Top

ಸಾರಿಗೆ ನೌಕರರ ಹೋರಾಟಕ್ಕೆ ರಾಕಿಂಗ್​ ಸ್ಟಾರ್​ ಬೆಂಬಲ

ಸಾರಿಗೆ ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಯಶ್​ ಭರವಸೆ

ಸಾರಿಗೆ ನೌಕರರ ಹೋರಾಟಕ್ಕೆ ರಾಕಿಂಗ್​ ಸ್ಟಾರ್​ ಬೆಂಬಲ
X

ಬೆಂಗಳೂರು: ಸತತ 9ದಿನಗಳಿಂದ ಸಾರಿಗೆ ನೌಕರರು ಸರ್ಕಾರ ವಿರುದ್ಧ ಮುಷ್ಕರ ನಡೆಸುತ್ತಿದ್ದು, ಸರ್ಕಾರ ಮಾತ್ರ ನೌಕರರ ಹೋರಾಟಕ್ಕೆ ಸರಿಯಾದ ರೀತಿ ಸ್ಪಂದನೆ ನೀಡದೆ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸದ್ಯ ರಾಕಿಂಗ್​ ಸ್ಟಾರ್​ ಯಶ್​ ಸಾರಿಗೆ ನೌಕರರ ಹೋರಾಟಕ್ಕೆ ಸಾಥ್​ ನೀಡಿದ್ದು, ಈ ಬಗ್ಗೆ ಸಾರಿಗೆ ಸಚಿವರೊಂದಿಗೆ ಮಾತನಾಡಿ ಸಮಸ್ಯೆಗಳ ಮನವರಿಕೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಯಶ್,​ ಇಂದು ಯಶ್​ ಏನೇ ಆಗಿರಬಹುದು ಆದರೆ ಅದಕ್ಕೂ ಮೊದಲು ಸಾರಿಗೆ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ. ಸಾರಿಗೆ ನೌಕರರ ಸಮಸ್ಯೆಗಳ ನಾನು ಹತ್ತಿರದಿಂದ ಕಂಡಿದ್ದೇನೆ. ಇದು ನನ್ನ ಅಪ್ಪನ ಕಥೆ ಮಾತ್ರಅಲ್ಲ ಸಾವಿರಾರು ನೌಕರರ ಭವಿಷ್ಯ ಇದೆ. ಸಾರಿಗೆ ನೌಕರರ ಸಂಬಳ ತಾರತಮ್ಯ ಇರಬಹುದು, ರಜೆಗಾಗಿ ತಕರಾರು ಇರಬಹುದು, ಓವರ್ ಡ್ಯೂಟಿ ಜಟಪಟಿ ಇರಬಹುದು ಇವೆಲ್ಲವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ಈ ಬಗ್ಗೆ ಸಾರಿಗೆ ಸಚಿವರೊಂದಿಗೆ ಮಾತನಾಡಿ ಸಮಸ್ಯೆಗಳ ಮನವರಿಕೆ ಮಾಡುತ್ತೇನೆ ಎಂಬ ಭರವಸೆ ನೀಡಿದ್ದಾರೆ.

ಇನ್ನು ಸತತ 9ದಿನಗಳಿಂದ ಮುಷ್ಕರ ನಡೆಸುತ್ತಿರುವ ನೌಕರರು ಇಂದು ವಿಭಿನ್ನ ಪ್ರತಿಭಟನೆಗೆ ಮುಂದಾಗಿದ್ದು, ಸಂಜೆ ಆರು ಗಂಟೆಗೆ ಮೇಣದ ಬತ್ತಿ ಬೆಳಗಿಸಿ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಲು ಸಿದ್ಧರಾಗಿದ್ದಾರೆ.

Next Story

RELATED STORIES