Top

ಸ್ಯಾಂಡಲ್​ವುಡ್​ನಲ್ಲಿ 'ಯುವ ರಣಧೀರ ಕಂಠೀರವ'ನ ಘರ್ಜನೆ

  • ಹೊಸ ನಿರೀಕ್ಷೆ ಹುಟ್ಟು ಹಾಕಿದ ಯುವ ರಾಜ್​​​ ಕುಮಾರ್​
  • ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಟೀಸರ್
  • 'ಯುವ ರಣಧೀರ ಕಂಠೀರವ'ನಿಗೆ ಸಿನಿ ಪ್ರೇಕ್ಷಕರ ಬಹುಪರಾಕ್
  • ಅಣ್ಣಾವ್ರರನ್ನು ನೆನಪು ಮಾಡಿದ ಯುವ ರಾಜ್​ಕುಮಾರ್
  • ತಂದೆ ನೆನಪಾಗ್ತಾರೆ ಅಂದರು ಪವರ್ ಸ್ಟಾರ್ ಪುನೀತ್

ಸ್ಯಾಂಡಲ್​ವುಡ್​ನಲ್ಲಿ ಯುವ ರಣಧೀರ ಕಂಠೀರವನ ಘರ್ಜನೆ
X

ಸ್ಯಾಂಡಲ್​ವುಡ್​ಗೆ ಮೆಗಾ ಪವರ್​ಸ್ಟಾರ್ ಎಂಟ್ರಿಯಾಗಿದೆ. ರಾಜ್​ ಕುಟುಂಬ ಮತ್ತು ದೊಡ್ಮನೆ ಅಭಿಮಾನಿಗಳು ಯುವರಾಜ ಕುಮಾರನನ್ನ ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಸೋಶೀಯಲ್​ ಮೀಡಿಯಾದಲ್ಲಂತೂ ಯುವ ರಣಧೀರ ಕಂಠೀರವನ ಹವಾ ಜೋರಾಗಿದೆ.

ಚಂದವನಕ್ಕೆ ಮತ್ತೊಬ್ಬ ದೊಡ್ಮನೆ ಕುಡಿಯ ಎಂಟ್ರಿಯಾಗಿದೆ. ಈ ಎಂಟ್ರಿ ಸ್ಯಾಂಡಲ್​​ವುಡ್​ನಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ ಯಾಕಂದ್ರೆ ಚಿತ್ರದ ಟೈಟಲ್ಲೇ ಹಾಗಿದೆ. ಯುವ ರಣಧೀರ ಕಂಠೀರವ.


ವರನಟ ರಾಜಕುಮಾರ್‌ ಅಭಿನಯದ ರಣಧೀರ ಕಂಠೀರವ ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಕನ್ನಡ ಚಿತ್ರರಂಗದ ಎವರ್‌ ಗ್ರೀನ್‌ ಸಿನಿಮಾಗಳ ಪೈಕಿ ಒಂದಾಗಿರುವ ರಣಧೀರ ಕಂಠೀರವ ಚಿತ್ರ ಹತ್ತಾರು ವಿಶೇಷತೆಗಳ ಮೂಲಕ ಇಂದಿಗೂ ಕೂಡ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಇದೀಗ ಈಗ ರಾಜಕುಮಾರ್‌ ಮೊಮ್ಮಗ, ಅದೇ ಥರದ ಟೈಟಲ್​​​ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಹಿರಿಯ ನಟ ಕಂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಪುತ್ರ ಯುವ ರಾಜಕುಮಾರ್‌ ಎಂಟ್ರಿ, ಚಂದನವನದಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ.

ಭಾನುವಾರ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ನಡೆದ ಚಿತ್ರದ ಟೈಟಲ್‌ ಮತ್ತು ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ನಟ ಪುನೀತ್‌ ರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಶ್ರೀಮುರಳಿ, ವಿಜಯ ರಾಘವೇಂದ್ರ ಸೇರಿದಂತೆ ರಾಜಕುಮಾರ್‌ ಕುಟುಂಬ ವರ್ಗ, ಕನ್ನಡ ಚಿತ್ರರಂಗದ ಅನೇಕ ನಿರ್ದೇಶಕರು, ನಿರ್ಮಾಪಕರು ಭಾಗಿಯಾಗಿದರು. ಇದೀಗ ಈ ಡೈಲಾಗ್ ಟೀಸರ್​​​ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಿನಿ ಪ್ರೇಕ್ಷಕರು ಯುವ ರಣಧೀರ ಕಂಠೀರವನಿಗೆ ಬಹುಪರಾಕ್ ಹೇಳುತ್ತಿದ್ದಾರೆ.

