Top

ದೇಶದಲ್ಲಿ ಒಂದೇ ದಿನ 41,383 ಮಂದಿಗೆ ಕೊರೊನಾ ಸೋಂಕು

ಕಳೆದ 24 ಗಂಟೆಗಳಲ್ಲಿ 38,652 ಸೋಂಕಿತರು ಗುಣಮುಖ

ದೇಶದಲ್ಲಿ ಒಂದೇ ದಿನ 41,383 ಮಂದಿಗೆ ಕೊರೊನಾ ಸೋಂಕು
X

ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ಹರಡುವಿಕೆಯಲ್ಲಿ ಕೊಂಚ ಇಳಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 41,383 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಒಂದೇ ದಿನ 507 ಸೋಂಕಿತರು ಸಾವನ್ನಪ್ಪಿದ್ದು, 38,652 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಇನ್ನು ದೇಶದಲ್ಲಿ ಈವೆರೆಗೆ ಒಟ್ಟು 3,12,57,720 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಈ ಪೈಕಿ 4,18,987 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 4,09,394 ಸಕ್ರೀಯ ಪ್ರಕರಣಗಳಿದ್ದು 3,04,29,339 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

Next Story

RELATED STORIES