Top

ಕುತೂಹಲ ಹುಟ್ಟಿಸಿದೆ ACT 1978 ಟ್ರೇಲರ್

ಟ್ರೇಲರ್​ ನೋಡಿ ಮೆಚ್ಚಿ ಕೊಂಡಾಡಿದ ಪವರ್​ಸ್ಟಾರ್

ಕುತೂಹಲ ಹುಟ್ಟಿಸಿದೆ ACT 1978 ಟ್ರೇಲರ್
X

ಪೋಸ್ಟರ್​ನಿಂದಲೇ ಕುತೂಹಲ ಹುಟ್ಟುಹಾಕಿದ್ದ ಆ್ಯಕ್ಟ್ 1978 ಸಿನಿಮಾ ರೀಸೆಂಟಾಗಿ ಚಿತ್ರದ ಲಿರಿಕಲ್​ ಸಾಂಗೊಂದನ್ನ ರಿಲೀಸ್ ಮಾಡಿತ್ತು. ಆದರೆ ಈಗ ಚಿತ್ರದ ಟ್ರೈಲರ್​ ರಿಲೀಸ್ ಆಗಿದ್ದು, ಸಿನಿಪ್ರಿಯರು ಮಾತ್ರವಲ್ದೆ, ಸ್ವತಃ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಟ್ರೈಲರ್​ ನೋಡಿ ಫಿದಾ ಆಗಿದ್ದಾರೆ.

ಆ್ಯಕ್ಟ್ 1978, ಗರ್ಭಧಾರಿಣಿಯಾಗಿರುವ ಚಿತ್ರದ ನಾಯಕಿ ಹೊಟ್ಟೆಗೆ ಬಾಂಬ್​ ಕಟ್ಟಿಕೊಂಡಿರುವ ಪೋಸ್ಟರ್ ರಿಲೀಸ್ ಮಾಡಿತ್ತು ಚಿತ್ರತಂಡ. ಪೋಸ್ಟರ್​ನಿಂದಲೇ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿತ್ತು. ಅಲ್ಲಿಂದ ಇಲ್ಲಿವರೆಗೂ ಯಾವುದೇ ಸುದ್ದಿ ಇಲ್ಲದೇ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್​ ಕೆಲಸಗಳನ್ನ ಮುಗಿಸಿದೆ ಚಿತ್ರತಂಡ. ಇದೀಗ ಆಕ್ಟ್ 1978 ಸೌಂಡ್ ಮಾಡೋಕ್ಕೆ ಶುರುಮಾಡಿದೆ.

ವಾರದ ಹಿಂದೆ ಚಿತ್ರದ ಲಿರಿಕಲ್​ ಸಾಂಗೊಂದು ರಿಲೀಸ್ ಆಗಿ ಸಿನಿಪ್ರಿಯರ ಗಮನ ಸೆಳೆದಿತ್ತು. ಆದರೆ, ಇದೀಗ ಚಿತ್ರದ ಟೈಲರ್​ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಕೇವಲ ಸಿನಿಪ್ರಿಯರು ಮಾತ್ರವಲ್ದೆ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಕೂಡ ಟ್ರೈಲರ್​ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಲೀಸ್​ ಆದ 24 ಗಂಟೆಗಳಲ್ಲಿ ಸೋಶೀಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅಂದ್ಹಾಗೇ ಆ್ಯಕ್ಟ್ 1978 ಚಿತ್ರದ ಸ್ಯಾಂಪಲ್​ಗಳು ಪಿಆರ್​ಕೆ ಆಡಿಯೋ ಮೂಲಕವೇ ರಿಲೀಸ್ ಆಗಿದೆ.

ಆ್ಯಕ್ಟ್ 1978 ಚಿತ್ರದ ಸ್ಟೋರಿಲೈನ್​ ಬಹಳ ಹೊಸದಾಗಿದ್ದು, ಸಾಮಾನ್ಯರು ಸರ್ಕಾರದಿಂದ ತಮಗೆ ಸಿಗಬೇಕಾಗಿರುವ ಸವಲತ್ತುಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಹೇಗೆ ಅಲೆಯುತ್ತಾರೆ. ಸ್ಪಂದಿಸದ ವ್ಯವಸ್ಥೆ ಹಾಗೂ ಸರ್ಕಾರಿ ಅಧಿಕಾರಿಗಳ ವಿರುದ್ಧ ಹೇಗೆ ತಿರುಗಿ ಬೀಳುತ್ತಾರೆ. ಗರ್ಭಿಣಿಯಾಗಿರುವ ಹೆಣ್ಣುಮಗಳೊಬ್ಬಳು ಇದರಿಂದ ಬೇಸತ್ತು, ಹೊಟ್ಟೆಗೆ ಬಾಂಬ್​ ಕಟ್ಟಿಕೊಂಡು ಸರ್ಕಾರಿ ಕಚೇರಿಯನ್ನೇ ಹೇಗೆ ಹೈಜಾಕ್​ ಮಾಡುತ್ತಾರೆ. ಅನ್ನೊದೇ ಚಿತ್ರದ ಇಂಟ್ರೆಸ್ಟಿಂಗ್ ಕಥೆ.

ಅಂದ್ಹಾಗೇ ಚಿತ್ರಕ್ಕೆ ನಾತಿಚರಾಮಿ ಖ್ಯಾತಿಯ ಮಂಸೋರೆ ಆ್ಯಕ್ಷನ್​ ಕಟ್ ಹೇಳಿದ್ದು, ಪ್ರಮುಖ ಪಾತ್ರಗಳಲ್ಲಿ ಯಙ್ಞ ಶೆಟ್ಟಿ, ಬಿ ಸುರೇಶ್‌, ಪ್ರಮೋದ್‌ ಶೆಟ್ಟಿ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್‌ ಹೀಗೆ ದೊಡ್ಡ ತಾರಾಬಳಗವೇ ಕಾಣಿಸಿಕೊಂಡಿದೆ. ಇನ್ನು ಇದೇ ತಿಂಗಳು ಚಿತ್ರವನ್ನ ತೆರೆಗೆ ತರೋ ಪ್ಲಾನ್​ನಲ್ಲಿದೆ ಚಿತ್ರತಂಡ.

Next Story

RELATED STORIES