Top

ಕೆಜಿಎಫ್​ ಚಾಪ್ಟರ್ 2 ಟೀಸರ್​ಗೆ ಶುರುವಾಯ್ತು ಕೌಂಟ್​ಡೌನ್​

ರಾಕಿಭಾಯ್ ನ್ಯೂ ಲುಕ್​ ರಿಲೀಸ್​. ದಶದಿಕ್ಕಿನಲ್ಲೂ ಕೆಜಿಎಫ್​ ಟ್ರೆಂಡಿಂಗ್

ಕೆಜಿಎಫ್​ ಚಾಪ್ಟರ್ 2 ಟೀಸರ್​ಗೆ ಶುರುವಾಯ್ತು ಕೌಂಟ್​ಡೌನ್​
X

ಕೆಜಿಎಫ್ ಟೀಸರ್​​​​​​​​​ ರಿಲೀಸ್​ಗೆ ಕೌಂಟ್​​ಡೌನ್​ ಶುರುವಾಗಿದೆ. ಇಡೀ ಇಂಡಿಯನ್​ ಸಿನಿ ಇಂಡಸ್ಟ್ರಿ ಟೀಸರ್ ನಿರೀಕ್ಷೆಯಲ್ಲಿರುವಾಗ್ಲೇ, ಕೆಜಿಎಫ್​ ಟೀಂ ಸರ್​ಪ್ರೈಸ್​ ಒಂದನ್ನ ಕೊಟ್ಟಿದ್ದಾರೆ.ಕೆಜಿಎಫ್​ 2 ಸಾಮ್ರಾಜ್ಯ ಹೇಗಿರಲಿದೆ ಅನ್ನೋ ಒಂದು ಸಣ್ಣ ಕ್ಲೂ ಕೊಟ್ಟಿದ್ದಾರೆ.

ಕೆಜಿಎಫ್.​​ ಇಡೀ ಭಾರತವನ್ನು ಸ್ಯಾಂಡಲ್​​​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ..ಭಾರತದ ಬಾಕ್ಸ್ ಆಫೀಸ್​ನ್ನ ಚಿಂದಿ ಉಡಾಯಿಸಿದ ಸಿನಿಮಾ.. ಕೆಜಿಎಫ್ ಸಿನಿಮಾಗಳ ರೇಂಜನ್ನೇ ಬದಲಾಯಿಸಿ ಬಿಟ್ಟಿತ್ತು. ಇದೀಗ ಕೆಜಿಎಫ್ ಚಾಪ್ಟರ್ 2 ಟೀಸರ್​​​​​ಗಾಗಿ ಇಡೀ ಭಾರತವೇ ಕಾದು ಕುಳಿತಿದೆ. ಕೆಜಿಎಫ್​​​​​​​ ಸೀಕ್ವೆಲ್​ ಇನ್ನಿಲ್ಲದ ನಿರೀಕ್ಷೆ, ಕುತೂಹಲ ಹುಟ್ಟಾಕ್ಕಿದೆ. ಕೆಜಿಎಫ್​​​​ ಸೀಕ್ವೆಲ್​​ ಬಗ್ಗೆ ಎಕ್ಸ್​​ಪೆಕ್ಟೇಷನ್​​​​ ಎವರೆಸ್ಟ್​​ ಎತ್ತರಕ್ಕಿದೆ. ಭಾರತದ ಚಿತ್ರರಂಗದ ಮೋಸ್ಟ್​ ಎಕ್ಸ್​ಫೆಕ್ಟೆಟೆಡ್​ ಟೀಸರ್​​ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.. ಅಭಿಮಾನಿಗಳು ನಿರೀಕ್ಷೆಯ ಸಾಗರದಲ್ಲಿ ಮುಳುಗಿರುವಾಗಲೇ ಕೆಜಿಎಫ್​​​ ಟೀಮ್ ಬಿಗ್​ ಸರ್ಫೈಸ್​​ವೊಂದನ್ನ ಕೊಟ್ಟಿದೆ.

