Top

'ಸಲಗ'ಕ್ಕೂ ಮುನ್ನ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್​ ತೊಟ್ಟ ವಿಜಯ್

‘ಮಾಸ್​ ಹೀರೋ’ ಮೈಂಡಲ್ಲಿ ಅರಳುತ್ತಿದೆ ಸುಂದರ ‘ಪ್ರೇಮ ಕಾವ್ಯ’

ಸಲಗಕ್ಕೂ ಮುನ್ನ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್​ ತೊಟ್ಟ ವಿಜಯ್
X

ಸ್ಯಾಂಡಲ್​​ವುಡ್​ನ ಮಾಸ್ ಹೀರೋ ದುನಿಯಾ ವಿಜಯ್​ ಸಿನಿಮಾಗಳು ಅಂದಾಕ್ಷಣ ನೆನಪಾಗೋದೇ ಲಾಂಗ್​, ಮಚ್ಚು, ಆ್ಯಕ್ಷನ್. ಆದರೆ, ಅದ್ಯಾಕೋ ವಿಜಿಗೆ ಈ ಬಾರಿ ಲವ್​ ಸ್ಟೋರಿ ಮೇಲೆ ಲವ್ವಾಗಿದೆ. ಹಾಗಂತ ಇದು ದುನಿಯಾ ವಿಜಿ ಆ್ಯಕ್ಟ್​ ಮಾಡುತ್ತಿರೋ ಸಿನಿಮಾ ಅಲ್ಲ. ಡೈರೆಕ್ಟ್ ಮಾಡುತ್ತಿರೋ ಸಿನಿಮಾ.

ಸ್ಯಾಂಡಲ್​ವುಡ್​ ಕರಿಚಿರತೆ ದುನಿಯಾ ವಿಜಯ್​ ಫಸ್ಟ್​ ಟೈಮ್​ ಸಲಗ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳ್ತಾರೆ ಅಂದಾಗ ಎಲ್ರೂ ಸರ್ಪ್ರೈಸ್​ ಆಗಿದ್ರು. ಆ ನಂತರ ಚಿತ್ರದ ಸ್ಯಾಂಪಲ್ಸ್​, ಮೇಕಿಂಗ್ ನೋಡಿ ವಿಜಿಯ್​ ಆ್ಯಕ್ಟಿಂಗ್​ ಮಾತ್ರವಲ್ದೆ ನಿರ್ದೇಶನಕ್ಕೂ ಸೈ ಅಂತ ಅನ್ನಿಸಿಕೊಂಡ್ರು.ಈಗಾಗಲೇ ಸಲಗ ಚಿತ್ರ ಟೀಸರ್, ಸಾಂಗ್ಸ್​ನಿಂದ ಸಖತ್​ ಸೌಂಡ್ ಮಾಡುತ್ತಿದೆ. ಸಿನಿಮಾ ಮೇಲೆ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಯಾವಾಗ ಸಲಗನ ದರ್ಶನ ಅಂತ ಆಡಿಯನ್ಸ್ ಕಾಯ್ತಿದ್ದಾರೆ. ಆದರೆ, ಅದಕ್ಕೂ ಮುನ್ನವೇ ದುನಿಯಾ ವಿಜಿ ಮತ್ತೊಂದು ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ.

ದುನಿಯಾ ವಿಜಯ್​ ಸಿನಿಮಾಗಳು ಅಂದಾಕ್ಷಣ ನೆನಪಾಗೋದೇ ಮಾಸ್, ಆಕ್ಷನ್. ಇನ್ನು ವಿಜಿ ನಿರ್ದಶನದ ಸಿನಿಮಾ ಸಲಗ ಕೂಡ ಔಟ್​ ಅಂಡ್​ ಔಟ್ ಆ್ಯಕ್ಷನ್​ ಸಿನಿಮಾ. ಆದರೆ, ಆದ್ಯಾಕೋ ಈ ಬಾರಿ ವಿಜಯ್​ ಅವರಿಗೆ ಲವ್​ ಸ್ಟೋರಿ ಮೇಲೆ ಮನಸಾಗಿದೆ. ದುನಿಯಾ ವಿಜಿ ಮುಂದಿನ ಸಿನಿಮಾ ಅಪ್ಪಟ ಪ್ರೇಮಕಥೆ. ಹಾಗಂತ ಈ ಸಿನಿಮಾದಲ್ಲಿ ವಿಜಿ ಆ್ಯಕ್ಟ್ ಮಾಡ್ತಾ ಇಲ್ಲ ಬದಲಾಗಿ ನಿರ್ದೇಶನ ಮಾಡುತ್ತಿದ್ದಾರೆ.

