Top

38 ವರ್ಷಗಳ ಇತಿಹಾಸವಿರೋ ಜಾಗದಲ್ಲಿ ಜೇಮ್ಸ್​ ಶೂಟಿಂಗ್

33 ವರ್ಷಗಳಲ್ಲಿ ಯಾರಿಗೂ ಸಿಕ್ಕಿರಲಿಲ್ಲ ಪರ್ಮಿಶನ್

38 ವರ್ಷಗಳ ಇತಿಹಾಸವಿರೋ ಜಾಗದಲ್ಲಿ ಜೇಮ್ಸ್​ ಶೂಟಿಂಗ್
X

ಪವರ್​ ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಜೇಮ್ಸ್​​ 3 ಶೆಡ್ಯೂಲ್​ ಶೂಟಿಂಗ್​ ಮುಗಿಸಿ, 4 ನೇ ಹಂತದ ಶೂಟಿಂಗ್​ಗೆ ಪ್ಲಾನ್​ ಮಾಡಿಕೊಳ್ತಿದೆ. ಆದರೆ, ಜೇಮ್ಸ್​ ಟೀಂ ಒಂದು ವಿಶೇಷ ಜಾಗದಲ್ಲಿ ಶೂಟಿಂಗ್​ ಮಾಡಿದ್ದಾರೆ. 33 ವರ್ಷಗಳಲ್ಲಿ ಯಾರೊಬ್ಬರಿಗೂ ಸಿಗದ ಈ ಜಾಗ ಜೇಮ್ಸ್​ಗೆ ಸಿಕ್ಕಿದೆ.

ಜೇಮ್ಸ್. ದಿನದಿಂದ ದಿನಕ್ಕೆ ಚಿತ್ರದ ಮೇಲೆ ಕ್ಯೂರಿಯಾಸಿಟಿ ಹೆಚ್ಚಾಗ್ತಾನೇ ಇದೆ. ಕೆಲದಿನಗಳ ಹಿಂದಷ್ಟೇ ಉತ್ತರ ಕರ್ನಾಟಕದ ಕಡೆ ಶೂಟಿಂಗ್​ ಮುಗಿಸಿ ವಾಪಸ್ಸಾಗಿರೋ ಚಿತ್ರತಂಡ ಸದ್ಯ ಬೆಂಗಳೂರಿನಲ್ಲಿ 4 ನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗ್ತಿದೆ. ಆದರೆ, ಜೇಮ್ಸ್​​ ಸದ್ಯ ಸಖತ್​​ ವಿಚಾರವೊಂದಕ್ಕೆ ಸುದ್ದಿಯಾಗ್ತಿದೆ. ಒಂದು ಅದ್ಬುತವಾದ ಐಷಾರಾಮಿ ಜಾಗದಲ್ಲಿ ಜೇಮ್ಸ್​ ಚಿತ್ರೀಕರಣ ನಡೆಸಿದೆ..ಅರೇ ಇದ್ರೆಲ್ಲೇನಿದೆ ವಿಶೇಷ ಅಂದ್ರೆ,ಖಂಡಿತಾ ಇದು ಇಂಟ್ರೆಸ್ಟಿಂಗ್​ ಸುದ್ದಿನೇ.

ಬೆಂಗಳೂರಿನಲ್ಲಿರೋ38 ವರ್ಷಗಳ ಇತಿಹಾಸವಿರೋ ಲಕ್ಸುರಿ ಹೋಟೇಲ್​ ವಿಂಡ್ಸರ್ ಮ್ಯಾನರ್​ನಲ್ಲಿ ಜೇಮ್ಸ್​ ಶೂಟಿಂಗ್​ ಆಗಿದೆ. ಈ ಹೋಟೇಲ್​ ಬೆಂಗಳೂರಿನ ಬ್ಯುಸಿಯೆಸ್ಟ್ ಹೋಟೇಲ್. ಹಾಗಾಗಿ ಈ ಹೊಟೇಲ್​ನಲ್ಲಿ ಚಿತ್ರೀಕರಣಕ್ಕೆ ಅವಕಾಶ ಕೊಡೋದು ಸುಲಭದ ಮಾತಲ್ಲ. ಆದರೆ, ಇದೇ ಹೊಟೇಲ್​ನಲ್ಲಿ ಜೇಮ್ಸ್​ ಚಿತ್ರೀಕರಣ ನಡೆಸಿರೋದು ವಿಶೇಷ.

