COVID 19 India Updates: ದೇಶದಾದ್ಯಂತ ಈವರೆಗೆ 1,06,21,220 ಮಂದಿ ಕೊರೊನಾ ಸೋಂಕಿನಿಂದ ಚೇತರಿಕೆ
ದೇಶದಲ್ಲಿ ಒಟ್ಟು 1,09,16,589 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ.
ಪೋಟೋ ಕೃಪೆ: ಪಿಟಿಐ
ನವೆದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ ಹೊಸದಾಗಿ 11,649 ಕೋವಿಡ್ 19 ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.
ಈ ಸಮಯದಲ್ಲಿಯೇ ಕೊರೊನಾ ವೈರಸ್ ಸೋಂಕಿನಿಂದ ಚೇತರಿಕೆಯಾಗಿರುವ 9,489 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ನಡುವೆ ಕೋವಿಡ್-19ನಿಂದಾಗಿ ಕಳೆದೊಂದು ದಿನದಲ್ಲಿ 90 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,55,732ಕ್ಕೆ ಏರಿಕೆ ಆಗಿದೆ.
India reports 11,649 new #COVID19 cases, 9,489 discharges, and 90 deaths in the last 24 hours, as per Union Health Ministry
— ANI (@ANI) February 15, 2021
Total cases: 1,09,16,589
Total discharges: 1,06,21,220
Death toll: 1,55,732
Active cases: 1,39,637
Total Vaccination: 82,85,295 pic.twitter.com/KwQGpojV8x
ದೇಶದಲ್ಲಿ ಫೆಬ್ರುವರಿ 15ರ ವೇಳೆಗೆ 1,39,637 ಸಕ್ರಿಯ ಪ್ರಕರಣಗಳು ದಾಖಲಾಗಿದೆ.
ದೇಶದಲ್ಲಿ ಒಟ್ಟು 1,09,16,589 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿದೆ. ಇದುವರೆಗೆ 1,06,21,220 ಮಂದಿ ಬಿಡುಗಡೆ ಹೊಂದಿದ್ದಾರೆ.