Top

SPBಗಾಗಿ ಒಂದೇ ವೇದಿಕೆಯಲ್ಲಿ ಇಡೀ ಸ್ಯಾಂಡಲ್​ವುಡ್

ಕರ್ನಾಟಕದ ದತ್ತುಪುತ್ರ ಎಸ್​ಪಿಬಿ ಬೇಗ ಚೇತರಿಸಿಕೊಳ್ಳಲಿ ಎಂದು ಅಂಬರೀಷ್​ ಆಡಿಟೋರಿಯಂನಲ್ಲಿ ಸೆ.​3ರಂದು ಚಿತ್ರರಂಗದವರೆಲ್ಲಾ ಸೇರಿ​ ಪ್ರಾರ್ಥನೆ.

SPBಗಾಗಿ ಒಂದೇ ವೇದಿಕೆಯಲ್ಲಿ ಇಡೀ ಸ್ಯಾಂಡಲ್​ವುಡ್
X

ಇಪ್ಪತ್ತೈದು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ‌ ಡಾ.ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದೆ. ಬಾಲು ಆದಷ್ಟು ಬೇಗ ಸಂಪೂರ್ಣವಾಗಿ ಚೇತರಿಸಿಕೊಂಡು ಬರಬೇಕು, ಮತ್ತಷ್ಟು ಹಾಡನ್ನ ಹಾಡಬೇಕು ಅಂತ ಅಭಿಮಾನಿಮಾಗಳು ಮತ್ತು ಆಪ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇದೀಗ ಇಡೀ ಸ್ಯಾಂಡಲ್​ವುಡ್ ಎಸ್​​ಪಿಬಿಗಾಗಿ ಒಂದಾಗುತ್ತಿದೆ.

ಭಾರತದ ಸುಪ್ರಸಿದ್ಧ ಹಿನ್ನಲೆ ಗಾಯಕ ಎಸ್​.ಪಿ ಬಾಲಸುಬ್ರಮಣ್ಯಂ ಕೊರೊನಾ ಸೋಂಕಿನಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಾಲು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದರು. ನೆಚ್ಚಿನ ಗಾಯಕ ಬೇಗ ಗುಣಮುಖರಾಗಬೇಕು ಅಂತ ಸೋಷಿಯಲ್​ ಮೀಡಿಯಾದಲ್ಲಿ ಪ್ರಾರ್ಥಿಸುತ್ತಿದ್ದಾರೆ. ಎಲ್ಲರ ಪ್ರಾರ್ಥನೆ ಫಲವಾಗಿ ಸದ್ಯ ಎಸ್​ಪಿಬಿ ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.

ಕೊರೋನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಎಸ್​​ಪಿಬಿ ‌ಕಳೆದ ಹಲವು ದಿನಗಳಿಂದ ಶ್ವಾಸ ಕೋಶ ಸಮಸ್ಯೆ ಕಾಣಿಸಿಕೊಂಡು ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಎಸ್​ಪಿಬಿ ಆರೋಗ್ಯದ ಬಗ್ಗೆ ಅವರ ಪುತ್ರ ಚರಣ್ ಮಾಹಿತಿ ನೀಡುತ್ತಾ ಬರ್ತಿದ್ದಾರೆ. ನಿಧಾನವಾಗಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ವಾರ ಎಸ್​​ಪಿಬಿ ಶೀಘ್ರ ಚೇತರಿಕೆಗಾಗಿ ಚಿತ್ರರಂಗದ ಕೆಲವರು ಸಾಮೂಹಿಕ ಪ್ರಾರ್ಥನೆಗೆ ಕರೆ ಕೊಟ್ಟಿದ್ದರು. ಸಂಗೀತ ಸಾಮ್ರಾಟ ಬೇಗ ಚೇತರಿಸಿಕೊಳ್ಳಲಿ ಅಂತ ಕಳೆದ ಅಭಿಮಾನಿಗಳೆಲ್ಲಾ ತಾವಿದ್ದಲಿಯೇ ಎಸ್​ಪಿಬಿ ಹಾಡು ಪ್ಲೇ ಮಾಡಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು.

ಇನ್ನು ಶಬರಿಮಲೆ ದೇವಸ್ಥಾನ ಮಂಡಳಿ ಕೂಡ ಬಾಲು ಬೇಗ ಗುಣಮುಖರಾಗಲಿ ಎಂದು ಸ್ವಯಂ ಪ್ರೇರಿತರಾಗಿ ವಿಶೇಷ ಪೂಜೆ ಸಲ್ಲಿಸಿತ್ತು. ಇದೆಲ್ಲದರ ಫಲ ಅನ್ನುವಂತೆ ಕಳೆದ ವಾರಕ್ಕಿಂತ ಈ ವಾರ ಎಸ್​ಪಿಬಿ ಆರೋಗ್ಯ ಸ್ಥಿತಿ ಸುಧಾರಿಸಿದೆ. ಇದೀಗ ಇಡೀ ಸ್ಯಾಂಡಲ್​ವುಡ್​ ಎಸ್​ಪಿಬಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಮುಂದಾಗಿದೆ. ಈ ವಿಚಾರವನ್ನ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​​​ ತಿಳಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಎಸ್​ಪಿಬಿ ಕೊಡೊಗೆ ಅಪಾರ. ಸಾವಿರಾರು ಕನ್ನಡ ಹಾಡುಗಳನ್ನ ಹಾಡಿ, ಕನ್ನಡಿಗರ ಮನ ಗೆದ್ದಿದ್ದಾರೆ. ಕರ್ನಾಟಕದ ದತ್ತುಪುತ್ರ ಎಸ್​ಪಿಬಿ ಬೇಗ ಚೇತರಿಸಿಕೊಳ್ಳಲಿ ಎಂದು ಅಂಬರೀಷ್​ ಆಡಿಟೋರಿಯಂನಲ್ಲಿ ಸೆಪ್ಟೆಂಬರ್​ 3ರಂದು ಚಿತ್ರರಂಗದವರೆಲ್ಲಾ ಸೇರಿ​ ಪ್ರಾರ್ಥನೆ ಸಲ್ಲಿಸಲು ನಿರ್ಧರಿಸಿದ್ದಾರೆ.

ಎಸ್​​ಪಿ ಬಾಲಸುಬ್ರಮಣ್ಯಂ ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಅಭಿಮಾನಿಗಳ ಹಾರೈಕೆ ಫಲಿಸಲಿ.. ಮತ್ತೆ ನೂರಾರು ಹಾಡುಗಳಿಗೆ ದನಿಯಾಗಲಿ ಅಂತ ಹಾರೈಸೋಣ.

Next Story

RELATED STORIES