ಈ ಹಿಂದೆ ಅಂದ್ರೆ 33 ವರ್ಷಗಳ ಹಿಂದೆ ಅಂದ್ರೆ 1987ರಲ್ಲಿ ತೆರೆಕಂಡಿದ್ದ ಕಮಲ್ ಹಾಸನ್​ ಅಭಿನಯದ ಪುಷ್ಪಕ ವಿಮಾನ ಚಿತ್ರವನ್ನ ಈ ಖಾಸಗಿ ಹೋಟೇಲ್​ನಲ್ಲೇ ಚಿತ್ರೀಕರಣ ಮಾಡಲಾಗಿತ್ತು. ಪುಷ್ಪಕ ವಿಮಾನದ ಶೇಕಡ 90 ರಷ್ಟು ಭಾಗ ಶೂಟಿಂಗ್ ಇದೇ ವಿಂಡ್ಸರ್ ಮ್ಯಾನರ್​ ಹೊಟೇಲ್​ನಲ್ಲಿ ನಡೆದಿತ್ತು. ಸಿನಿಮಾ ಕನ್ನಡ ಸೇರಿದಂತೆ ಹಿಂದಿ, ಮಲೆಯಾಳಂ, ತಮಿಳು, ತೆಲುಗಿನಲ್ಲೂ ತೆರೆಕಂಡಿತ್ತು. ಇಡೀ ಸಿನಿಮಾ ಮೂಕಿ ಚಿತ್ರವಾಗಿದ್ದು, ಕಮಲ್​ ಹಾಸನ್​ ಅಭಿನಯಕ್ಕೆ ಸಿನಿಪ್ರಿಯರು ಮಾರು ಹೋಗಿದರು. ಚಿತ್ರರಂಗದಲ್ಲಿ ಪುಷ್ಪಕ ವಿಮಾನ ಇತಿಹಾಸ ಸೃಷ್ಟಿಸಿತ್ತು.

ಪುಷ್ಪಕ ವಿಮಾನ ಸಿನಿಮಾ ಚಿತ್ರೀಕರಣದ ನಂತರ, ಅಲ್ಲಿಂದ ಇಲ್ಲಿವರೆಗೂ ಅಂದ್ರೆ 33 ವರ್ಷಗಳ ಕಾಲ ಮತ್ಯಾವ ಸಿನಿಮಾ ಚಿತ್ರೀಕರಣ ಕೂಡ ಇಲ್ಲಿ ನಡೆದಿಲ್ಲ. ಆದರೆ, ಈಗ ಜೇಮ್ಸ್​​ ಇದೇ ಹೊಟೇಲ್​ನಲ್ಲಿ ಚಿತ್ರೀಕರಣ ನಡೆಸಿದೆ. ಅಂದ್ಹಾಗೇ ವಿಂಡ್ಸರ್ ಮ್ಯಾನರ್​ನಲ್ಲಿ ಜೇಮ್ಸ್​ ಚಿತ್ರತಂಡ 2 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದು , ಪುನೀತ್ ರಾಜ್​ಕುಮಾರ್, ಶ್ರೀಕಾಂತ್​ ಮತ್ತು ಮುಖೇಶ್​ ರಿಷಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದರು.

ಅಂದ್ಹಾಗೇ ಜೇಮ್ಸ್​​ ಸಿನಿಮಾದ ಕೆಲ ದೃಶ್ಯಗಳಿಗೆ ಈ ಹೋಟೆಲ್‌ ಮಾದರಿಯ ಕಟ್ಟಡದ ಅವಶ್ಯಕತೆ ಇತ್ತಂತೆ. ಲೊಕೇಶನ್‌ ಹುಡುಕುವಾಗ ಈ ಹೋಟೆಲ್‌ ಅದಕ್ಕೆ ಸೂಕ್ತ ಅನ್ನಿಸಿದ್ರಿಂದ, ಅನುಮತಿ ಪಡೆದು, ಚಿತ್ರೀಕರಣ ಮಾಡಲಾಗಿದ್ಯಂತೆ. ಈ ಹಿಂದೆ ಪುಷ್ಪಕ ವಿಮಾನದಲ್ಲಿ ಈ ಹೋಟೇಲ್​ ದೃಶ್ಯಗಳನ್ನ ಅದ್ಭುತವಾಗಿ ಸೆರೆಹಿಡಿಯಲಾಗಿತ್ತು. ಇದೀಗ ಜೇಮ್ಸ್​ನಲ್ಲಿಯೂ ವಿಶೇಷ ಶೈಲಿಯಲ್ಲಿರುವ ಈ ಹೊಟೇಲ್​ ದೃಶ್ಯಗಳನ್ನ ಇನ್ನು ಅಂದವಾಗಿ ತೋರಿಸೊ ಪ್ರಯತ್ನ ಮಾಡಿದ್ದಾರಂತೆ.

ಸದ್ಯ ಜೇಮ್ಸ್​ 40 ಪರ್ಸೆಂಟ್ ಶೂಟಿಂಗ್​ ಕಂಪ್ಲೀಟ್ ಮಾಡಿದ್ದು, ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ನಿರ್ದೇಶಕ ಚೇತನ್​ ಕುಮಾರ್​ ಜೇಮ್ಸ್​ಗೆ ಆ್ಯಕ್ಷನ್​ ಕಟ್ ಹೇಳ್ತಿದ್ದಾರೆ.

Next Story

RELATED STORIES