Top

ಅಭಿ ಚಿತ್ರದ ಶೂಟಿಂಗ್​ ಸೆಟ್​ನಲ್ಲಿ ತೆಗೆದ ಫೋಟೋ ವೈರಲ್

ಸ್ಯಾಂಡಲ್​ವುಡ್​ಗೆ ಕಂಬ್ಯಾಕ್​ ಮಾಡೋ ಸೂಚನೆ ಕೊಟ್ರಾ ರಮ್ಯಾ

ಅಭಿ ಚಿತ್ರದ ಶೂಟಿಂಗ್​ ಸೆಟ್​ನಲ್ಲಿ ತೆಗೆದ ಫೋಟೋ ವೈರಲ್
X

ಸ್ಯಾಂಡಲ್​​ವುಡ್ ಕ್ವೀನ್​ ರಮ್ಯಾ ಇತ್ತೀಚೆಗೆ ಸೋಶೀಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟಿವ್​ ಆಗಿದ್ದಾರೆ. ರೀಸೆಂಟಾಗಿ ರಮ್ಯಾ ಪೋಸ್ಟ್​ ಮಾಡಿರುವ ಪೋಟೋವೊಂದು ಸಖತ್​ ವೈರಲ್​ ಆಗಿದ್ದು, ರಮ್ಯಾ ಚಿತ್ರರಂಗಕ್ಕೆ ವಾಪಸ್ಸಾಗೋ ಸೂಚನೆ ಕೊಟ್ಟಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಸ್ಯಾಂಡಲ್​ವುಡ್​​​ ರಮ್ಯಾ, ಕನ್ನಡ ಚಿತ್ರರಂಗದ ನಂಬರ್​ ಒನ್ ನಟಿ. ಕನ್ನಡದ ಎಲ್ಲಾ ಸ್ಟಾರ್ಗಳ ಜೊತೆ ಸ್ಕ್ರೀನ್​ ಶೇರ್ ಮಾಡಿರೋ ರಮ್ಯಾ, ಸಾಕಷ್ಟು ಸೂಪರ್​ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ರಮ್ಯಾ ರಾಜಕೀಯಕ್ಕೆ ಎಂಟ್ರಿ ಆಗ್ತಿದ್ದ ಹಾಗೇ ಚಿತ್ರರಂಗದಿಂದ ದೂರವಾದರು. ಕಾಂಗ್ರೆಸ್ ಪಕ್ಷದ ಸೋಶೀಯಲ್​ ಮೀಡಿಯಾ ಮುಖ್ಯಸ್ತೆಯಾಗಿದ್ದ ರಮ್ಯಾ ಕೇವಲ ಪಕ್ಷದ ವಿಚಾರಗಳನ್ನ ಮಾತ್ರ ಶೇರ್ ಮಾಡುತ್ತಿದ್ರೆ ಹೊರತು, ಪರ್ಸನಲ್​ ಆಗಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರಲಿಲ್ಲ. ಆದ್ರೀಗ ಪರ್ಸನಲ್​ ಅಕೌಂಟ್​ನಲ್ಲಿ ಹೆಚ್ಚು ಆ್ಯಕ್ಟಿವ್​ ಆಗಿದ್ದಾರೆ.


ಮೊನ್ನೆ ಮೊನ್ನೆಯಷ್ಟೇ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಫೋಟೋವಂದನ್ನ ಶೇರ್ ಮಾಡಿದ್ದಾರೆ. ರಮ್ಯಾ ಅಭಿನಯದ ಕನ್ನಡದ ಮೊದಲ ಸಿನಿಮಾ ಅಭಿ ಚಿತ್ರದ ಶೂಟಿಂ್ಗ್ ಸೆಟ್​ನಲ್ಲಿ ತೆಗೆದ ಪೋಟೋವೊಂದನ್ನ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು. ಯಾರೇ ಬರಲಿ, ಯಾರೇ ಇರಲಿ ನಿನ್ನ ರೇಂಜಿಗೆ ಯಾರಿಲ್ಲ, ಮತ್ತೆ ಸಿನಿಮಾ ಮಾಡಿ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.

ಈ ಫೋಟೋ ಮಾತ್ರವಲ್ದೆ, ರಮ್ಯಾ ಇನ್ನಷ್ಟು ​, ಸೆಲ್ಪಿಸ್, ಲುಕ್​ ಚೇಂಜ್ ಮಾಡಿರುವ ಫೋಟೋಗಳನ್ನ ಅಪಲೋಡ್​ ಮಾಡುತ್ತಿದ್ದಾರೆ ಹಾಗೂ ರಾಧಿಕಾ ಪಂಡಿತ್, ರಶ್ಮಿಕಾ ಪೋಟೋಗಳಿಗೆ ಕಾಮೆಂಟ್​ ಮಾಡ್ತಾ, ಚಿತ್ರರಂಗದವರ ಹುಟ್ಟುಹಬ್ಬಕ್ಕೆ ವಿಶ್​ ಮಾಡ್ತಾ ಮತ್ತೆ ಸ್ಯಾಂಡಲ್​ವುಡ್​ಗೆ ಕನೆಕ್ಟ್ ಆಗ್ತಾ ಇದ್ದಾರೆ.

ಇದೆನ್ನೆಲ್ಲಾ ನೋಡುತ್ತಿದ್ರೆ, ರಮ್ಯಾ ಸ್ಯಾಂಡಲ್​ವುಡ್​ ಮತ್ತೆ ಕಂಬ್ಯಾಕ್​ ಮಾಡೊ ಸೂಚನೆ ಕೊಡ್ತಿದ್ದಾರೆ ಅನ್ನೋ ಸುದ್ದಿ ದಟ್ಟವಾಗಿದೆ ಹಾಗೇನಾದ್ರೂ ಇದು ನಿಜವೇ ಆದ್ರೆ ರಮ್ಯಾ ಅಭಿಮಾನಿಗಳ ಖುಷಿವೇ ಪಾರವೇ ಇಲ್ಲ.

Next Story

RELATED STORIES