Top

COVID 19 India Updates: ದೇಶದಲ್ಲಿ ಕೋವಿಡ್​ ಸಕ್ರಿಯ ಪ್ರಕರಣಗಳು 7 ಲಕ್ಷಕ್ಕೆ ಇಳಿಕೆ

ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ

COVID 19 India Updates: ದೇಶದಲ್ಲಿ ಕೋವಿಡ್​ ಸಕ್ರಿಯ ಪ್ರಕರಣಗಳು 7 ಲಕ್ಷಕ್ಕೆ ಇಳಿಕೆ
X

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 62 ಸಾವಿರ ಕೋವಿಡ್‌ 19 ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ.

ಕಳೆದ ಮೂರು ವಾರಗಳ ಹಿಂದೆ ದಿನಕ್ಕೆ 80-90 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈ ವಾರದಲ್ಲಿ ಏರಿಕೆಯ ಪ್ರಮಾಣ 60 ಸಾವಿರ ಸಮೀಪಕ್ಕೆ ಇಳಿಕೆಯಾಗಿದೆ.

ಕೋವಿಡ್‌-19 ಸೋಂಕಿತರ ಸಂಖ್ಯೆ 74,32,681ಕ್ಕೆ ಏರಿದ್ದು, ಒಂದೇ ದಿನದಲ್ಲಿ 62,212 ಹೊಸ ಸೋಂಕಿತರ ಪ್ರಕರಣಗಳು ಪತ್ತೆ ಆಗಿವೆ.

ಕೋವಿಡ್‌ ಪೀಡಿತರಲ್ಲಿ 65 ಲಕ್ಷ ಜನರು ಗುಣಮುಖರಾಗಿದ್ದು, ಕೇವಲ 7 ಲಕ್ಷ ಜನರ ಸೋಂಕಿನಿಂದ ಬಳಲುತ್ತಿದ್ದು ದೇಶದ ವಿವಿಧ ಆಸ್ಪತ್ರೆಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈವರೆಗೆ 1,12,998 ಜನರ ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 837 ಜನರ ಮೃತಪಟ್ಟಿದ್ದಾರೆ.

ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.87.56 ರಷ್ಟಿದ್ದು, ಸೋಂಕಿತರ ಪ್ರಮಾಣಕ್ಕಿಂತ, ಗುಣಮುಖರಾಗುವವರ ಪ್ರಮಾಣ ಹೆಚ್ಚಾಗಿದೆ. ಕಳೆದ 9 ದಿನಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 7 ಲಕ್ಷಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಪ್ರಸ್ತುತ್ತ ದೇಶದಲ್ಲಿ 7,95,087 ರಷ್ಟು ಸಕ್ರಿಯ ಪ್ರಕರಣಗಳಿವೆ. ಗುಣಮುಖರಾಗಿರುವವರ ಸಂಖ್ಯೆ 65,24,596

Next Story

RELATED STORIES