Top

ಇನ್ನೂ ರಾಬರ್ಟ್​ ರಿಲೀಸ್​ ಡೇಟ್ ಫಿಕ್ಸ್​ ಆಗಿಲ್ಲವೇಕೆ ಗೊತ್ತಾ?

  • ಸ್ಯಾಂಡಲ್​ವುಡ್​ನ ಬಿಗ್​ ಬಜೆಟ್​ ಸಿನಿಮಾ ರಾಬರ್ಟ್​..!
  • ಓಟಿಟಿಯಲ್ಲಿ ರಾಬರ್ಟ್​ ರಿಲೀಸ್​ಗೆ ನಿರ್ಧರಿಸಿದ್ರಾ ಉಮಾಪತಿ..?

ಇನ್ನೂ ರಾಬರ್ಟ್​ ರಿಲೀಸ್​ ಡೇಟ್ ಫಿಕ್ಸ್​ ಆಗಿಲ್ಲವೇಕೆ ಗೊತ್ತಾ?
X

ಸ್ಯಾಂಡಲ್​ವುಡ್​​ನಲ್ಲಿ ಥಿಯೇಟರ್ ಓಪನ್​ ಆಗುತ್ತಿದ್ದ ಹಾಗೇ ತೆರೆಕಾಣುವ ಮೊದಲ ಸಿನಿಮಾ ರಾಬರ್ಟ್​ ಅಂತ್ಲೇ ಎಲ್ರೂ ಫಿಕ್ಸ್​ ಆಗಿದರು. ಆದರೆ ಈಗ ಬೇರೆ ಸಿನಿಮಾಗಳ ರಿಲೀಸ್​ ಡೇಟ್ ಅನೌನ್ಸ್​ ಆಗುತ್ತಿದ್ರೂ, ರಾಬರ್ಟ್​ ಬಿಡುಗಡೆ ಬಗ್ಗೆ ಮಾತೇ ಆಡುತ್ತಿಲ್ಲ ಚಿತ್ರತಂಡ. ಹಾಗಾದ್ರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಏನ್​ ನಿರ್ಧಾರ ಮಾಡಿದ್ದಾರೆ. ರಾಬರ್ಟ್​ ದರ್ಶನ್​ ಥಿಯೇಟರ್​ನಲ್ಲಿ ಆಗುತ್ತಾ(?)ಅಥವಾ ಓಟಿಟಿಯಲ್ಲಾ ಅನ್ನೋ ಪ್ರಶ್ನೆ ಎದ್ದಿದೆ.

ಸ್ಯಾಂಡಲ್​ವುಡ್​ ಮೋಸ್ಟ್​ ಎಕ್ಸ್​ಪೆಕ್ಡೆಡ್​ ಅಂಡ್ ಬಿಗ್​ ಬಜೆಟ್ ಸಿನಿಮಾ ರಾಬರ್ಟ್​. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇಷ್ಟು ಹೊತ್ತಿಗೆ ಸಿನಿಮಾ ರಿಲೀಸ್​ ಆಗ್ಬೇಕಿತ್ತು. ಆದರೆ, ಕೊರೊನಾ ಮತ್ತು ಲಾಕ್​ಡೌನ್​ ಇದಕ್ಕೆಲ್ಲಾ ಬ್ರೇಕ್​ ಹಾಕಿತ್ತು. ಆದರೆ, ಅಕ್ಟೋಬರ್​ 15ಕ್ಕೆ ಅದ್ಯಾವಾಗ ಥೀಯೇಟರ್ ಓಪನ್​ ಆಯ್ತೋ ಅಂದಿನಿಂದ ಇಂದಿನವರೆಗೂ ರಾಬರ್ಟ್​ ರಿಲೀಸ್​ಗಾಗಿ ಕಾಯ್ತಿದ್ದಾರೆ ಅಭಿಮಾನಿಗಳು.

ಈ ಮಧ್ಯ ಕನ್ನಡದ ದೊಡ್ಡ ಸಿನಿಮಾಗಳ ನಿರ್ಮಾಪಕರೆಲ್ಲಾ ಸಭೆ ಸೇರಿ, ಯಾವ ಸಿನಿಮಾ ನಂತ್ರ ಯಾವ ಸಿನಿಮಾ ತೆರೆ ಕಾಣಬೇಕು ಅನ್ನೋ ಪ್ಲಾನ್​ ಮಾಡಿಕೊಂಡಿದರು. ಪ್ಲಾನ್​ ಪ್ರಕಾರ ರಾಬರ್ಟ್​ ಮೊದಲು ರಿಲೀಸ್​ ಆಗೋ ಸಿದ್ಧತೆ ನಡೆದಿತ್ತು. ಆದರೆ, ಇದೀಗ ಎಲ್ಲರೂ ರಿಲೀಸ್​ ಡೇಟ್​ ಅನೌನ್ಸ್​ ಮಾಡುತ್ತಿದ್ದಾರೆ. ಜನವರಿ 29 ಪೊಗರು, ಏಪ್ರಿಲ್ 1 ಯುವರತ್ನ, ಏಪ್ರಿಲ್ 23 ಕೋಟಿಗೊಬ್ಬ 3, ಹೀಗೆ ಸಾಲು ಸಾಲು ಚಿತ್ರಗಳು ತೆರೆಗೆ ಬರೋಕ್ಕೆ ಸಿದ್ಧವಾಗುತ್ತಿದೆ. ಆದರೆ, ರಾಬರ್ಟ್​ ರಿಲೀಸ್​ ಡೇಟ್ ಬಗ್ಗೆ ಯಾವ ಮಾಹಿತಿಯೂ ಇಲ್ಲ.

