Top

ಹುಟ್ಟುಹಬ್ಬದ ದಿನ ಸಾಮಾಜಿಕ ಬದ್ಧತೆ ಮೆರೆಯಲಿರೋ ಕಿಚ್ಚ

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಶಾಂತಿ ನಿವಾಸ ಎಂಬ ಹೆಸರಿನಲ್ಲಿ ವೃದ್ಧಾಶ್ರಮ ನಿರ್ಮಾಣಕ್ಕೆ ಶಂಕು ಸ್ಥಾಪನೆ.

ಹುಟ್ಟುಹಬ್ಬದ ದಿನ ಸಾಮಾಜಿಕ ಬದ್ಧತೆ ಮೆರೆಯಲಿರೋ ಕಿಚ್ಚ
X

ಕೊರೊನಾ ಸಮಸ್ಯೆಯಿಂದ ಈ ಬಾರಿ ಎಲ್ಲಾ ಸ್ಯಾಂಡಲ್​ವುಡ್​ ಸ್ಟಾರ್​ಗಳ ಹುಟ್ಟುಹಬ್ಬವೂ ಕಳೆಗುಂದಿದೆ. ಅದೇ ರೀತಿ ಸೆಪ್ಟೆಂಬರ್ 2 ರಂದು ಕಿಚ್ಚನ ಹುಟ್ಟುಹಬ್ಬದ ಸಂಭ್ರಮಕ್ಕೂ ಬ್ರೇಕ್​ ಬಿದ್ದಿದ್ದು, ಅದ್ದೂರಿತನಕ್ಕೆ ಬದಲಾಗಿ ಅರ್ಥಪೂರ್ಣವಾಗಿ ನೆಚ್ಚಿನ ನಟನ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಲು ಪ್ಲಾನ್​ ಮಾಡಿದ್ದಾರೆ ಕಿಚ್ಚ ಚಾರಿಟೇಬಲ್​ ಟ್ರಸ್ಟ್.

ಸೆಪ್ಟಂಬರ್​ 2 ರಂದು ಕಿಚ್ಚನ ಹುಟ್ಟುಹಬ್ಬಕ್ಕೆ ಕಿಚ್ಚ ಚಾರಿಟೇಬಲ್​ ಸೂಸೈಟಿ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಳಲಾಗಿದೆ. ವಿಶೇಷವಾಗಿ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಶಾಂತಿ ನಿವಾಸ ಎಂಬ ಹೆಸರಿನಲ್ಲಿ ವೃದ್ಧಾಶ್ರಮ ಸ್ಥಾಪಿಸಲು ಮುಂದಾಗಿದ್ದು, ಹುಟ್ಟುಹಬ್ಬದ ದಿನ ಕಟ್ಟಡದ ಶಂಕುಸ್ಥಾಪನೆ ನೆರವೇರಲಿದೆ. ವಿಶೇಷ ಅಂದರೆ ಈ ವೃದ್ಧಾಶ್ರಮಕ್ಕೆ ಬಂದವರ ಕುಟುಂಬದವರ ಜೊತೆ ಮಾತುಕತೆ ನಡೆಸಿ, ಏನೆ ಸಮಸ್ಯೆಗಳಿದ್ರೂ, ಬಗೆಹರಿಸಿ, ಅವರನ್ನ ಮತ್ತೆ ಕುಟುಂಬದೊಂದಿಗೆ ಒಟ್ಟಾಗಿ ಸೇರಿಸೋದು ಈ ಶಾಂತಿನಿವಾಸ ವೈದ್ದಾಶ್ರಮದ ಮುಖ್ಯ ಉದ್ದೇಶವಾಗಿದೆ.

ಇನ್ನು ಕರ್ನಾಟಕದ ಪ್ರತಿಜಿಲ್ಲೆಯಲ್ಲಿರುವ ಪ್ರಮುಖ ದೇವಸ್ಥಾನದಲ್ಲಿ ಏಕಕಾಲಕ್ಕೆ ಅಂದ್ರೆ ಬೆಳಗ್ಗೆ 7 ಗಂಟೆಗೆ ಕಿಚ್ಚನ ಹೆಸ್ರಿನಲ್ಲಿ ವಿಶೇಷ ಪೂಜೆ ನೆರವೇರಲಿದೆ. ಸಮಯ ಸರಿಯಾಗಿ 11 ಗಂಟೆಗೆ ರಾಜ್ಯದ ವಿವಿಧ ಅನಾಥಾಶ್ರಮಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ ಹಾಗೂ ಮದ್ಯಾಹ್ನ 3 ಗಂಟೆಗೆ ಸರ್ಕಾರಿ ಕಛೇರಿಗಳಲ್ಲಿ ಮಾಸ್ಕ್ ವಿತರಣೆ ಮಾಡಲಾಗುತ್ತಿದೆ.

ಸದ್ಯ ಇದು ಕಿಚ್ಚನ 47 ನೇ ಹುಟ್ಟುಹಬ್ಬವಾಗಿರೋದ್ರಿಂದ ಬೆಂಗಳೂರಿನ 47 ಅನಾಥಾಶ್ರಮಕ್ಕೆ ದಿನಸಿ ಕಿಟ್​ಗಳನ್ನ ವಿತರಣೆ ಮಾಡಲಾಗ್ತಿದ್ದು, ಸಂಜೆ 6 ಗಂಟೆಗೆ ಸರಿಯಾಗಿ ಬಿಗ್​ಬಾಸ್​ ಖ್ಯಾತಿಯ ವಾಸುಕಿ ವೈಭವ್ ,ಮೊದಲು ಮಾನವನಾಗು ಎಂಬ ಹಾಡನ್ನ ಕಿಚ್ಚನಿಗಾಗಿ ಡೆಡಿಕೇಟ್ ಮಾಡಲಿದ್ದಾರೆ.

ಒಟ್ಟಾಯಾಗಿ ಈ ಬಾರಿ ಕಿಚ್ಚನ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸದೇ ಅರ್ಥಫೂರ್ಣವಾಗಿ ಆಚರಣೆ ಮಾಡಲು ಹೊರ್ಟಿದ್ದಾರೆ ಕಿಚ್ಚ ಚಾರಿಟೇಬಲ್​ ಸೊಸೈಟಿ.

Next Story

RELATED STORIES