Top

ಕೊಟ್ಟ ಮಾತು ಉಳಿಸಿಕೊಳ್ತಿದ್ದಾರೆ ಎಸ್​.ಪಿ ಬಾಲಸುಬ್ರಮಣ್ಯಂ..!

  • ಅಭಿಮಾನಿಗಳ ಪ್ರಾರ್ಥನೆಯ ಫಲ, ಎದ್ದು ಕುಳಿತ ಎಸ್​​ಪಿಬಿ.
  • ಶೀಘ್ರದಲ್ಲೇ ಗುಣಮುಖರಾಗಿ ಬರೋದಾಗಿ ಹೇಳಿದ್ದ ಎಸ್​​ಪಿಬಿ.
  • ಮತ್ತೆ ಕೇಳಬಹುದು ಸಂಗೀತ ಸಾಮ್ರಾಟನ ಸುಮಧುರ ಗಾನ..!

ಕೊಟ್ಟ ಮಾತು ಉಳಿಸಿಕೊಳ್ತಿದ್ದಾರೆ ಎಸ್​.ಪಿ ಬಾಲಸುಬ್ರಮಣ್ಯಂ..!
X

ಸಂಗೀತ ಸಾಮ್ರಾಟ್​ ಎಸ್​.ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ದಿನದಿಂದ ದಿನಕ್ಕೆ ಚೇತರಿಕೆ ಕಂಡು ಬರ್ತಿದೆ. ಇದು ಸಹಜವಾಗಿಯೇ ಬಾಲು ಕುಟುಂಬ ಮತ್ತು ಅಭಿಮಾನಿಗಳಲ್ಲಿ ಸಂತಸ ತಂದಿದೆ.15 ದಿನಗಳಿಂದ ಹಿಂದೆ ಇದ್ದ ಆತಂಕ ಈಗಿಲ್ಲ. ಅಂದು ಅವರು ಮಾತು ಕೊಟ್ಟಂತೆ ಮತ್ತೆ ತಿರುಗಿ ಬರ್ತಿದ್ದಾರೆ. ಅಭಿಮಾನಿಗಳ ಪಾರ್ಥನೆ ಮತ್ತು ಆ ದಿವ್ಯಶಕ್ತಿ ಗಾನಗಂಧರ್ವ ಮತ್ತೆ ಎದ್ದು ಬರುವಂತೆ ಮಾಡ್ತಿದೆ.

ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸುತ್ತಿದೆ. ಎಸ್​​. ಪಿ ಬಾಲಸುಬ್ರಮಣ್ಯಂ ಮತ್ತೆ ಎದ್ದು ಬಂದು ಮೈಕ್​ ಹಿಡಿದು ಹಾಡುವ ಸಮಯ ಹತ್ತಿರ ಬರ್ತಿದೆ. ಅವರ ಧೃಡ ಸಂಕಲ್ಪ, ಎಂಜಿಎಂ ಆಸ್ಪತ್ರೆ ವೈದ್ಯರ ನಿರಂತರ ಪರಿಶ್ರಮದ ಫಲವಾಗಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗುತ್ತಿದೆ. ಎಲ್ಲರ ಪ್ರಾರ್ಥನೆಯ ಫಲವಾಗಿ ಸಂಗೀತ ಸಾಮ್ರಾಟ ಎಸ್​.ಪಿ ಬಾಲಸುಬ್ರಮಣ್ಯಂ ಆರೋಗ್ಯದಲ್ಲಿ ಬಹಳ ಚೇತರಿಕೆ ಕಂಡು ಬರ್ತಿದೆ.

415 ದಿನಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ಬಾಲು ಆರೋಗ್ಯ ಸ್ಥಿತಿ ಗಂಭೀರವಾಗಿದೆ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ರಜಿನಿಕಾಂತ್​, ಚಿರಂಜೀವಿ, ಕಮಲ್​, ಶಿವರಾಜ್​ಕುಮಾರ್​ ಸೇರಿದಂತೆ ಚಿತ್ರರಂಗ ಗಣ್ಯರು ಕೂಡ ಎಸ್​ಪಿಬಿ ಬೇಗ ಗುಣಮುಖರಾಗಿ ಬರಬೇಕು ಅಂತ ಪ್ರಾರ್ಥನೆ ಸಲ್ಲಿಸಿದ್ದರು. ಅಭಿಮಾನಿಗಳಂತೂ ನಿರಂತರವಾಗಿ ಎಸ್​ಪಿಬಿ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಲೇ ಇದ್ದಾರೆ. ಅಂದು ಬಾಲು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದಾರೆ.

