Top

ಚಿರು ನಿಜಜೀವನಕ್ಕೆ ಹೋಲುವಂತಿದೆ ಕ್ಷತ್ರಿಯಾ ಟೀಸರ್

ಚಿರಂಜೀವಿ ಸರ್ಜಾ ಅಭಿನಯದ ಈ ಎರಡು ಸಿನಿಮಾಗಳು ಮುಂದಿನವರ್ಷ ತೆರೆಗೆ ಬರೋ ಸಾಧ್ಯತೆಯಿದೆ

ಚಿರು ನಿಜಜೀವನಕ್ಕೆ ಹೋಲುವಂತಿದೆ ಕ್ಷತ್ರಿಯಾ ಟೀಸರ್
X

ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಪ್ರಯುಕ್ತ, ಚಿರು ಅಭಿನಯದ 2 ಸಿನಿಮಾಗಳ ಸಾಂಗ್​ ಮತ್ತು ಟ್ರೈಲರ್​ ರಿಲೀಸ್ ಆಗಿವೆ. ರಾಜಮಾರ್ತಾಂಡ ಚಿತ್ರದ ಹೀರೋ ಇಂಟ್ರೋಡಕ್ಷನ್ ಸಾಂಗ್​ ಮತ್ತು ಕ್ಷತ್ರಿಯ ಚಿತ್ರ ಟ್ರೈಲರ್​ ತೆರೆಕಂಡಿದ್ದು, ಎರಡು ಸಿನಿಮಾಗಳಲ್ಲಿ ಚಿರು ಮಾಸ್​ ಲುಕ್​ನಲ್ಲಿ ಮಿಂಚಿದ್ದಾರೆ.

ರಾಜಾಮಾರ್ತಾಂಡ. ಆ್ಯಕ್ಷನ್ ಜೊತೆಗೆ ಸೆಂಟಿಮೆಂಟ್ ಕಥಾಹಂದವಿರುವ ಸಿನಿಮಾ. ತನ್ನ ಸಾಮರ್ಥ್ಯದಿಂದ ಏನನ್ನು ಬೇಕಾದರೂ ಸಾಧಿಸುವ ಕ್ಯಾರೆಕ್ಟರ್ ನಲ್ಲಿ ಚಿತ್ರದ ನಾಯಕ ಚಿರು ಕಾಣಿಸಿಕೊಂಡಿದರು. ಈ ಹಿಂದೆ ರಾಜಮಾರ್ತಾಂಡ ಟೀಸರ್ ರಿಲೀಸ್​ ಆಗಿತ್ತು. ಇದೀಗ ಚಿರು ಹುಟ್ಟುಹಬ್ಬದ ಪ್ರಯುಕ್ತ ಹೀರೋ ಇಂಟ್ರೋಡಕ್ಷನ್​ ಸಾಂಗ್ ರಿಲೀಸ್​ ಮಾಡಿದೆ ಚಿತ್ರತಂಡ.

ಸರಿಯೊ ಸರಿಯೊ ರಾಜಮಾರ್ತಾಂಡ ಬರ್ತಾವ್ನೆ ಅಂತ ಶುರುವಾಗೋ ಈ ಇಂಟ್ರೋಡಕ್ಷನ್​ ಸಾಂಗ್​ನಲ್ಲಿ ಔಟ್ ಅಂಡ್​ ಔಟ್ ಮಾಸ್ ಲುಕ್​ನಲ್ಲಿ ಮಿಂಚಿದ್ದಾರೆ ಚಿರಂಜೀವಿ ಸರ್ಜಾ. ಅಂದ್ಹಾಗೇ ರಾಜಮಾರ್ತಾಂಡದ ಶೂಟಿಂಗ್​ 99 ಪರ್ಸೆಂಟ್ ಕಂಪ್ಲೀಟ್ ಆಗಿದ್ದು, ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದ್ಯಂತೆ. ಈ ಹಾಡನ್ನ ಒಂದಷ್ಟು ಹೊಸ ಐಡಿಯಾ ಮತ್ತು ತಂತ್ರಜ್ಪಾನದಿಂದ ಚಿತ್ರೀಕರಣ ಮಾಡೋ ಪ್ಲಾನ್​ ಇದೆ ಅಂತಾರೆ ನಿರ್ದೇಶಕ ರಾಮ್​ನಾರಾಯಣ್. ಈಗಾಗಲೇ ಚಿರು ಪಾತ್ರಕ್ಕೆ ಧ್ರುವಾ ಸರ್ಜಾ ಡಬ್ಬಿಂಗ್ ಮಾಡೋದು ಕನ್ಫರ್ಮ್​ ಆಗಿದೆ. ಇನ್ನು ಮುಂದಿನವರ್ಷ ರಾಜಮಾರ್ತಾಂಡ ಸಿನಿಮಾ ತೆರೆಗೆ ಬರ್ಲಿದೆ.

