Top

ಸ್ಯಾಂಡಲ್​ವುಡ್​ನಲ್ಲಿ 'ದುಬಾರಿ'ಯಾದ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ

'ಅದ್ಧೂರಿ' 'ಭರ್ಜರಿ' ಬಳಿಕ ಈಗ ಧ್ರುವ 'ದುಬಾರಿ'

ಸ್ಯಾಂಡಲ್​ವುಡ್​ನಲ್ಲಿ ದುಬಾರಿಯಾದ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ
X

ಪೊಗರು ನಂತರ ಆ್ಯಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾ ಮತ್ತು ನಂದಕಿಶೋರ್​ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರೋ ಸುದ್ದಿ ಕೇಳ್ತಾನೇ ಇದ್ವಿ. ಇದೀಗ ಈ ಚಿತ್ರ ಅಫೀಶಿಯಲ್​ ಆಗಿ ಅನೌನ್ಸ್​ ಆಗಿದ್ದು, ಸಿಂಪಲ್​ ಆಗಿ ಮುಹೂರ್ತ ನೆರವೇರಿದೆ.

ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಎಕ್ಸ್​ಪೆಕ್ಡೆಡ್​ ಸಿನಿಮಾ ಪೊಗರು. ಸದ್ಯ ಪೊಗರು ಶೂಟಿಂಗ್​ ಕೊನೆಹಂತದಲ್ಲಿದ್ದು, ಇನ್ನೇನು ರಿಲೀಸ್​ಗೆ ರೆಡಿಯಾಗಿದೆ. ಈಗಾಗಲೇ ಚಿತ್ರದ ಡೈಲಾಗ್​ ಟೀಸರ್​, ಸಾಂಗ್ಸ್​ ಸಖತ್​ ಸೌಂಡ್ ಮಾಡುತ್ತಿದ್ದು, ಈ ನಡುವೆ ಧ್ರುವ ಸರ್ಜಾ ಹೊಸ ಸಿನಿಮಾ ಸೆಟ್ಟೇರಿದೆ.


ಆ್ಯಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಕಳೆದ 2-3 ವರ್ಷಗಳಿಂದ ಪೊಗರು ಸಿನಿಮಾದ ಕೆಲಸಗಳಲ್ಲೇ ಬ್ಯುಸಿ ಇದ್ರು. ಇದೀಗ ಆ ಸಿನಿಮಾದ ಕೆಲಸಗಳನ್ನು ಕಂಪ್ಲೀಟ್ ಮಾಡಿರೋ, ಧ್ರುವ ಮುಂದಿನ ಸಿನಿಮಾಗೆ ಚಾಲನೆ ಸಿಕ್ಕಿದೆ. ಪೊಗರು ನಂತರ ಮತ್ತೊಮ್ಮೆ ನಿರ್ದೇಶಕ ನಂದಕಿಶೋರ್‌ ಜೊತೆ ಆ್ಯಕ್ಷನ್ ಪ್ರಿನ್ಸ್​ ಕೈಜೋಡಿಸಿದ್ದಾರೆ. ಉದಯ್ ಮೆಹ್ತಾ ನಿರ್ಮಾಣದ ಈ ಸಿನಿಮಾಗೆ ದುಬಾರಿ ಅಂತ ಟೈಟಲ್ ಕೂಡ ಫಿಕ್ಸ್​ ಆಗಿದೆ.

ಅದ್ಧೂರಿ ಬಹದ್ದೂರ್, ಭರ್ಜರಿ ನಂತರ, ಪೊಗರು ರಿಲೀಸ್​ಗೂ ಮುನ್ನವೇ, ಧ್ರುವ ದುಬಾರಿಯಾಗಿದ್ದಾರೆ. ಬೆಂಗಳೂರಿನ ಶ್ರೀವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ, ಬೆಳಿಗ್ಗೆ 5 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.


ಪೊಗರು ಸಿನಿಮಾದಲ್ಲಿ ಔಟ್​ ಆ್ಯಂಡ್​ ಔಟ್​ ರಗಡ್​ನಲ್ಲಿ ಕಾಣಿಸಿಕೊಂಡಿರುವ ಧ್ರುವ ಸರ್ಜಾ ದುಬಾರಿಗಾಗಿ ಲುಕ್ ಚೇಂಜ್ ಮಾಡಿಕೊಳ್ಳಲಿದ್ದಾರಂತೆ. ಈ ಬಗ್ಗೆ ಸ್ವತಃ ಧ್ರುವ ಸರ್ಜಾ ಹೇಳಿಕೊಂಡಿದ್ದಾರೆ. ಪೊಗರು ಚಿತ್ರಕ್ಕಾಗಿ ಲಾಂಗ್​ ಹೇರ್, ಬಿಯರ್ಡ್​ ಲುಕ್​ನಲ್ಲಿದ್ದ ಧ್ರುವಾ, ದುಬಾರಿ ಚಿತ್ರಕ್ಕಾಗಿ ಸಖತ್ ಸ್ಟೈಲಿಶ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಚಿತ್ರದ ಟೈಟಲ್​ ತುಂಬಾನೇ ವಿಭಿನ್ನವಾಗಿದ್ದು ಭಾರಿ ಕುತೂಹಲ ಮೂಡಿಸಿದೆ. ದುಬಾರಿ ಎಂದಾಕ್ಷಣ ಎಲ್ಲರೂ ಹಣದ ಶ್ರೀಮಂತಿಕೆ ಎಂದುಕೊಳ್ಳುವವರೇ ಹೆಚ್ಚು. ಆದರೆ, ಇಲ್ಲಿ ನಾಯಕ ಸಂಬಂಧ ಮತ್ತು ಭಾಂಧವ್ಯದ ಶ್ರೀಮಂತಿಕೆ ಹೊಂದಿರ್ತಾನೆ. ತುಂಬು ಕುಟುಂಬದಲ್ಲಿನ ಸಂಬಂಧಗಳ ಬೆಲೆಯನ್ನು ಸಿನಿಮಾದಲ್ಲಿ ನೋಡಬಹುದು ಅಂತಾರೆ ನಿರ್ದೇಶಕ ನಂದ ಕಿಶೋರ್‌.


ಇನ್ನು ಪೊಗರು ಚಿತ್ರದಲ್ಲಿ ಕೆಲಸ ಮಾಡಿದ ಟೀಮ್​​ ಈ ಚಿತ್ರಕ್ಕೂ ಕೆಲಸ ಮಾಡಲಿದೆ. ಈ ಚಿತ್ರಕ್ಕೆ ಚಂದನ್​ ಶೆಟ್ಟಿ ಸಂಗೀತ ನೀಡಲಿದ್ದಾರೆ. ಪೊಗರು ಚಿತ್ರದ ಮ್ಯೂಸಿಕ್​ ಈಗಾಗಲೇ ಸೂಪರ್ ಹಿಟ್ ಆಗಿದ್ದು ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಖರಾಬು ಹಾಡು ಎಲ್ಲಾ ರೆಕಾರ್ಡ್​ಗಳನ್ನು ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ. ದುಬಾರಿ ಸಿನಿಮಾದಲ್ಲಿ ಇದೇ ಚಾರ್ಮ್​ ಇರಲಿದೆ ಅಂತಾರೆ ಚಂದನ್ ಶೆಟ್ಟಿ.

Next Story

RELATED STORIES