ಬರೋಬ್ಬರಿ ಎರಡು ವರ್ಷಗಳಿಂದ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ಕೆಜಿಎಫ್​ ಚಾಪ್ಟರ್ 2 ಟೀಸರ್​ ರಿಲೀಸ್​ಗೆ ಕೌಂಟ್​​ಡೌನ್ ಶುರುವಾಗಿದೆ. ಅಭಿಮಾನಿಗಳು ಜನವರಿ 8ರ ದಿನಕ್ಕಾಗಿ ಪ್ರತಿದಿನ ಪ್ರತಿಕ್ಷಣ ಕಾಯುತ್ತಿದ್ದಾರೆ. ಪ್ರತಿ ಗಂಟೆ, ಪ್ರತಿ ಸೆಕೆಂಡುಗಳನ್ನು ಕೂಡ ಕೌಂಟ್​ ಮಾಡುತ್ತಿದ್ದಾರೆ. ಈ ನಡುವೆ ಕೆಜಿಎಫ್ ಟೀಮ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್​ವೊಂದನ್ನ ಕೊಟ್ಟಿದೆ. ಕೆಜಿಎಫ್​​​ ಚಾಪ್ಟರ್ 2 ಟೀಸರ್​ ರಿಲೀಸ್​ಗೆ ದಿನಗಳು ಬಾಕಿ ಇರುವಾಗಲೇ ರಾಕಿಭಾಯ್ ನ್ಯೂ ಲುಕ್​ ರಿಲೀಸ್ ಆಗಿದೆ. ರಾಕಿ ಭಾಯ್ ನ್ಯೂ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ರಾಕಿಭಾಯ್​ ನ್ಯೂ ಲುಕ್​​​ ರಿಲೀಸ್ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್​ ಸಾಮ್ರಾಜ್ಯದ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದೆ ಅಂತ ಟ್ವೀಟ್​ ಮಾಡಿದ್ದಾರೆ. ನ್ಯೂ ಲುಕ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಟ್ವಿಟರ್​ನಲ್ಲಿ ಕೆಜಿಎಫ್ ಬಿರುಗಾಳಿ ಎದ್ದಿದೆ. ಸೋಶಿಯಲ್​ ಮೀಡಿಯಾ ತುಂಬೆಲ್ಲಾ ಕೆಜಿಎಫ್​ ಹವಾ ಜೋರಾಗಿದೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲಿ ದೇಶದ ದಶದಿಕ್ಕಿನಲ್ಲೂ ಕೆಜಿಎಫ್ ಚಾಪ್ಟರ್​ 2ನದ್ದೇ ಮಾತು. ಟ್ವಿಟರ್​ನಲ್ಲಿ ಕೂಡ ಕೆಜಿಎಫ್ ಟ್ರೆಂಡಿಂಗ್​ನಲ್ಲಿದೆ. ಈ ನಡುವೆ ಸಾಮಾಜಿಕ ಜಾಲತಾಲಗಳಲ್ಲಿ ಮತ್ತೊಂದು ಅಭಿಯಾನ ಶುರುವಾಗಿದೆ.

ಕೆಜಿಎಫ್ ಚಾಪ್ಟರ್ 2 ಟೀಸರ್​ ಭಾರತದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಟೀಸರ್ ಅಂತ ರೆಕಾರ್ಡ್ ನಿರ್ಮಿಸಲು ಅಭಿಮಾನಿಗಳು ಅಭಿಯಾನವನ್ನೇ ಶುರು ಮಾಡಿದ್ದಾರೆ. ಈ ಟೀಸರ್ ಸಕ್ಸಸ್ ಆಗಲು ಏನು ಮಾಡಬೇಕೆಂದು ರಾಕಿ ಭಾಯ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸೂತ್ರ ಹೇಳಿಕೊಟ್ಟಿದ್ದಾರೆ. ಕೆಜಿಎಫ್ 2 ಟೀಸರ್​​ನ್ನು ಕೇವಲ ಹೊಂಬಾಳೆ ಫಿಲಂಸ್​​ ಯೂ ಟ್ಯೂಬ್ ಚಾನೆಲ್ ನಲ್ಲೇ ನೋಡಿ. ಟೀಸರ್ ವೀಕ್ಷಣೆ ಪರಿಗಣನೆಗೆ ಬರಲು 30 ಸೆಕೆಂಡ್​ಗಿಂತ ಹೆಚ್ಚು ಹೊತ್ತು ವೀಕ್ಷಣೆ ಮಾಡಿ. ನಿಮ್ಮ ಸ್ಟೇಟಸ್​ಗಳಲ್ಲಿ ಟೀಸರ್​​ ಅನ್ನು ಹಾಕಬೇಡಿ. ಹೀಗಂತ ಯಶ್ ಅಭಿಮಾನಿಗಳು ಸಿನಿಮಾದ ಟೀಸರ್ ಸಕ್ಸಸ್ ಮಾಡಲು ಈಗಲೇ ತಂತ್ರ ಹೆಣೆದಿದ್ದಾರೆ. ಈ ಸೂತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸದ್ಯ ಕೊಟ್ಯಂತರ ಅಭಿಮಾನಿಗಳು ಕಾಯುತ್ತಿದ್ದ ಕ್ಷಣಕ್ಕೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಜನವರಿ 8ಕ್ಕೆ ಕೆಜಿಎಫ್​ ಚಾಪ್ಟರ್ 2ನ ಟೀಸರ್​ ರಿಲೀಸ್​ ಆಗಲಿದೆ. ಅಂದು ಯಶ್ ಅಭಿಮಾನಿಗಳಿಗೆ ಡಬಲ್ ಧಮಾಕ. ಒಂದು ರಾಕಿಭಾಯ್ ಯಶ್ ಬರ್ತ್​ ಡೇ. ಮತ್ತೊಂದು ಟೀಸರ್​ ನೋಡುವ ಭಾಗ್ಯ. ಆ ಕ್ಷಣಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕೆಜಿಎಫ್​​​-2 ಟೀಸರ್​​ ಅದೆಂಥಾ ಮ್ಯಾಜಿಕ್ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Next Story

RELATED STORIES