ಇನ್ನು ಅಭಿನಯದ ಕೊನೆಯ ಸಿನಿಮಾ ಕ್ಷತ್ರಿಯ ಚಿತ್ರದ ಟೀಸರ್​​ ಕೂಡ ಇಂದು ತೆರೆಕಂಡಿದೆ. ಈ ಟೀಸರ್ ಬಹಳ ಭಾವನಾತ್ಮಕವಾಗಿ ಚಿರು ಫ್ಯಾಮಿಲಿ ಮತ್ತು ಅಭಿಮಾನಿಗಳಿಗೆ ಕನೆಕ್ಟ್ ಆಗುತ್ತಿದೆ. ಯಾಕಂದ್ರೆ ಈ ಟ್ರೈಲರ್​ನಲ್ಲಿ ಚಿರು ಫ್ಯಾಮಿಲಿ ಜೊತೆ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸುವ ದೃಶ್ಯಗಳು ಹಾಗೂ ಟೀಸರ್ ಕೊನೆಯಲ್ಲಿ ಪುಟ್ಟ ಕಂದಮ್ಮನನ್ನ ಚಿರು ಎತ್ತಿ ಆಡಿಸುವ ದೃಶ್ಯಗಳಿದ್ದು,ಚಿರಂಜೀವಿ ನಿಜಜೀವನಕ್ಕೆ ಈ ಟೀಸರ್ ಹೋಲುವಂತಿದೆ.

ಕ್ಷತ್ರಿಯ ಚಿತ್ರ ಕೂಡ 90 ಪರ್ಸೆಂಟ್ ಶೂಟಿಂಗ್​ ಕಂಪ್ಲೀಟ್​ ಆಗಿದೆ. ಇನ್ನು ಎರಡರಿಂದ 3 ದಿನಗಳಷ್ಟೇ ಚಿರು ಈ ಶೂಟಿಂಗ್​ನಲ್ಲಿ ಭಾಗವಹಿಸಬೇಕಿತ್ತು. ಆದರೆ, ಇದ್ರಿಂದ ಚಿತ್ರದಲ್ಲಿ ಮೇಜರ್​ ಬದಲಾವಣೆ ಏನು ಆಗೋದಿಲ್ವಂತೆ. ವಿಶೆಷ ಅಂದ್ರೆ ಈ ಚಿತ್ರದಲ್ಲೂ ಕೂಡ ಚಿರು ಪಾತ್ರಕ್ಕೆ ಧ್ರುವಾ ಡಬ್ಬಿಂಗ್​ ಮಾಡೋ ಸಾಧ್ಯತೆಯಿದ್ದು, ಈ ಸಿನಿಮಾ ಕೂಡ ಆದಷ್ಟು ಬೇಗ ಬಿಗ್​ ಸ್ಕ್ರೀನ್​ ಮೇಲೆ ಬರಲಿದೆ ಅಂತಾರೆ ಕ್ಷತ್ರಿಯ ನಿರ್ಮಾಪಕ ಮನೀಷ್. ಅಂದ್ಹಾಗೇ ಕ್ಷತ್ರಿಯ ಸಿನಿಮಾದಲ್ಲಿ ಸೆಂಟಿಮೆಂಟ್, ಕಮರ್ಷಿಯಲ್​ ಅಂಶಗಳ ಜೊತೆಗೆ ಅಕ್ಕ ತಮ್ಮನ ಬಾಂಧವ್ಯದ ಕಥೆ ಇದೆ.

ಚಿರಂಜೀವಿ ಸರ್ಜಾ ಅಭಿನಯದ ಈ ಎರಡು ಸಿನಿಮಾಗಳು ಮುಂದಿನವರ್ಷ ತೆರೆಗೆ ಬರೋ ಸಾಧ್ಯತೆಯಿದೆ. ಇಷ್ಟೇ ಅಲ್ಲದೇ ಚಿರು ಸರ್ಜಾ ಕೈಯ್ಯಲ್ಲಿ ಸಾಕಷ್ಟು ಸಿನಿಮಾಗಳಿದ್ವು. ವರ್ಷಕ್ಕೆ 4 ರಿಂದ 5 ಸಿನಿಮಾಗಳ ಶೂಟಿಂಗ್​ ಮಾಡುತ್ತಿದ್ದರು ಚಿರು. ಆದರೆ, ಜೀವನವೆಂಬ ಸಿನಿಮಾವನ್ನ ಕಂಪ್ಲೀಟ್ ಮಾಡೋದ್ರೊಳಗೆ , ಕಟ್ ಹೇಳಿ ಚಿರುನಾ ಬಾರದ ಲೋಕಕ್ಕೆ ಕರೆದೊಯ್ದು ಬಿಡ್ತು ಆ ವಿಧಿ.

Next Story

RELATED STORIES