Top

ಥಿಯೇಟರ್ ಮಂದ ಬೆಳಕಿನಲ್ಲಿ ನೆರಳಿನಾಟ ಶುರು

ಶ್ಯಾಡೋ ಹಿಂದೆ ಬಿದ್ದಿರೋದ್ಯಾಕೆ ಮರಿ ಟೈಗರ್..!

ಥಿಯೇಟರ್ ಮಂದ ಬೆಳಕಿನಲ್ಲಿ ನೆರಳಿನಾಟ ಶುರು
X

ಸ್ಯಾಂಡಲ್​​ವುಡ್​​ನಲ್ಲಿ ಬಹುದಿನಗಳಿಂದ ಸುದ್ದಿ ಮಾಡುತ್ತಿದ್ದ, ಮರಿ ಟೈಗರ್​​ ವಿನೋದ್​ ಪ್ರಭಾಕರ್​ ಅಭಿನಯದ ಚಿತ್ರ ಶ್ಯಾಡೋ. ಈಗಾಗಲೇ ಟೀಸರ್ ಟ್ರೇಲರ್​ ಮೂಲಕ ಕ್ಯೂರಿಯಾಸಿಟಿ ಬಿಲ್ಡ್​ ಮಾಡಿರೋ ಶ್ಯಾಡೋ, ಮುಂದಿನವಾರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.

ಮರಿ ಟೈಗರ್​ ವಿನೋದ್​ ಪ್ರಭಾಕರ್​ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ. ಸದ್ಯ ಆ ಸರತಿ ಸಾಲಿನಲ್ಲಿ ಮೊದಲು ರಿಲೀಸ್​ ಆಗ್ತಿರೋ ಸಿನಿಮಾ ಶ್ಯಾಡೋ. ಈಗಾಗಲೇ ಶ್ಯಾಡೋ ಟೀಸರ್, ಟ್ರೆಲರ್​ ಹಾಡುಗಳು ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ. ಅದರಲ್ಲೂ ಚಿತ್ರದ ಒಂದು ಹಾಡನ್ನ ಈಗಾಗಲೇ ಪೂರಿ ಜಗನ್ನಾಥ್​ ಕೂಡ ಮೆಚ್ಚಿಕೊಂಡಾಡಿದ್ದಾರೆ.

ಅಂದ್ಹಾಗೇ ಶ್ಯಾಡೋ ಕ್ಲಾಸ್​ ಅಂಡ್ ಮಾಸ್ ಕಮರ್ಷಿಯಲ್​ ಎಂಟರ್ಟೈನರ್​ ಚಿತ್ರ. ಟ್ರೇಲರ್​ನಲ್ಲಿ ಚಿತ್ರದ ನಾಯಕ ವಿನೋದ್ ಪ್ರಭಾಕರ್, ತನ್ನ ನೆರಳು ಕಳೆದು ಹೋಗಿದೆ ಅಂತ ಹುಡುಕಾಟ ನಡೆಸ್ತಿರ್ತಾರೆ. ಅದು ಹೇಗೆ(?) ಚಿತ್ರದ ಅಸಲಿ ಕಥೆ ಏನು(?) ಇದು ಯಾವ ರೀತಿಯ ಸಿನಿಮಾ ಅನ್ನೋ ಕುತೂಹಲಕ್ಕೆ ಫೆಬ್ರವರಿ 5 ರಂದು ತೆರೆಬೀಳಲಿದೆ.

ಇನ್ನು ಟೀಸರ್ ಟ್ರೇಲರ್​ ನೋಡ್ತಿದ್ರೆ, ಚಿತ್ರದಲ್ಲಿ ಡೈಲಾಗ್​ ಸಖತ್​ ಪವರ್ ಪುಲ್ಲಾಗಿರೋದು ಎದ್ದು ಕಾಣುತ್ತೆ ಹಾಗೂ ಆ್ಯಕ್ಷನ್​ಗೆ ಹೆಚ್ಚು ಪ್ರಾಮುಖ್ಯತೆ ಇದೆ.. ಅಂದ್ಹಾಗೇ ಈ ಚಿತ್ರಕ್ಕೆ ತೆಲುಗು ಮೂಲಕ ರವಿಗೌಡ ಆ್ಯಕ್ಷನ್ ಕಟ್ ಹೇಳಿದ್ದಾರೆ..ಒಟ್ನಲ್ಲಿ ಮತ್ತೆ ಸ್ಯಾಂಡಲ್​​ವುಡ್​ನಲ್ಲಿ ಸಿನಿಮಾ ಸಂಭ್ರಮ ಶುರುವಾಗಿದ್ದು, ಬ್ಯಾಕ್​ ಟು ಬ್ಯಾಕ್​ ಸ್ಟಾರ್ಸ್​ ಚಿತ್ರಗಳು ತೆರೆಗೆ ಬರ್ತಿವೆ.

Next Story

RELATED STORIES