Top

ಯುವರತ್ನ ಯಾತ್ರೆ ಯಶಸ್ವಿ ಮೂರನೇ ದಿನ

ಯವರತ್ನ ಚಿತ್ರತಂಡದ ರೋಡ್​ ಟ್ರಿಪ್​ ಯಶಸ್ವಿಯಾಗಿ ಮುಗಿದಿದ್ದು, ಸಿನಿಮಾ ರಿಲೀಸ್​ಗೆ ದಿನಗಣನೆ ಶುರುವಾಗಿದೆ.

ಯುವರತ್ನ ಯಾತ್ರೆ ಯಶಸ್ವಿ ಮೂರನೇ ದಿನ
X

ಕಳೆದ 2 ದಿನಗಳಿಂದ ಕರುನಾಡಿನಾದ್ಯಂತ ಯುವರತ್ನ ಯಾತ್ರೆ ಜೋರಾಗೇ ನಡೀತಿದೆ. ಇಂದು ಯುವರತ್ನ ರೋಡ್​ ಟ್ರಿಪ್​ನ ಕೊನೆಯ ದಿನವಾಗಿದ್ದು, ಯಾವ್ಯಾವ ಊರುಗಳಿಗೆ ಭೇಟಿ ಕೊಟ್ಟಿದರು.

ಯುವರತ್ನ ರಿಲೀಸ್​ ಡೇಟ್ ಹತ್ತಿರ ಬರ್ತಾಯಿದೆ. ರಾಜ್ಯಾದ್ಯಂತ ರೋಡ್​ ಟ್ರಿಪ್ ಮುಗಿಸಿ ಬಂದಿದ್ದಾರೆ ಪವರ್ ಸ್ಟಾರ್ . ಊರುಗಳಿಗೆ ಭೇಟಿ ನೀಡಿ, ಅಭಿಮಾನಿ ದೇವರುಗಳನ್ನ ಮಾತನಾಡಿಸಿಕೊಂಡು ಬಂದಿದ್ದಾರೆ ಅಪ್ಪು. ಕಳೆದ 2 ದಿನಗಳಿಂದ ಬಿಡುವಿಲ್ಲದೇ ಸಾಕಷ್ಟು ಜಿಲ್ಲೆಗಳಿಗೆ ಭೇಟಿ ಕೊಟ್ಟು, ಅಭಿಮಾನಿಗಳ ಆತಿಥ್ಯ ಸ್ವೀಕರಿಸಿದ್ದಾರೆ.

ಮಾರ್ಚ್​ 21 ರಿಂದ ಶುರುವಾದ ಯುವರತ್ನ ಯಾತ್ರೆ ಮಾರ್ಚ್​ 23ಕ್ಕೆ ಮುಕ್ತಾಯವಾಗುತ್ತಿದೆ. ಕಳೆದ 2 ದಿನಗಳಿಂದ ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿ ಹಾಗೂ ಬಳ್ಳಾರಿ, ಚಿತ್ರದುರ್ಗ, ತುಮಕೂರಿಗೂ ಭೇಟಿ ನೀಡಿ ಅಭಿಮಾನಿಗಳನ್ನ ಭೇಟಿ ಮಾಡಿದ್ದಾರೆ. ಹೋದ ಕಡೆಯೆಲ್ಲ ಅಪ್ಪು ಫ್ಯಾನ್ಸ್​ ಅದ್ದೂರಿಯಾಗಿ ಸ್ವಾಗತಿಸಿ, ಸಿನಿಮಾ ಬಗ್ಗೆ ಪಾಸಿಟಿವ್​ ರೆಸ್ಪಾನ್ಸ್​ ಕೊಟ್ಟಿದ್ದಾರೆ.

ಮಾರ್ಚ್​ 23, ಯುವಯಾತ್ರೆಯ ಕೊನೆಯ ದಿನವಾಗಿದ್ದು, ಮೈಸೂರು, ಮಂಡ್ಯ, ಅಲ್ಲಿಂದ ರಾಮನಗರ ಬಿಡದಿಗೂ ಭೇಟಿ ನೀಡಿದ್ದಾರೆ.

ಮಾರ್ಚ್​ 23 ಬೆಳಿಗ್ಗೆ 10ಗಂಟೆ ಸುಮಾರಿಗೆ ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಅಭಿಮಾನಿಗಳನ್ನ ಮೀಟ್ ಮಾಡಿದ್ದಾರೆ. ಮೈಸೂರಿನ ಪವರ್ ಫ್ಯಾನ್ಸ್ ಅಪ್ಪುನ ಬೃಹತ್​ ಸೇಬಿನ ಹಾರ ಹಾಕುವ ಮೂಲಕ ವೆಲ್ಕಂ ಮಾಡಿಕೊಂಡಿದ್ದಾರೆ. ಮೂರು ಜೇಸಿಬಿಗಳಿಂದ ಪುಷ್ಪಾರ್ಚನೆ ಮಾಡಿದ್ದಾರೆ ಹಾಗೂ ಡೊಳ್ಳು-ನಗಾರಿ ತಾಳ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

ಮೈಸೂರಿನಿಂದ ಮಂಡ್ಯಾಗೆ ಭೇಟಿ ನೀಡಿ ಮಂಡ್ಯದ ಸಿಲ್ವರ್ ಬುಬ್ಲಿ ಮೈದಾನಕ್ಕೆ ಬಂದಿಳಿದು, ಅಲ್ಲಿಯ ಅಭಿಮಾನದ ಸ್ವಾಗತ ಸೀಕ್ವರಿಸಿದ್ದಾರೆ. ಮಂಡ್ಯದ ಸಂಭ್ರಮಾಚರಣೆ ಹೇಗಿತ್ತು ಅಂತ ನೀವೆ ನೋಡಿ.

ಇನ್ನು ಸಂಜೆ ವೇಳೆಗೆ ರಾಮನಗರ ಮತ್ತು ಬಿಡದಿಯ ಅಭಿಮಾನಿಗಳನ್ನ ಅಪ್ಪು ಭೇಟಿ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಕಂಡು ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಯವರತ್ನ ಚಿತ್ರತಂಡದ ರೋಡ್​ ಟ್ರಿಪ್​ ಯಶಸ್ವಿಯಾಗಿ ಮುಗಿದಿದ್ದು, ಸಿನಿಮಾ ರಿಲೀಸ್​ಗೆ ದಿನಗಣನೆ ಶುರುವಾಗಿದೆ.

Next Story

RELATED STORIES