Top

ರಾಬರ್ಟ್​ ಚಿತ್ರದ ಸ್ಟಾರ್ ನಟ ಡಬ್ಬಿಂಗ್​ ಕಂಪ್ಲೀಟ್​

ಪ್ರಮುಖ ಪಾತ್ರದಲ್ಲಿ ಮಿಂಚಿರುವ ಟಾಲಿವುಡ್​ ಸ್ಟಾರ್ ಜಗಪತಿಬಾಬು ರಾಬರ್ಟ್​ ಡಬ್ಬಿಂಗ್​ ಕಂಪ್ಲೀಟ್

ರಾಬರ್ಟ್​ ಚಿತ್ರದ ಸ್ಟಾರ್ ನಟ ಡಬ್ಬಿಂಗ್​ ಕಂಪ್ಲೀಟ್​
X

ಸ್ಯಾಂಡಲ್​ವುಡ್​ನ ಮೋಸ್ಟ್​ ಎಕ್ಸ್​ಪೆಕ್ಡೆಡ್​ ರಾಬರ್ಟ್​ ಸಿನಿಮಾ ರಿಲೀಸ್​ಗೆ ಅಭಿಮಾನಿಗಳು ಕಾಯ್ತಾ ಇದ್ದು, ಇನ್ನು ರಿಲೀಸ್​ ಡೇಟ್ ಕನ್ಫರ್ಮ್​ ಆಗಿಲ್ಲ. ಆದರೆ, ರಾಬರ್ಟ್​ ಅಡ್ಡಾದಿಂದ ಒಂದಲ್ಲ ಒಂದು ಅಪ್​ಡೇಟ್ಸ್​ ಸಿಗ್ತಾನೇ ಇದೆ. ಸದ್ಯ ರಾಬರ್ಟ್​ ಚಿತ್ರದ ಮತ್ತೊಬ್ಬ ಸ್ಟಾರ್ ನಟ ಡಬ್ಬಿಂಗ್​ ಮುಗಿಸಿದ್ದಾರೆ.

ಸ್ಯಾಂಡಲ್​ವುಡ್​ ಮೋಸ್ಟ್​ ಎಕ್ಸ್​ಪೆಕ್ಡೆಡ್​ ಅಂಡ್ ಬಿಗ್​ ಬಜೆಟ್ ಸಿನಿಮಾ ರಾಬರ್ಟ್​. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಇಷ್ಟು ಹೊತ್ತಿಗೆ ಸಿನಿಮಾ ರಿಲೀಸ್​ ಆಗಬೇಕಿತ್ತು. ಆದರೆ, ಕೊರೊನಾ ಮತ್ತು ಲಾಕ್​ಡೌನ್​ ಇದಕ್ಕೆಲ್ಲಾ ಬ್ರೇಕ್​ ಹಾಕಿತ್ತು. ಇನ್ನೂ ಕೂಡ ರಾಬರ್ಟ್​ ರಿಲೀಸ್ ಡೇಟ್ ಕನ್ಫರ್ಮ್​ ಆಗಿಲ್ಲದ ಕಾರಣ, ಚಿತ್ರತಂಡ ಆರಾಮಾಗಿ ಸಮಯ ತೊಗೊಂಡು, ಪೋಸ್ಟ್ ಪ್ರೊಡಕ್ಷನ್​ ವರ್ಕ್​ ಮಾಡುತ್ತಿದ್ದಾರಂತೆ.

ಈಗಾಗ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್​ ತಮ್ಮ ಪಾತ್ರದ ಡಬ್ಬಿಂಗ್ ಮಾಡಿ ಮುಗಿಸಿದ್ದಾರಂತೆ. ಇದೀಗ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಿಂಚಿರುವ ಟಾಲಿವುಡ್​ ಸ್ಟಾರ್ ಜಗಪತಿಬಾಬು ರಾಬರ್ಟ್​ ಡಬ್ಬಿಂಗ್​ ಕಂಪ್ಲೀಟ್​ ಮಾಡಿದ್ದು, ಈ ವಿಚಾರವನ್ನ ಸ್ವತಃ ನಿರ್ದೇಶಕ ತರುಣ್​ ಸುಧೀರ್ ತಮ್ಮ ಸೋಶಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ರಾಬರ್ಟ್​ ಚಿತ್ರದ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚಾಗ್ತಿದ್ದು, ಸಿನಿಮಾ ರಿಲೀಸ್​ ಡೇಟ್ ಅನೌನ್ಸ್​ ಆಗೋದನ್ನೇ ಕಾಯ್ತಿದ್ದಾರೆ ಡಿ ಫ್ಯಾನ್ಸ್​.

Next Story

RELATED STORIES