Top

TV5 Exclusive Review: ರಾಬರ್ಟ್​ ಸಿನಿಮಾ ವಿಮರ್ಶೆ

ಡಿ ಫ್ಯಾನ್ಸ್​ ಸಂಭ್ರಮ ಮುಗಿಲು ಮುಟ್ಟಿದೆ

TV5 Exclusive Review: ರಾಬರ್ಟ್​ ಸಿನಿಮಾ ವಿಮರ್ಶೆ
X

ಇಡೀ ಸ್ಯಾಂಡಲ್​​ವುಡ್​ ಅಷ್ಟೇ ಅಲ್ಲಾ ಟಾಲಿವುಡ್​ ಕೂಡ ರಾಬರ್ಟ್​ ಜಪ ಮಾಡ್ತಾ ಇತ್ತು. ಇದೀಗ ಆ ದೊಡ್ಡ ಕುತೂಹಲಕ್ಕೆ ತೆರೆಬಿದ್ದಿದೆ. ರಾಬರ್ಟ್​ ಥಿಯೇಟರ್​ ಅಂಗಳಕ್ಕೆ ಲಗ್ಗೆ ಇಟ್ಟಿದ್ದು, ಡಿ ಫ್ಯಾನ್ಸ್​ ಸಂಭ್ರಮ ಮುಗಿಲು ಮುಟ್ಟಿದೆ.

ರಾಬರ್ಟ್​. ಬಹುನಿರೀಕ್ಷಿತ ಸಿನಿಮಾ. ಒಂದು ವರ್ಷದಿಂದ ಸಿನಿಮಾಗಾಗಿ ಕಾಯ್ತಿದ್ದ ಡಿ ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ಎಲ್ಲಾ ಕಡೆ ಹೌಸ್​ಫುಲ್​ ಬೋರ್ಡ್​ಗಳು. ಎಲ್ಲಾ ಥಿಯೇಟರ್​​ಗಳಲ್ಲಿ ಕಟೌಟ್​ಗಳು, ಹಾಲಿನ ಅಭಿಷೇಕ. ಈ ರೀತಿ ಅದ್ದೂರಿಯಾಗಿ ರಾಬರ್ಟ್​ನ್ನ ವೆಲ್ಕಂ ಮಾಡ್ಕೊಂಡಿದ್ದಾರೆ ಸಿನಿಪ್ರಿಯರು.

ರಾಬರ್ಟ್​ ಟೀಸರ್, ಟ್ರೇಲರ್, ಹಾಡುಗಳು, ಅಷ್ಟೇ ಅಲ್ಲಾ ದಚ್ಚು ಲುಕ್​ ನೋಡಿಯೇ ಸಿನಿಮಾ ನೋಡುವ ಕುತೂಹಲ ಹೆಚ್ಚಾಗಿತ್ತು. ಇಂದು ಕುತೂಹಲಕ್ಕೆ ತೆರೆಬಿದ್ದಿದೆ. ಸಿನಿಮಾ ನೋಡಿ ಜನ ಏನಂತಿದ್ದಾರೆ.

ಚಿತ್ರ: ರಾಬರ್ಟ್​

ನಿರ್ದೇಶನ: ತರುಣ್ ಸುಧೀರ್

ನಿರ್ಮಾಣ: ಉಮಾಪತಿ ಶ್ರೀನಿವಾಸ್

ಸಂಗೀತ: ಅರ್ಜುನ್​ ಜನ್ಯಾ

ಛಾಯಾಗ್ರಹಣ: ಸುಧಾಕರ್ ಎಸ್.ರಾಜ್

ತಾರಾಗಣ: ದರ್ಶನ್, ಆಶಾಭಟ್, ಜಗಪತಿಬಾಬು, ಶಿವರಾಜ್​ ಕೆ.ಆರ್ ಪೇಟೆ ಮುಂತಾದವರು.

ರಾಬರ್ಟ್​ ಸ್ಟೋರಿಲೈನ್:

ಚಿತ್ರದ ನಾಯಕ ರಾಘವ ವೃತ್ತಿಯಲ್ಲಿ ಅಡುಗೆ ಭಟ್ಟ. ಮೃದು ಸ್ವಭಾವದ ವ್ಯಕ್ತಿ. ಎಂತದ್ದೇ ಪರಿಸ್ಥಿತಿ ಬಂದ್ರುಯಾರ ಮೇಲೂ ಕೈ ಮಾಡದೇ ಅನುಸರಿಸಿಕೊಂಡು ಹೋಗುವ ವ್ಯಕ್ತಿ. ತಾನಾಯ್ತು ತನ್ನ ಮಗ ಆಯ್ತು ಅಂತ ಜೀವನ ಸಾಗಿಸ್ತಿರ್ತಾನೆ. ಆದರೆ, ಈ ರಾಘವ ಯಾರು(?) ಆತನ ಬ್ಯಾಗ್ರೌಂಡ್​ ಏನು(?) ಈ ರಾಘವ ಹಿಂದೆ ಏನಾಗಿದ್ದ(?) ರಾಬರ್ಟ್​ ಯಾರು-ರಾಘವ ಯಾರು ಇದೆಲ್ಲದಕ್ಕೂ ಚಿತ್ರದ ಸೆಕೆಂಡ್​ ಹಾಫ್​ನಲ್ಲಿ ಉತ್ತರ ಸಿಗುತ್ತೆ. ಚಿತ್ರದ ನಾಯಕ ರಾಘವನ ಸುತ್ತಲೇ ಕಥೆ ಸುತ್ತುತ್ತಿರುತ್ತದೆ.

