Top

ಮದಕರಿ ಶೂಟಿಂಗ್​ ಪ್ರಾರಂಭಿಸುವ ಬಗ್ಗೆ ಚಿತ್ರತಂಡ ಹೇಳಿದ್ದೇನು?

ಶೂಟಿಂಗ್​ ಪುನರಾರಂಭಿಸುವ ಬಗ್ಗೆ ಚಿತ್ರತಂಡವನ್ನ ಕೇಳಿದ್ರೆ, ಥಿಯೇಟರ್​​ ಓಪನ್​ ಆಗುವವರೆಗೂ ಶೂಟಿಂಗ್​ಗೆ ಹೋಗಲ್ಲ ಅಂತ ಹೇಳಿದ್ಧಾರೆ.

ಮದಕರಿ ಶೂಟಿಂಗ್​ ಪ್ರಾರಂಭಿಸುವ ಬಗ್ಗೆ ಚಿತ್ರತಂಡ ಹೇಳಿದ್ದೇನು?
X

ಕೊರೊನಾ ಅಟ್ಟಹಾಸದ ನಡುವೆಯೂ ಸ್ಯಾಂಡಲ್​ವುಡ್​ನಲ್ಲಿ ಸಿನಿಮಾಗಳ ಚಿತ್ರೀಕರಣ ಪುನರಾರಂಭವಾಗಿದೆ. ಸುದೀಪ್​, ಶಿವಣ್ಣ ಸೇರಿದಂತೆ ಸ್ಟಾರ್​ ನಟರು ಶೂಟಿಂಗ್​ ಸೆಟ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದೆಲ್ಲದರ ಮಧ್ಯೆ ರಾಜವೀರಮದಕರಿ ನಾಯಕ ಸಿನಿಮಾ ಶೂಟಿಂಗ್​ ಯಾವಾಗ ಶುರುವಾಗುತ್ತೆ(?) ಈ ಬಗ್ಗೆ ಚಿತ್ರತಂಡ ಹೇಳೋದ್ದೇನು(?)

ಕನ್ನಡ ಚಿತ್ರರಂಗದ ಮಹತ್ವಾಕಾಂಕ್ಷೆಯ ಐತಿಹಾಸಿಕ ಸಿನಿಮಾ ರಾಜವೀರ ಮದಕರಿ ನಾಯಕ. ಎಸ್​.ವಿ ರಾಜೇಂದ್ರ ಸಿಂಗ್​ ಬಾಬು ನಿರ್ದೇಶನದ ಚಿತ್ರಕ್ಕೆ ಧೀರ ರಾಕ್​ಲೈನ್​ ವೆಂಕಟೇಶ್​ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​​ ದುರ್ಗದ ಹುಲಿ ಮದಕರಿ ನಾಯಕರ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ 15 ದಿನಗಳ ಮೊದಲ ಶೆಡ್ಯೂಲ್​ ಶೂಟಿಂಗ್​ ಮುಗಿದಿದ್ದು, ಕೊರೊನಾ ಅಟ್ಟಹಾಸದಿಂದ ಶೂಟಿಂಗ್​ಗೆ ಬ್ರೇಕ್​ ಬಿದ್ದಿದೆ.

ಎಲ್ಲಾ ಅಂದುಕೊಂಡಂತೆ ಆಗಿದ್ರೆ, ರಾಜಸ್ಥಾನದಲ್ಲಿ ರಾಜವೀರ ಮದಕರಿ ನಾಯಕ ಚಿತ್ರದ ಎರಡನೇ ಶೆಡ್ಯೂಲ್​ ಶುರುವಾಗಬೇಕಿತ್ತು. ಅಷ್ಟರಲ್ಲಿ ಕೊರೊನಾ ಹಾವಳಿ ಶುರುವಾಗಿ ಲಾಕ್​ಡೌನ್​ ಘೋಷಣೆಯಾಯ್ತು. ಈಗಾಗಲೇ ಸರ್ಕಾರ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಹೈದರಾಬಾದ್​ನಲ್ಲಿ ಫ್ಯಾಂಟಮ್​ ಸಿನಿಮಾ ಚಿತ್ರೀಕರಣ ನಡೀತಿದ್ರೆ, ಬೆಂಗಳೂರಿನಲ್ಲಿ ಕೆಜಿಎಫ್​​-2 ಶೂಟಿಂಗ್​​ ಪುನರಾರಂಭವಾಗಿದೆ. ಶಿವಣ್ಣ ನಟನೆಯ ಭಜರಂಗಿ-2 ಸಣ್ಣ ಶೆಡ್ಯೂಲ್​ ಚಿತ್ರೀಕರಣ ನಡೆಸಿದ್ದಾರೆ.

