Top

'800' ಸಿನಿಮಾದಿಂದ ಹೊರನಡೆದ ವಿಜಯ್​ ಸೇತುಪತಿ

ಮುತ್ತಯ್ಯ ಮುರುಳೀಧರನ್ ಜೀವನಾಧರಿತ ಚಿತ್ರ 800ನಿಂದ ವಿಜಯ್​ ಕಾಲಿವುಡ್​ ಸ್ಟಾರ್​ ನಟ ಸೇತುಪತಿ ಹೊರ ನಡೆದಿದ್ದಾರೆ.

800 ಸಿನಿಮಾದಿಂದ ಹೊರನಡೆದ ವಿಜಯ್​ ಸೇತುಪತಿ
X

ಕಾಲಿವುಡ್​ನಲ್ಲಿ ಬಹುನಿರೀಕ್ಷೆಯ ಜೊತೆಗೆ ವಿವಾದ ಸೃಷ್ಟಿಸಿದ್ದ ಸಿನಿಮಾ 800. ಒಂದಷ್ಟು ವಿವಾದಗಳ ಜೊತೆಗೆ ಸಿನಿಮಾ ಮಾಡಲು ಮುಂದಾಗಿದ್ದ ವಿಜಯ ಸೇತುಪತಿ ಇದೀಗ ಚಿತ್ರದಿಂದ ಹೊರಬಂದಿದ್ದಾರೆ. ಇದಕ್ಕೆ ಕಾರಣ ಸ್ವತಃ ಮುತ್ತಯ್ಯ ಮುರಳಿಧರನ್​ರ ಆ ಪತ್ರ ಬರೆದಿದ್ದಾರೆ.

ಮುತ್ತಯ್ಯ ಮುರುಳೀಧರನ್ ಜೀವನಾಧರಿತ ಚಿತ್ರ 800ನಿಂದ ವಿಜಯ್​ ಕಾಲಿವುಡ್​ ಸ್ಟಾರ್​ ನಟ ಸೇತುಪತಿ ಹೊರ ನಡೆದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಟ ವಿಜಯ್ ಸೇತುಪತಿ, ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್‍ನಲ್ಲಿ ನಟಿಸುವುದು ಖಚಿತವಾಗಿತ್ತು. ಇದರ ಬೆನ್ನಲ್ಲೇ ಚಿತ್ರತಂಡ ಸಿನಿಮಾ ಮೋಷನ್ ಪೋಸ್ಟರ್ ಕೂಡ ಬಿಡುಗಡೆ ಮಾಡಿತ್ತು. ಆದರೆ, ಸೋಮವಾರ ಸಿನಿಮಾದಿಂದ ನಟ ವಿಜಯ್ ಸೇತುಪತಿ ಸಿನಿಮಾದಿಂದ ಹೊರ ನಡೆಯಲು ನಿರ್ಧರಿಸಿದ್ದಾರೆ.

ಮುರಳೀಧರನ್ ಬಯೋಪಿಕ್‍ನಲ್ಲಿ ವಿಜಯ್ ಸೇತುಪತಿ ನಟಿಸುತ್ತಿರುವುದು ಖಚಿತವಾಗುತ್ತಿದಂತೆ ತಮಿಳುನಾಡಿನಲ್ಲಿ ಹೊಸ ವಿವಾದ ಸೃಷ್ಟಿಯಾಗಿತ್ತು. 2009ರಲ್ಲಿ ಮುರಳೀಧರನ್ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ವಿಜಯ್ ಸೇತುಪತಿ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದರು.

ವಿವಾದ ಭುಗಿಲೇಳುತ್ತಿದ್ದಂತೆ ಮುರುಳೀಧರನ್ ವಿಜಯ್ ಸೇತುಪತಿಗೆ ಪತ್ರ ಬರೆದಿದರು. ಸುಧೀರ್ಘ ಪತ್ರದಲ್ಲಿ ತನ್ನ ಕಾರಣದಿಂದ ನಟ ವಿಜಯ್ ಸೇತುಪತಿ ಭವಿಷ್ಯದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಬಾರದು ಅಂತ ಬರೆದಿದರು. ತಮಿಳುನಾಡಿನ ಅತ್ಯುತ್ತಮ ನಟರೊಬ್ಬರು ಯಾವುದೇ ರೀತಿಯ ತೊಂದರೆ ಎದುರಿಸುವುದನ್ನು ನಾನು ಬಯಸುವುದಿಲ್ಲ. ಹಾಗಾಗಿ ವಿಜಯ್ ಈ ಸಿನಿಮಾ ಮಾಡದಂತೆ ಮನವಿ ಮಾಡಿಕೊಳ್ಳುತ್ತೇನೆ ಅಂತ ಮುರುಳೀಧರನ್ ಪತ್ರ ಬರೆದಿದರು.

ಮುರುಳೀಧರನ್ ಮನವಿಗೆ ಸ್ಪಂದಿಸಿದ ವಿಜಯ್​ ಸೇತುಪತಿ ಕೊನೆಗೂ ಸಿನಿಮಾದಿಂದ ಹೊರ ಬರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಟ್ವಿಟ್​ ಮಾಡಿರುವ ಅವರು thank you anf good bye ಅಂತ ಟ್ವಿಟ್​ ಮಾಡಿದ್ದಾರೆ. 2009ರಲ್ಲಿ ಶ್ರೀಲಂಕಾ ಸೇನೆ ಸಾಕಷ್ಟು ತಮಿಳಿಗರನ್ನು ಹತ್ಯೆ ಮಾಡಿತ್ತು. ಆದರೆ, ಮುತ್ತಯ್ಯ ಅವರು ಮೂಲತಃ ತಮಿಳು ಭಾಷಿಕರಾಗಿದ್ದರೂ, ಲಂಕಾ ಸರ್ಕಾರದ ಪರವಾಗಿ ಮಾತನಾಡಿದ್ದರು ಎಂಬ ಆರೋಪಗಳು ಕೇಳಿ ಬಂದಿತ್ತು. ಅಷ್ಟೆಯಲ್ಲ ಅಂದಿನ ಶ್ರೀಲಂಕಾ ಪ್ರಧಾನಿ ರಾಜಪಕ್ಷೆಯನ್ನ ಮುರುಳೀಧರನ್ ಸಮರ್ಥಿಸಿಕೊಂಡಿದರು. ಹೀಗಾಗಿ ಯಾವುದೇ ಕಾರಣಕ್ಕೂ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಬಾರದು ಅಂತ ಅಭಿಯಾನ ಶುರುವಾಗಿತ್ತು.

ಹಲವು ಗೊಂದಲಗಳ ಬಳಿಕ ಇದೀಗ ವಿಜಯ್​ ಸೇತುಪತಿ 800 ಸಿನಿಮಾದಿಂದ ಹೊರನಡೆದಿದ್ದಾರೆ. ಮುಂದೆ ಈ ಸಿನಿಮಾ ಮುಂದುವರಿಯುತ್ತಾ. ಮುಂದುವರಿದ್ರೆ ಯಾರು ನಾಯಕನಾಗಿ ನಟಿಸ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

Next Story

RELATED STORIES