Top

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ ಯುವರತ್ನ ಪೋಸ್ಟರ್

ಅಪ್ಪು ಫ್ಯಾನ್ಸ್​ ಹಬ್ಬದ ಸಂಭ್ರಮವನ್ನ ಡಬಲ್​ ಮಾಡೋಕ್ಕೆ ಯುವರತ್ನ ಹೊಸ ಪೋಸ್ಟರ್ ರಿಲೀಸ್

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸ್ತಿದೆ ಯುವರತ್ನ ಪೋಸ್ಟರ್
X

ಯಾವುದೇ ಹಬ್ಬಕ್ಕೆ ಸಿನಿಮಾತಂಡದಿಂದ, ಅಭಿಮಾನಿಗಳಿಗೆ ಉಡುಗೊರೆ ಕೊಡೋದು ವಾಡಿಕೆ. ಸಿನಿಮಾದ ಹೊಸ ಪೋಸ್ಟರ್, ಟೀಸರ್, ಟ್ರೈಲರ್​ಗಳನ್ನ ಬಿಡುಗಡೆ ಮಾಡೋದರ ಮೂಲಕ ಅಭಿಮಾನಿಗಳ ಹಬ್ಬದ ಸಂಭ್ರಮವನ್ನ ಹೆಚ್ಚಿಸ್ತಾರೆ ಚಿತ್ರತಂಡ. ಅದರಂತೆ ಅಪ್ಪು ಫ್ಯಾನ್ಸ್​ ಹಬ್ಬದ ಸಂಭ್ರಮವನ್ನ ಡಬಲ್​ ಮಾಡೋಕ್ಕೆ ಯುವರತ್ನ ಹೊಸ ಪೋಸ್ಟರ್ ರಿಲೀಸ್ ಆಗಿದೆ.

ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಮೋಸ್ಟ್ ಎಕ್ಸ್​ಪೆಕ್ಡೆಡ್​ ಸಿನಿಮಾ ಯುವರತ್ನ. ಇತ್ತೀಚೆಗಷ್ಟೇ ಶೂಟಿಂಗ್​ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ವರ್ಕ್​ನಲ್ಲಿ ಬ್ಯುಸಿಯಾಗಿದೆ ಟೀಂ. ಆದರೆ, ಅಪ್ಪು ಫ್ಯಾನ್ಸ್ ಮಾತ್ರ ಯುವರತ್ನ ಹಾಡುಗಳಿಗೆ ಕಾತುರದಿಂದ ಕಾಯ್ತಾನೇ ಇದ್ದಾರೆ. ಆದರೆ, ಹಾಡುಗಳಿಗೂ ಮುನ್ನ ದಸರಾ ಹಬ್ಬಕ್ಕೆ ಅಪ್ಪು ಬಿಯರ್ಡ್​ ಲುಕ್​ ಪೋಸ್ಟರ್ ಬಿಡುಗಡೆ ಮಾಡೋದಾಗಿ ಹೇಳಿತ್ತು ಯುವರತ್ನ ಟೀಂ.

ಲಾಕ್​ಡೌನ್ ಸಮಯದಲ್ಲಿ ಗಡ್ಡ ಬಿಟ್ಟಿದ್ದ ಪವರ್ ಸ್ಟಾರ್, ಲುಕ್​ ನೋಡಿ ಫಿದಾ ಆಗಿದ್ದ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಇದೇ ಲುಕ್​ನ್ನ ಚಿತ್ರದ ಇಂಟ್ರೋಡಕ್ಷನ್​ ಹಾಡಿಗಾಗಿ ಬಳಸಿಕೊಂಡಿದ್ದು ಗೊತ್ತೇಯಿದೆ. ಇಡೀ ಸಿನಿಮಾದಲ್ಲಿ ಕ್ಲೀನ್​ ಶೇವ್​ ಲುಕ್​ನಲ್ಲಿ ಮಿಂಚೋ ಅಪ್ಪು,ಸಾಂಗ್​ನಲ್ಲಿ ಬಿಯರ್ಡ್​ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಇಂದು ದಸರಾ ಹಬ್ಬಕ್ಕೆ ಪವರ್​ಸ್ಟಾರ್ ಬಿಯರ್ಡ್​ ಲುಕ್​ ಪೋಸ್ಟರ್​ನ್ನ ರಿಲೀಸ್ ಮಾಡಿದೆ ಯುವರತ್ನ ಟೀಂ.

ಸದ್ಯ ಯುವರತ್ನ ಅಡ್ಡದಿಂದ ಒಂದೊಂದೇ ಸ್ಯಾಂಪಲ್​ಗಳು, ಸುದ್ದಿಗಳು ಹೊರ ಬೀಳ್ತಿದ್ದು,ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗ್ತಾನೇ ಇದೆ..ಸದ್ಯ ಪೋಸ್ಟ್ ಪ್ರೊಡಕ್ಷನ್​ ವರ್ಕ್​ನಲ್ಲಿ ಬ್ಯುಸಿಯಿರೋ ಟೀಂ,ಆದಷ್ಟು ಬೇಗ ರಿಲೀಸ್​ ಡೇಟ್​ ಅನೌನ್ಸ್​ ಮಾಡಲಿದ್ದಾರೆ.

Next Story

RELATED STORIES