ಆಗಸ್ಟ್ 5 ರಂದು ಕೊರೊನಾ ಪಾಸಿಟಿವ್ ಬಂದಿದ್ದ ಕಾರಣ ಎಸ್ ಪಿ ಬಿ ಆಸ್ಪತ್ರೆಗೆ ದಾಖಲಾಗಿದ್ದರು.. ಅಲ್ಲದೇ ಕೊರೊನಾ ದೃಢಪಟ್ಟ ಬಗ್ಗೆ ಸ್ವತಃ ಬಾಲಸುಬ್ರಮಣ್ಯಮ್ ಫೇಸ್ಬುಕ್​ ವೀಡಿಯೋ ಮೂಲಕ ತಿಳಿಸಿದ್ದರು.. ಯಾರು ಆತಂಕ ಪಡುವ ಅಗತ್ಯ ಇಲ್ಲ. ಶೀಘ್ರದಲ್ಲೇ ಗುಣಮುಖನಾಗಿ ಬರ್ತೀನಿ ಅಂತ ಹೇಳಿದರು.

ಅಂದು ಹೇಳಿದಂತೆಯೇ ಬಾಲಸುಬ್ರಮಣ್ಯಂ ಚೇತರಿಸಿಕೊಳ್ತಿದ್ದಾರೆ. ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದ ಎಸ್​ಪಿಬಿ ಆರೋಗ್ಯ ಸ್ಥಿತಿ ಗಂಭಿರವಾದ ಪರಿಣಾಮ ಅವರನ್ನ ಐಸಿಯು ವಾರ್ಡ್​​ಗೆ ಶಿಫ್ಟ್​ ಮಾಡಲಾಗಿತ್ತು. ವೆಂಟಿಲೇಟರ್​ ಜೊತೆಗೆ ಇಸಿಎಂಓ ಸಾಧನ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪುತ್ರ ಚರಣ್​ ಪ್ರತಿ ದಿನ ತಂದೆಯ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡುತ್ತಾ ಬರ್ತಿದ್ದಾರೆ. ಇನ್ನು ಎಂಜಿಎಂ ಆಸ್ಪತ್ರೆಯಿಂದಲೂ ಪ್ರತಿದಿನ ಹೆಲ್ತ್​​​ ಬುಲೆಟಿನ್​​​ ಬಿಡುಗಡೆ ಮಾಡಿ ಬಾಲು ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಎಸ್​​​ಪಿಬಿ ಕೋವಿಡ್​ 19 ಸೋಕಿಂಗೆ ತುತ್ತಾಗಿರುವುದರಿಂದ ಶ್ವಾಸಕೋಶಕ್ಕೆ ಹಾನಿಯಾಗಿದೆ. ಬೇರೆ ಏನು ಸಮಸ್ಯೆ ಇಲ್ಲ. ಸದ್ಯ ಅವರು ಪ್ರಜ್ಞಾಸ್ಥಿತಿಯಲ್ಲಿದ್ದು ಎಚ್ಚರವಾಗಿದ್ದಾರೆ. ಇತ್ತೀಚೆಗೆ ಪುತ್ರ ಚರಣ್​ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರೊಟ್ಟಿಗೆ ಮಾತನಾಡಲು ಎಸ್​​ಪಿಬಿ ಕೈಸನ್ನೆ ಮೂಲಕ ಪ್ರಯತ್ನಿಸಿದ್ದಾರೆ. ಈ ವಿಚಾರವನ್ನ ಚರಣ್​ ಹಂಚಿಕೊಂಡಿದ್ದರು.

ಗಾನಗಂಧರ್ವ ಬೇಗ ಚೇತರಸಿಕೊಳ್ಳಬೇಕು ಅಂತ ಕೆಲ ದಿನಗಳ ಹಿಂದೆ ಸಿನಿಮಾ ಸೆಲೆಬ್ರಟಿಗಳು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಸಾಮೂಹಿಕ ಪಾರ್ಥನೆ ಸಲ್ಲಿಸಿದ್ದರು. ಇನ್ನು ಶಬರಿಮಲೆ ದೇವಸ್ಥಾನ ಮಂಡಳಿ ಕೂಡ ಬಾಲು ಬೇಗ ಚೇತರಿಸಿಕೊಳ್ಳಲಿ ಎಂದು ವಿಶೇಷ ಪೂಜೆ ನಡೆಸಿತ್ತು. ಹೈದರಾಬಾದ್​ ಚಿಲಕೂರು ಬಾಲಾಜಿ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಲಾಗಿತ್ತು. ಇದೆಲ್ಲದರ ಫಲವಾಗಿ ಬಾಲು ಆರೋಗ್ಯದಲ್ಲಿ ಬಹಳ ಚೇತರಿಕೆ ಕಂಡು ಬರ್ತಿದ್ದು, ಶೀಘ್ರದಲ್ಲೇ ಡಿಸ್ಚಾರ್ಜ್​ ಆಗುವ ನಿರೀಕ್ಷೆ ಮೂಡಿದೆ.