ಸದ್ಯ ಈ ಬಗ್ಗೆ ಸ್ವತಃ ರಾಬರ್ಟ್​ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಟಿವಿ5 ಗೆ ಮಾಹಿತಿ ನೀಡಿದ್ದು, ಥಿಯೇಟರ್​​​​​ಗಳು ಮತ್ತು ಡಿಸ್ಟ್ರಿಬ್ಯೂಟರ್​ಗಳ ಸಮಸ್ಯೆ ಮತ್ತು ಗೊಂದಲಗಳಿಂದ ರಾಬರ್ಟ್​ ರಿಲೀಸ್​​ ಡೇಟ್​ಅ​ನ್ನ ಫಿಕ್ಸ್​ ಮಾಡೋಕ್ಕೆ ಕೊಂಚ ಸಮಯ ಹಿಡಿದಿತ್ತು. ಆದರೆ ಈಗ ಮಾರ್ಚ್​ ಅಥವಾ ಏಪ್ರಿಲ್​ನಲ್ಲಿ ಯಾವ ಸಿನಿಮಾ ಬರಲಿ, ಬರದೇ ಇರಲಿ, ರಾಬರ್ಟ್​ ದರ್ಶನವಂತೂ ಫಿಕ್ಸ್​ ಅಂತಿದ್ದಾರೆ. ಆದರೆ, ಒಂದು ಕಡೆ ಥಿಯೇಟರ್ ರಿಲೀಸ್ ಪ್ಲಾನ್​ ಮಾಡುತ್ತಿರೋ ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಮತ್ತೊಂದು ಆಪ್ಶನ್​ ಕೂಡ ಇಟ್ಕೊಂಡಿದ್ದಾರೆ. ಅದೇ ಓಟಿಟಿ ಪ್ಲಾಟ್​​ಫಾರ್ಮ್​.

ರಾಬರ್ಟ್​ ಚಿತ್ರವನ್ನ ಥಿಯೇಟರ್​ನಲ್ಲಿ ರಿಲೀಸ್​ ಮಾಡೋ ಪ್ಲಾನ್​ ಒಂದುಕಡೆಯಾದ್ರೆ, ಹೆಚ್ಚು ಕಾನ್ಸಂಟ್ರೇಟ್ ಮಾಡ್ತಿರೋದು ಓಟಿಟಿ ಕಡೆ. ಈ ಹಿಂದೆ ಸಾಕಷ್ಟು ಓಟಿಟಿ ಸಂಸ್ಥೆಗಳು ರಾಬರ್ಟ್​ ಸಿನಿಮಾ ಖರೀದಿಗಾಗಿ ಮುಗಿಬಿದ್ದಿದ್ವು. ಈಗಲೂ ಆಫರ್​ಗಳು ಹಾಗೆಯೇ ಇದೆ..ಹಾಗಾಗಿ 75 ಪರ್ಸೆಂಟ್ ಗಮನ ಓಟಿಟಿ ಕಡೆ ಹರಿಸ್ತಿದ್ದಾರೆ ರಾಬರ್ಟ್​ ಚಿತ್ರತಂಡ.

ಒಂದು ವೇಳೆ ಓಟಿಟಿಯಲ್ಲಿ ರಾಬರ್ಟ್​ ಸಿನಿಮಾ ರಿಲೀಸ್ ಆಗಿದ್ದೇ ಆದರೆ, ಡಿಫ್ಯಾನ್ಸ್​ ಸಂಬ್ರಮಕ್ಕೆ ಬ್ರೇಕ್​ ಬಿಳೋದಂತೂ ಗ್ಯಾರೆಂಟಿ. ಆದರೆ, ಸದ್ಯದ ಪರಿಸ್ಥಿತಿಗಳನ್ನ ಗಮನದಲ್ಲಿಟ್ಟುಕೊಂಡು, ನಿರ್ಮಾಪಕರ ಸ್ಥಾನದಲ್ಲಿ ನಿಂತು ನೋಡಿದ್ರೆ, ಓಟಿಟಿಯಲ್ಲೇ ಸಿನಿಮ ರಿಲೀಶ್ ಮಾಡೋದು ಒಳಿತು ಅಂತಿದ್ದಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್. ಇನ್ನು ರಾಬರ್ಟ್​ ಯಾವುದೇ ವೇದಿಕೆಯಲ್ಲಿ ರಿಲೀಸ್​ ಆದ್ರೂ ಡಿ ಫ್ಯಾನ್ಸ್​ ಅಪ್ಪಿ ಒಪ್ಪಿಕೊಳ್ತಾರೆ ಅನ್ನೋ ನಂಬಿಕೆ ನಿರ್ಮಾಪಕರದ್ದು.

Next Story

RELATED STORIES