ಸೆಪ್ಟೆಂಬರ್​ನಲ್ಲಿ ಮತ್ತಷ್ಟು ದೊಡ್ಡ ಸಿನಿಮಾಗಳ ಚಿತ್ರೀಕರಣಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಇದೆಲ್ಲದರ ನಡುವ ದರ್ಶನ್​ ಅಭಿನಯದ ರಾಜವೀರ ಮದಕರಿ ನಾಯಕ ಶೂಟಿಂಗ್​ ಯಾವಾಗ ಅನ್ನೋ ಪ್ರಶ್ನೆ ಎದ್ದಿದೆ. ಚಿತ್ರಮಂದಿರದ ಬಾಗಿಲು ಓಪನ್​ ಆದ್ಮೇ ಚಿತ್ರೀಕರಣ ನಡೆಸೋದು ಉತ್ತಮ ಅಂತ ಈಗಾಗಲೇ ದರ್ಶನ್​ ಹೇಳಿದ್ದಾರೆ. ಆದರೆ, ಬೇರೆ ಸಿನಿಮಾಗಳ ಚಿತ್ರೀಕರಣ ಶುರುವಾಗುತ್ತಿದೆ. ಹಾಗಾಗಿ ಮದಕರಿನಾಯಕ ಶೂಟಿಂಗ್​ ಕೂಡ ಶುರುವಾಗುತ್ತಾ ಅನ್ನೋ ಕುತೂಹಲ ಕೆರಳಿದೆ.

ಸಿನಿಮಾ ಶೂಟಿಂಗ್​ ತಡವಾದಷ್ಟು ರಿಲೀಸ್​ ಕೂಡ ತಡವಾಗಲಿದೆ. ಹೇಳಿಕೇಳಿ ರಾಜವೀರ ಮದಕರಿ ನಾಯಕ ಐತಿಹಾಸಿಕ ಸಿನಿಮಾ. ಐತಿಹಾಸಿಕ ಸ್ಥಳಗಳಲ್ಲೇ ಶೂಟಿಂಗ್​ ಮಾಡಬೇಕಿದೆ. ರಾಜಸ್ಥಾನ, ಚಿತ್ರದುರ್ಗದ ಕೋಟೆ ಮತ್ತು ಮುಂಬೈನಲ್ಲಿ ಸೆಟ್​ಗಳನ್ನ ಹಾಕಿ ಚಿತ್ರೀಕರಣ ನಡೆಸೋ ಪ್ಲಾನ್​ನಲ್ಲಿತ್ತು ಚಿತ್ರತಂಡ ಅದಕ್ಕೆ ಕೊರೊನಾ ಅಡ್ಡಗಾಲು ಹಾಕಿದೆ. ಸದ್ಯ ಮತ್ತೆ ಶೂಟಿಂಗ್​ ಪುನರಾರಂಭಿಸುವ ಬಗ್ಗೆ ಚಿತ್ರತಂಡವನ್ನ ಕೇಳಿದ್ರೆ, ಥಿಯೇಟರ್​​ ಓಪನ್​ ಆಗುವವರೆಗೂ ಶೂಟಿಂಗ್​ಗೆ ಹೋಗಲ್ಲ ಅಂತ ಹೇಳಿದ್ಧಾರೆ.

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ದೊಡ್ಡ ಕ್ಯಾನ್ವಾಸ್​​ ಸಿನಿಮಾ ರಾಜವೀರ ಮದಕರಿ. ಸಿನಿಮಾ ಶೂಟಿಂಗ್​ಗೆ ಎಷ್ಟು ದಿನ ಬೇಕಾಗುತ್ತೆ(?) ಪೋಸ್ಟ್​ ಪ್ರೊಡಕ್ಷನ್​​​​ಗೆ ಎಷ್ಟು ದಿನಗಳು ಬೇಕಾಗಬಹುದು ಅಂತ ಈಗಲೇ ಹೇಳೋಕ್ಕೆ ಕಷ್ಟ. ಚಿತ್ರತಂಡ ಕೂಡ ಇದೇ ಮಾತನ್ನ ಹೇಳಿತ್ತು. ಹಾಗಾಗಿ ಸಿನಿಮಾ ಶೂಟಿಂಗ್​ ತಡವಾದಂತೆ ರಿಲೀಸ್​ ಕೂಡ ತಡವಾಗಲಿದೆ. 2021ರ ಅಂತ್ಯಕ್ಕೆ ಅಥವಾ 2022ರಲ್ಲಿ ತೆರೆಮೇಲೆ ಮದಕರಿನಾಯಕನ ದರ್ಬಾರ್​ ಶುರುವಾಗಬಹುದು.

Next Story

RELATED STORIES