Top

ತೆಲುಗು ಸಿನಿಮಾರಂಗದ ಕಲಾವಿದ ನರ್ಸಿಂಗ್​ ಯಾದವ್​ ಇನ್ನಿಲ್ಲ

ನರ್ಸಿಂಗ್​ ಯಾದವ್​ ಅವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು.

ತೆಲುಗು ಸಿನಿಮಾರಂಗದ ಕಲಾವಿದ ನರ್ಸಿಂಗ್​ ಯಾದವ್​ ಇನ್ನಿಲ್ಲ
X

ಹೈದರಾಬಾದ್​: ತೆಲುಗು ಚಿತ್ರರಂಗದ ಖ್ಯಾತ ನಟ ನರ್ಸಿಂಗ್​ ಯಾದವ್ (52) ವಿಧಿವಶರಾಗಿದ್ದಾರೆ. ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಹೈದರಾಬಾದ್​ನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ನರ್ಸಿಂಗ್​ ಯಾದವ್​ ಅವರು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು.

ನರ್ಸಿಂಗ್ ಯಾದವ್ ಅನೇಕ ಸಿನಿಮಾಗಳಲ್ಲಿ ಹಾಸ್ಯ ಮತ್ತು ಖಳನಟನಾಗಿ ಮಿಂಚಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿ ಸೇರಿದಂತೆ ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸಿನಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

1968ರಲ್ಲಿ ಜನಿಸಿದ ನರ್ಸಿಂಗ್ ಯಾದವ್, ತೆಲುಗಿನ ಹೇಮಹೆಮಿಲು ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಮೊಮೆಂಟ್ ಸಿನಿಮಾದಲ್ಲಿ ನಟಿಸಿದ್ದರು ಈ ಸಿನಿಮಾ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು.

ಯಾದವ್ ಮಾಯಲೋಡು, ಅಲ್ಲರಿ ಪ್ರೇಮಿಕುಡು, ಮುಠಾಮೇಸ್ತ್ರಿ, ಮಾಸ್ಟರ್ , ನವೋಸ್ತಾನಂತೆ ನೆನೋದ್ದಂಟಾನಾ, ಈಡಿಯಟ್, ಪೋಕಿರಿ, ಜಾನಿ ಸೇರಿದಂತೆ ಪ್ರಮುಖ ಸಿನಿಮಾಗಳಲ್ಲಿ ನಟಿಸಿದ್ದಾರೆ. ನರ್ಸಿಂಗ್ ಯಾದವ್ ಕೊನೆಯ ಬಾರಿಗೆ ನರ್ಸಿಂಗ್ ಯಾದವ್ ಚಿರಂಜೀವಿ ಅಭಿನಯದ 150ನೇ ಸಿನಿಮಾ ಖೈದಿ ನಂಬರ್ 150 ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನರ್ಸಿಂಗ್ ಯಾದವ್ ಪತ್ನಿ ಚಿತ್ರ ರುತ್ವಿಕ್ ಮತ್ತು ಮಗನನ್ನು ಅಗಲಿದ್ದಾರೆ.

Next Story

RELATED STORIES