Top

ಇನ್ನೊಬ್ಬರ ಸಿನಿಮಾ ಹ್ಯಾಂಡಲ್ ಮಾಡೋ ಕಲಾವಿದ ನಾನಲ್ಲ - ಕಿಚ್ಚ ಸುದೀಪ್

ಅವರವರ ಸಿನಿಮಾ ಕಾಪಾಡಿಕೊಳ್ಳೋ ಶಕ್ತಿ ಅವರಿಗೂ ಇದೆ

ಇನ್ನೊಬ್ಬರ ಸಿನಿಮಾ ಹ್ಯಾಂಡಲ್ ಮಾಡೋ ಕಲಾವಿದ ನಾನಲ್ಲ  - ಕಿಚ್ಚ ಸುದೀಪ್
X

ದುಬೈ: ಇನ್ನೊಬ್ಬರ ಸಿನಿಮಾ ಹ್ಯಾಂಡಲ್ ಮಾಡೋ ಕಲಾವಿದ ನನ್ನ ಅಲ್ಲ ಎಂದು ನಟ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ

ಟಾಲಿವುಡ್​ನಲ್ಲಿ ರಾಬರ್ಟ್ ಸಿನಿಮಾಗೆ ಎದುರಾಗಿರೋ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರವರ ಸಿನಿಮಾ ಕಾಪಾಡಿಕೊಳ್ಳೋ ಶಕ್ತಿ ಅವರಿಗೂ ಇದೆ. ಆ ಸಿನಿಮಾ ಬಗ್ಗೆ ಈ ಸಂದರ್ಭದಲ್ಲಿ ಮಾತಾಡೋದು ತಪ್ಪಾಗುತ್ತೆ ಎಂದಿದ್ದಾರೆ.

ಈ ಜರ್ನಿಯಲ್ಲಿ ಯಾರನ್ನು ಮಿಸ್​ ಮಾಡಿಕೊಳ್ಳುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಟ್ಟೋದವರನ್ನ ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೀನಿ. ಕಾರಣಾಂತಾರಗಳಿಂತ ಬಿಟ್ಟೋಗಿರಬಹುದು. ಮಿಸ್ ಮಾಡಿಕೊಳ್ಳದಿದ್ರೆ ಪ್ರೀತಿನೇ ಸುಳ್ಳಾಗುತ್ತೆ ಎಂದರು.

ಇನ್ನು ರೆಡ್ ಕಾರ್ಪೇಟ್ ಹಾಕಿಯೇ ಜೀವನ ಸಾಗಿಸೋಕಾಗಲ್ಲ, ಕಾರ್ ಇದ್ಮೇಲೆ ಪಂಕ್ಚರ್ ಆಗಲೇ ಬೇಕು. ಪಂಕ್ಚರ್ ಆದ ಟೈರ್ ಚೇಂಜ್ ಮಾಡಲೇಬೇಕು. ನಿಮ್ಮೊಟ್ಟಿಗೆ ಯಾರಿದ್ದಾರೋ ಅದರ ಜೊತೆ ಸಾಗಬೇಕು. ಕೆಲವರು ನೆನಪು ಬಿಟ್ಟು ಹೋಗ್ತಾರೆ. ಕೆಲವರು ನೆನಪು ಕಿತ್ಕೊಂಡ್ ಹೋಗ್ತಾರೆ ಎಂದು ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES