Top

ಜೇಮ್ಸ್ 5 ನೇ ಹಂತದ ಚಿತ್ರೀಕರಣ ಶುರು

ಕಾಶ್ಮೀರದಲ್ಲಿ ಜೇಮ್ಸ್, ಸಾಂಗ್ ,ಫೈಟ್ಗೆ ರೆಡಿಯಾದ ಅಪ್ಪು.

ಜೇಮ್ಸ್ 5 ನೇ ಹಂತದ ಚಿತ್ರೀಕರಣ ಶುರು
X

ಯುವರತ್ನ ರಿಲೀಸ್​ಗೂ ಮುನ್ನವೇ ಜೇಮ್ಸ್​​ ಕೂಡ ಸಖತ್​ ಸದ್ದು ಮಾಡುತ್ತಿದೆ. ಈಗಾಗಲೇ ನಾಲ್ಕು ಶೆಡ್ಯೂಲ್​ ಶೂಟಿಂಗ್​ ಮುಗಿಸಿರೋ ಜೇಮ್ಸ್​ ತಂಡ ಸದ್ಯ ಐದನೇ ಹಂತದ ಚಿತ್ರೀಕರಣಕ್ಕಾಗಿ ಕಾಶ್ಮೀರದಲ್ಲಿ ಬೀಡು ಬಿಟ್ಟಿದೆ.

ಜೇಮ್ಸ್, ಟೈಟಲ್​ನಿಂದಲೇ ಶುರುವಾದ ಕುತೂಹಲ ದಿನೇ ದಿನೇ ಹೆಚ್ಚಾಗುತ್ತಿದೆ. ಯುವರತ್ನ ರಿಲೀಸ್​ಗೂ ಮುನ್ನ ಜೇಮ್ಸ್​​ ಹವಾ ಶುರುವಾಗಿದೆ. ಬ್ಯಾಕ್​ ಟು ಬ್ಯಾಕ್ ಶೆಡ್ಯೂಲ್​ಗಳಲ್ಲಿ ಫಾಸ್ಟಾಗಿ ಶೂಟಿಂಗ್​ ನಡೀತಿದೆ. ಲಾಕ್​ಡೌನ್​ಗೆ ಮೊದಲು ಫಸ್ಟ್​ ಶೆಡ್ಯೂಲ್ ಶೂಟಿಂಗ್ ಮುಗಿಸಿದ್ದ ಚಿತ್ರತಂಡ ಲಾಕ್​ಡೌನ್​ ನಂತರ ಸೆಕೆಂಡ್ ಶೆಡ್ಯೂಲ್ ಶೂಟಿಂಗ್​ನ್ನ ಮೈಸೂರಿನಲ್ಲಿ ಕಂಪ್ಲೀಟ್ ಮಾಡಿದರು. ರಾಮ ಲಕ್ಷಣ ಮಾಸ್ಟರ್​ ಕಂಪೋಸಿಂಗ್​ನಲ್ಲಿ ಆಕ್ಷನ್ ಸೀಕ್ವೆನ್ಸ್​​ ಶೂಟ್ ಮಾಡಲಾಗಿತ್ತು.

ಸೆಕೆಂಡ್ ಶೂಟಿಂಗ್​ ನಂತರ ಕೆಲವೇ ದಿನಗಳ ಗ್ಯಾಪ್​ನಲ್ಲಿ ಹೊಸಪೇಟೆಯ ಗಂಗಾವತಿಯಲ್ಲಿ ಮೂರನೇ ಹಂತದ ಚಿತ್ರೀಕರಣ ಕಂಪ್ಲೀಟ್ ಮಾಡಿದರು ಹಾಗೂ ನಾಲ್ಕನೇ ಶೆಡ್ಯೂಲ್​ ಶೂಟಿಂಗ್​​ನ್ನ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದರು. ಇದೀಗ ಐದನೇ ಹಂತದ ಚಿತ್ರೀಕರಣಕ್ಕೆ ಕಾಶ್ಮೀರ ತಲುಪಿದೆ ಜೇಮ್ಸ್​ ಚಿತ್ರತಂಡ.

ಇದೀಗ ಕಾಶ್ಮೀರದಲ್ಲಿ ಶೂಟಿಂಗ್​ ಶುರುವಾಗಲಿದ್ದು, 19ನೇ ತಾರೀಖಿನಿಂದ ಪವರ್​​​ಸ್ಟಾರ್ ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ. ಈ ಬಾರಿ 10 ದಿನಗಳ ಶೂಟಿಂಗ್​ ಪ್ಲಾನ್​ ಮಾಡಿದ್ದು, ಟಾಕಿಪೋರ್ಶನ್​, ಸಾಂಗ್, ಮತ್ತು ಫೈಟ್ ಚಿತ್ರೀಕರಣ ಮಾಡಲಿದ್ದಾರೆ.

ಅಂದಹಾಗೇ ಕಾಶ್ಮೀರದಲ್ಲಿ ಚಿತ್ರೀಕರಣವಾಗುತ್ತಿರೋ ಸಾಂಗ್​ಗೆ ಎ.ಹರ್ಷ ಮಾಸ್ಟರ್ ಕೊರಿಯೊಗ್ರಫಿ ಮಾಡ್ತಿದ್ದು, ಆ್ಯಕ್ಷನ್​ ಸೀಕ್ವೆನ್ಸ್​​ನ್ನ ವಿಜಯ್ ಮಾಸ್ಟರ್ ಕಂಪೋಸ್ ಮಾಡುತ್ತಿದ್ದಾರೆ. ಈ ವಿಚಾರವನ್ನ ಸ್ವತಃ ಚಿತ್ರತಂಡ ಟ್ವೀಟ್ ಮಾಡೋ ಮೂಲಕ ಶೇರ್​ ಮಾಡಿದ್ದಾರೆ.

ಇನ್ನು ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ತೆಲುಗಿನ ಸ್ಟಾರ್ ನಟರಾದ ಶ್ರೀಕಾಂತ್, ಆದಿತ್ಯ ಮೆನನ್, ಮುಖೇಶ್​ ರಿಷಿ, ಮಧುಸೂಧನ್ ರಾವ್​ , ಪ್ರಿಯಾ ಆನಂದ್, ಅನುಪ್ರಭಾಕರ್ ಹೀಗೆ ಸಾಕಷ್ಟು ಕಲಾವಿದರಿದ್ದಾರೆ.

ಇನ್ನು ಈ ಚಿತ್ರಕ್ಕೆ ಬಹದ್ಧೂರ್, ಭರ್ಜರಿ ಚಿತ್ರಗಳನ್ನು ನಿರ್ದೇಶಿಸಿದ್ದ ಚೇತನ್ ಕುಮಾರ್ ಜೇಮ್ಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಕಿಶೋರ್ ಪತ್ತಿಕೊಂಡ ಬಂಡವಾಳ ಹಾಕುತ್ತಿದ್ದಾರೆ. ಈಗಾಗಲೇ ಚಿತ್ರದ ಮೋಶನ್​ ಪೋಸ್ಟರ್, ಟೀಸರ್ ಗಮನ ಸೆಳೆದಿದ್ದು, ಇನ್ನು 50 ಪರ್ಸೆಂಟ್ ಶೂಟಿಂಗ್​ ಬಾಕಿಯಿದೆಯಂತೆ.

Next Story

RELATED STORIES