Top

ನಮ್ಮ ಜವಾಬ್ದಾರಿಯನ್ನ ನಾವು ನಿಭಾಯಿಸಿದ್ರೆ ಲಾಕ್​ಡೌನ್ ಪ್ರಶ್ನೆ ಬರೋಲ್ಲ

ವರನಟ ಡಾ.ರಾಜ್​ಕುಮಾರ್ ಅವರ ಪುಣ್ಯಸ್ಮರಣೆ ಹಿನ್ನೆಲೆ ಕುಟುಂಬ ಸಮೇತ ಕಂಠೀರವ ಸ್ಟುಡಿಯೋನಲ್ಲಿರುವ ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದರು.

ನಮ್ಮ ಜವಾಬ್ದಾರಿಯನ್ನ ನಾವು ನಿಭಾಯಿಸಿದ್ರೆ ಲಾಕ್​ಡೌನ್ ಪ್ರಶ್ನೆ ಬರೋಲ್ಲ
X

ಬೆಂಗಳೂರು: ಅಪ್ಪಾಜಿ ಅಗಲಿ 15 ವರ್ಷ ಆಯ್ತು. ಕಳೆದ ವರ್ಷವೂ ಕೊರೊನಾ ಇತ್ತು. ಈ ವರ್ಷವೂ ಅದೇ ತರ ಆಗಿದೆ. ಹೀಗಾಗಿ ಆಡಂಬರ ಬೇಡ ಎಂದು ಚಂದನವನದ ಸ್ಟಾರ್​ ನಟ ಶಿವರಾಜ್​ಕುಮಾರ್ ಅವರು ಹೇಳಿದರು.

ಏಪ್ರಿಲ್​ 12ರಂದು (ಇಂದು) ವರನಟ ಡಾ.ರಾಜ್​ಕುಮಾರ್ ಅವರ ಪುಣ್ಯಸ್ಮರಣೆ ಹಿನ್ನೆಲೆ ದೊಡ್ಡಮನೆಯವರು ಕುಟುಂಬ ಸಮೇತ ಕಂಠೀರವ ಸ್ಟುಡಿಯೋನಲ್ಲಿರುವ ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದರು.


ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಶಿವಣ್ಣ, ಸರಳವಾಗಿ ಪೂಜೆ ಮಾಡಬೇಕು ಅಂತ ನಿರ್ಧಾರವಾಗಿತ್ತು. ಅಭಿಮಾನಿಗಳು ಹುಷಾರಾಗಿರಬೇಕು. ಎಲ್ಲರಿಗೂ ಕುಟುಂಬವಿದೆ. ಮಾಸ್ಕ್ ಹಾಕಿಕೊಂಡು ಓಡಾಡೋದನ್ನ ಮರೆಯಬೇಡಿ. ಮೈ ಮರೆತ ಮತ್ತೆ ಸಂಕಂಷ್ಟದಿನಗಳನ್ನ ಎದುರಿಸೋದು ಬೇಡ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದರು.

ಇನ್ನು ಯುಗಾದಿಯ ಮೊದಲು ಅಪ್ಪಾಜಿ ಪೂಜೆ ಮಾಡೋ ದಿನ ಬಂದಿದೆ. ಯುಗಾದಿ ಹಬ್ಬವನ್ನ ನಾವು ಸಡಗರದಿಂದಲೇ ಆಚರಿಸುತ್ತೇವೆ ಎಂದು ಹೇಳಿದರು.


ಮತ್ತೆ ಲಾಕ್​ಡೌನ್​ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಂದು ವರ್ಷ ಕಷ್ಟಪಟ್ಟಿದ್ದೇವೆ. ಮತ್ತೆ ಕಷ್ಟ ಪಡೋದು ಬೇಡ. ಲಾಕ್​ಡೌನ್ ಅನ್ನೋದು ಬರೋದು ಬೇಡ. ಆ ತರ ಎಚ್ಚರವನ್ನ ನಾವು ವಹಿಸೋಣ. ನಮ್ಮ ಜವಾಬ್ಧಾರಿಯನ್ನ ನಾವು ನಿಭಾಯಿಸಿದ್ರೆ ಲಾಕ್​ಡೌನ್ ಪ್ರಶ್ನೆ ಬರೋಲ್ಲ, ಎಷ್ಟು ವರ್ಷ ಅಂತ ಇದನ್ನು ತಳ್ಳಿಕೊಂಡು ಹೋಗೋಕೆ ಆಗುತ್ತೆ. ಆ ತರದ ಪರಿಸ್ಥಿತಿ ಬರೋದು ಬೇಡ ಎಂದು ನಟ ಶಿವರಾಜ್​ಕುಮಾರ್ ಅವರು ಮಾತನಾಡಿದರು.

Next Story

RELATED STORIES