ರಾಬರ್ಟ್​ ಆರ್ಟಿಸ್ಟ್​ ಪರ್ಫಾಮೆನ್ಸ್:​

ಚಿತ್ರದ ನಾಯಕ ದರ್ಶನ್​ ರಾಘವನೋ ರಾಬರ್ಟ್​ ಅನ್ನೋದನ್ನ ಚಿತ್ರದಲ್ಲೇ ನೋಡಿ ಎಂಜಾಯ್​ ಮಾಡಿ. ಆದರೆ ಚಾಲೆಂಜಿಂಗ್​ ದರ್ಶನ್​ ತಮ್ಮ ಪಾತ್ರಕ್ಕೆ 100 ಪರ್ಸೆಂಟ್​ ಎಫರ್ಟ್​ ಹಾಕಿರೋದು ತೆರೆಮೇಲೆ ಎದ್ದು ಕಾಣುತ್ತದೆ. ಅಭಿನಯದಲ್ಲಂತೂ ದಚ್ಚುಗೆ ದಚ್ಚುನೇ ಸರಿಸಾಟಿ ಎಂಬಂತೆ ನಟಿಸಿದ್ದಾರೆ. ಡಾನ್ಸ್, ಫೈಟ್ ಯಾವುದನ್ನು ತೆಗೆದುಹಾಕುವಂತಿಲ್ಲ. ಎಲ್ಲಾ ವಿಭಾಗದಲ್ಲೂ ದಚ್ಚು ಪರ್ಫೆಕ್ಷನಿಸ್ಟ್ ಅಂತ ಪ್ರೂವ್​ ಮಾಡಿದ್ದಾರೆ.

ಚಿತ್ರದ ನಾಯಕಿ ಆಶಾಭಟ್ ಮೊದಲ ಚಿತ್ರದಲ್ಲೇ ಸಿನಿಪ್ರಿಯರ ಗಮನ ಸೆಳೆತಿದ್ದಾರೆ..ಆ್ಯಕ್ಟಿಂಗ್, ಡಾನ್ಸ್​ ಎರಡರಲ್ಲೂ ಸೂಪರ್.

ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಶಿವರಾಜ್​ ಕೆ.ಆರ್​.ಪೇಟೆ ಅಭಿನಯ ಅದ್ಭುತವಾಗಿದೆ. ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಾರೆ. ಶಿವರಾಜ್​ ಕೆ.ಆರ್ ಪೇಟೆ ಗೆಟಪ್​ ಕೂಡ ಸಕತ್​ ಡಿಫ್ರೆಂಟಾಗಿದೆ.

ಚಿತ್ರದ ಖಳನಾಯಕರಾದ ಜಗಪತಿ ಬಾಬು ನಾನಾ ಪಾತ್ರದಲ್ಲಿ,ಹಾಗೂ ರವಿಶಂಕರ್ ಸರ್ಕಾರ್​ ಪಾತ್ರದಲ್ಲಿ ಎಂದಿನಿಂತೆ ಅದ್ಬುತ ನಟನೆ ಮಾಡಿದ್ದಾರೆ..ವಿನೋದ್​ ಪ್ರಭಾಕರ್​ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ..

ರಾಬರ್ಟ್​ ಪ್ಲಸ್ ಪಾಯಿಂಟ್ಸ್

ದರ್ಶನ್ ಪರ್ಫಾಮೆನ್ಸ್..

ಕಥೆ

ಕ್ಯಾಮರ ವರ್ಕ್​.

ಬ್ಯೂಟಿಫುಲ್​ ಸೆಟ್​​ಗಳು

ನಿರ್ದೇಶನ, ನಿರೂಪಣೆ

ಸಾಹಸ ದೃಶ್ಯಗಳು

Tv5 ರೇಟಿಂಗ್

4/5

ಫೈನಲ್​ ಸ್ಟೇಟ್​ಮೆಂಟ್​

ರಾಬರ್ಟ್​ ಸಿನಿಮಾ ಡಿ ಅಭಿಮಾನಿಗಳಿಗೆ ಸಖತ್​ ಟ್ರೀಟ್​ ಅನ್ನೋದರಲ್ಲಿ ನೋ ಡೌಟ್. ಪಕ್ಕಾ ಪೈಸಾ ವಸೂಲ್​ ಸಿನಿಮಾ. ಫಸ್ಟ್ ಹಾಫ್​ ಸೂಪರ್​ ಅನ್ನಿಸಿದ್ರೆ, ಸೆಕೆಂಡ್​ ಹಾಫ್​ ಅದ್ಬುತ ಅನ್ನಿಸುತ್ತೆ. ಒಟ್ನಲ್ಲಿ ರಾಬರ್ಟ್​ ಸಿನಿಮಾ ಹುಟ್ಟುಹಾಕಿದ ಕ್ರೇಜ್​ನ್ನ ಫುಲ್​ ಫಿಲ್​ ಮಾಡಿದೆ.

Next Story

RELATED STORIES