ಸಲಗ ಸಿನಿಮಾ ನಿರ್ದೇಶನದ ನಂತರ ವಿಜಯ್​ಗೆ ನಿರ್ದೇಶನದತ್ತ ಒಲವಾಗಿದೆ. ಲಾಕ್​ಡೌನ್​ನಲ್ಲಿ ಸಿನಿಮಾ ಚಟುವಟಿಕೆಗಳಿಲ್ಲದೇ ಸಿನಿಮಾ ಸ್ಟಾರ್ಗಳು ಮನೆಯಲ್ಲಿಯೇ ಕಾಲ ಕಳೆಯೋ ಹಾಗಾಗಿತ್ತು. ಆದರೆ, ದುನಿಯಾ ವಿಜಯ್​ ಆ ಟೈಮ್​ನ್ನು ವೇಸ್ಟ್​ ಮಾಡದೇ ಮನೆಯಲ್ಲಿ ಕೂತು ಹೊಸ ಚಿತ್ರದ ಸ್ಕ್ರಿಪ್ಟ್ ಬರೆದಿದ್ದಾರೆ. ಅದ್ಬುತ ಪ್ರೇಮಕಥೆ ತೆರೆಗೆ ತರೋ ಸಿದ್ಧತೆ ಮಾಡಿಕೊಂಡಿದ್ದಾರೆ.

ಮೊದಲೇ ಹೇಳಿದ ಹಾಗೇ ಈ ಕಥೆಯಲ್ಲಿ ದುನಿಯಾ ವಿಜಿ ಬಣ್ಣ ಹಚ್ತಿಲ್ಲ. ಬದಲಾಗಿ ಬೇರೆ ಕಲಾವಿದರಿಗೆ ಆ್ಯಕ್ಷನ್​ ಕಟ್ ಹೇಳಲಿದ್ದಾರೆ. ಮಾಹಿತಿ ಪ್ರಕಾರ ಹೊಸ ನಟನಟಿಯರನ್ನ ಲಾಂಚ್ ಮಾಡುವ ಯೋಚನೆಯಲ್ಲಿದ್ದಾರಂತೆ. ಹಾಗಾದ್ರೆ ಚಿತ್ರದಲ್ಲಿ ನಾಯಕ ನಾಯಕಿ ಯಾರಾಗಬಹುದು ಅನ್ನೋ ಕುತೂಹಲವಂತೂ ಇದ್ದೇ ಇದೆ. ಅಷ್ಟೇ ಅಲ್ಲಾ ಚಿತ್ರದಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಘಟಾನುಘಟಿ ಸ್ಟಾರ್​ ಕಲಾವಿದರು ಇರಲಿದ್ದಾರೆ ಅನ್ನೋ ಸುದ್ದಿ ಕೇಳಿಬರ್ತಿದೆ. ಈಗಾಗಲೇ ಒಂದಷ್ಟು ಸ್ಟಾರ್ ನಟಿಯರ ಜೊತೆ ಮಾತುಕತೆ ನಡಿತಿದ್ಯಂತೆ.

ದುನಿಯಾ ವಿಜಿ ನಿರ್ದೇಶನದ ಈ ಹೊಸ ಚಿತ್ರಕ್ಕೆ ಡಿಫ್ರೆಂಟ್ ಟೈಟಲ್​ ಕೂಡ ಯೋಚನೆ ಮಾಡಿದ್ದಾರಂತೆ. ಈಗಾಗಲೇ ಈ ಸಿನಿಮಾದ ಟೈಟಲ್​, ಸ್ಟಾರ್​ಕಾಸ್ಟ್​ ಬಗ್ಗೆ ಸಿನಿಪ್ರಿಯರು ಮತ್ತು ಗಾಂಧೀನಗರದಲ್ಲಿ ಕುತೂಹಲ ಶುರುವಾಗಿದೆ. ಸದ್ಯದಲ್ಲೇಈ ಎಲ್ಲಾ ಕ್ಯೂರಿಯಾಸಿಟಿಗೆ ಸ್ವತಃ ದುನಿಯಾ ವಿಜಯ್​ ಬ್ರೇಕ್​ ಹಾಕಲಿದ್ದಾರೆ. ದುನಿಯಾ ವಿಜಿ ನಟನೆ ಜೊತೆಜೊತೆಗೆ ನಿರ್ದೇಶನದಲ್ಲೂ ಬ್ಯುಸಿಯಾಗುತ್ತಿದ್ದಾರೆ.

Next Story

RELATED STORIES