾವನ್ನಪ್ಪಿದ್ದು, ನಿನ್ನೆ 3,38,439 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಇನ್ನು ದೇಶದಲ್ಲಿ ಈವೆರೆಗೆ ಒಟ್ಟು 12,06,65,148ಜನರಿಗೆ ಕೊರೊನಾ ಸೋಂಕು ತಗಲಿದ್ದು, ಈ ಪೈಕಿ 2,26,188 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 34,87,229 ಸಕ್ರೀಯ ಪ್ರಕರಣಗಳಿದ್ದು, ಒಟ್ಟು 1,69,51,731 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

ಕೊರೊನಾ ಹರಡುವಿಕೆ ನಿಯಂತ್ರಣಕ್ಕಾಗಿ ಒಟ್ಟಾರೆ ದೇಶದಲ್ಲಿ ಈವರೆಗೆ 16,04,94,188 ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

Next Story

RELATED STORIES