ಅಣ್ಣಾವ್ರಂತೆಯೇ ಯುವ ಕೂಡ ಖಡಕ್ ಆಗಿಯೇ ಡೈಲಾಗ್ ಹೊಡೆದಿದ್ದಾರೆ ಜೊತೆಗೆ ಸಾಹಸ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ದೇಹವನ್ನು ಹುರಿಗೊಳಿಸಿ, ಗಡ್ಡದ ಲುಕ್‌ನಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ರಾಜ್ ಕುಟುಂಬದ ಅಭಿಮಾನಿಗಳಿಗೆ ಖುಷಿ ನೀಡಿದೆ. ಟೀಸರ್ ಬಿಡುಗಡೆ ನಂತರ ಮಾತನಾಡಿದ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ನನಗೆ ಒಬ್ಬ ಪ್ರೇಕ್ಷಕನಾಗಿ ಆತನ ಸಂಭಾಷಣೆ ಶೈಲಿ ಇಷ್ಟವಾಯ್ತು. ಅದನ್ನು ಕೇಳಿದಾಗ ನನ್ನ ತಂದೆ ನೆನಪಾಗ್ತಾರೆ ಅಂದರು.


ಸಾಕಷ್ಟು ತಯಾರಿ ಮಾಡಿಕೊಂಡೇ ಯುವರಾಜ್​ ಕುಮಾರ್​​ ಸಿನಿಮಾ ಮಾಡುತ್ತಿದ್ದಾರೆ. ಈ ರಗಡ್​ ಲುಕ್​ನ ಹಿಂದೆ ನಾಲ್ಕು ವರ್ಷದ ಪ್ರಿಪರೇಷನ್​ ಇದೆ. ಫೈಟಿಂಗ್​, ಡ್ಯಾನ್ಸ್​, ಅಭಿನಯದ ಬಗ್ಗೆ ಯುವ ರಾಜ್​​ಕುಮಾರ್​ ತರಬೇತಿ ಪಡೆದುಕೊಂಡಿದ್ದಾರೆ. ವಿಶೇಷ ಅಂದ್ರೆ ಇಲ್ಲಿವರೆಗೆ ರಾಜ್ ಕುಟುಂಬದವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಲವ್​ ಸ್ಟೋರಿ, ಅಥವಾ ಕಮರ್ಶಿಯಲ್ ಸಿನಿಮಾಗಳ ಮೂಲಕವೇ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಯುವರಾಜ್​​ ಕುಮಾರ್​ ಐತಿಹಾಸಿಕ, ಚಿತ್ರದಲ್ಲಿ ಕಾಣಿಸಿಕೊಳ್ಳೋ ಮೂಲಕ ಹೊಸ ಪ್ರಯತ್ನ ಮಾಡಿದ್ದಾರೆ.

ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿದ್ದಂತೆ ಯುವರಾಜ್​​ಕುಮಾರ್​ಗೆ ಬಿರುದು ಸಿಕ್ಕಿದೆ. ಮೆಗಾ ಪವರ್​​ಸ್ಟಾರ್​ ಅಂತ ಅಭಿಮಾನಿಗಳು ಕರೆಯಲು ಶುರು ಮಾಡಿದ್ದಾರೆ. ಮುಂದಿನ ವರ್ಷ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಸದ್ಯ ಈ ಚಿತ್ರಕ್ಕೆ ನಿರ್ಮಾಪಕರು ಯಾರು ಅನ್ನೋದು ಇನ್ನೂ ಕೂಡ ಫೈನಲ್ ಆಗಿಲ್ಲ. ಹೋಮ್​​ ಬ್ಯಾನರ್​​ನಲ್ಲಿ ಚಿತ್ರನಿರ್ಮಾಣವಾಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ಕೆಜಿಎಫ್ ಸಿನಿಮಾದಲ್ಲಿ ಕೆಲಸ ಮಾಡಿರುವ ಪುನೀತ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಾಗೆಯೇ ಸಂಗೀತ ನಿರ್ದೇಶಕ ರವಿ ಬಸ್ರೂರ್ 'ಯುವ ರಣಧೀರ ಕಂಠೀರವ' ಬ್ಯಾಂಡ್ ಬಜಾಯಿಸಿದ್ದಾರೆ. ಇನ್ನು ಸಂಕೇಶ್ ಛಾಯಾಗ್ರಹಣ, ಚೇತನ್ ಡಿಸೋಜಾ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಒಟ್ನಲ್ಲಿ ಎಂಟ್ರಿ ಕೊಡುತ್ತಲೆ ಯುವ ರಾಜ್​​ಕುಮಾರ್​ ಹೊಸ ಟ್ರೆಂಡ್​ ಸೆಟ್ ಮಾಡಿದ್ದಾರೆ.

Next Story

RELATED STORIES