ಇನ್ನು ಎಸ್​​ಪಿಬಿ ಅವರಿಗೆ ಮ್ಯೂಸಿಕ್​ ಥೆರಪಿ ನೀಡುತ್ತಿರುವುದಾಗಿ ಕೆಲ ದಿನಗಳ ಹಿಂದೆ ಮಾಹಿತಿ ಸಿಕ್ಕಿತ್ತು. ಐಸಿಯು ಘಟಕದಲ್ಲಿ ಅವರಿಗೆ ಸದಾ ಅವರೇ ಹಾಡಿರುವ ಭಕ್ತಿಗೀತೆಗಳು, ಸಿನಿಮಾ ಹಾಡುಗಳನ್ನ ಕೇಳಿಸಿ ಮನೋಬಲ ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ಮ್ಯೂಸಿಕ್​ ಥೆರಪಿ ಕೂಡ ಬಾಲು ಆರೋಗ್ಯ ಸುಧಾರಣೆಗೆ ಶಕ್ತಿ ತುಂಬಿದೆ ಅಂದ್ರೆ ತಪ್ಪಾಗಲ್ಲ. ಸದ್ಯ ಎಸ್​ಪಿಬಿ ಆರೋಗ್ಯ ಸ್ಥಿತಿ ಹೇಗಿದೆ ಅನ್ನೋದನ್ನ ಖುದ್ದು ಪುತ್ರ ಚರಣ್​​, ಹೇಳಿದ್ದಾರೆ ಕೇಳಿ..

(ನಾನು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಚರ್ಚಿಸಿದ್ದೇನೆ. ನನಗೆ ಬಹಳಷ್ಟು ಮಾತಿ ನೀಡಿದ್ದಾರೆ. ತಂದೆಯ ಲಂಗ್ಸ್‌ ಎಕ್ಸ್‌ರೇಯನ್ನು ತೋರಿಸಿದರು. ಅಪ್ಪನ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬರುತ್ತಿದೆ. ಅವರಿಗೆ ಫಿಸಿಯೋಥೆರಪಿ ಮಾಡಲಾಗುತ್ತಿದೆ. ಬಹಳ ಸಮಯದಿಂದ ಮಲಗಿಕೊಂಡೇ ಇದ್ದಿದ್ದರಿಂದ ಒಂದಷ್ಟು ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ. ಅವರ ಉಸಿರಾಟ ಕೂಡ ಉತ್ತಮವಾಗಿದೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದದಿಂದ ಅವರು ಆದಷ್ಟು ಬೇಗ ಸಂಕಷ್ಟದಿಂದ ಹೊರಬರಲಿದ್ದಾರೆ ಅನ್ನುವ ನಂಬಿಕೆ ಇದೆ. ಎಷ್ಟು ಸಾಧ್ಯವೋ ಅಷ್ಟು ಬೇಗ ಅವರು ಮನೆಗೆ ಮರಳಲಿದ್ದಾರೆ.)

ಒಟ್ನಲ್ಲಿ ಎಸ್​ಪಿಬಿ ಬೇಗ ಗುಣಮುಖರಾಗಬೇಕು, ಮತ್ತಷ್ಟು ಹಾಡುಗಳನ್ನ ಹಾಡಿ ಎಲ್ಲರ ಮನಸ್ಸನ್ನು ತಣಿಸಬೇಕು ಅನ್ನು ಪಾರ್ಥನೆ ಶೀಘ್ರದಲ್ಲೇ ಫಲಿಸಲಿದೆ. ಮತ್ತೆ ಬಾಲು ಸುಮಧುರ ಗೀತೆಗಳನ್ನ ಕೇಳಲು ಎಲ್ಲರೂ ಸಿದ್ಧರಾಗಿ.

Next Story

RELATED STORIES