Top

ರಮೇಶ್‌ ಅರವಿಂದ್‌ ಹುಟ್ಟು ಹಬ್ಬಕ್ಕೆ ಸ್ಪೆಷಲ್ ಸಾಂಗ್‌ ಗಿಫ್ಟ್!‌

ವಿ ವಿಶ್​ ಯು ಹ್ಯಾಪಿ ಬರ್ತ್​ಡೇ ಅಂತಿದ್ದಾರೆ 100 ಟೀಂ

ರಮೇಶ್‌ ಅರವಿಂದ್‌ ಹುಟ್ಟು ಹಬ್ಬಕ್ಕೆ ಸ್ಪೆಷಲ್ ಸಾಂಗ್‌ ಗಿಫ್ಟ್!‌
X

ಸ್ಯಾಂಡಲ್​ವುಡ್​ ಎವರ್​ಗ್ರೀನ್​ ಹೀರೋ ರಮೇಶ್​ ಅರ್​ವಿಂದ್​​ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 56 ನೇ ವಸಂತಕ್ಕೆ ಕಾಲಿಟ್ಟಿರೋ ರಮೇಶ್​ ಅರ್​ವಿಂದ್​ರಿಗೆ 100 ಸಿನಿಮಾ ಟೀಂನಿಂದ ಸ್ಪೆಷಲ್​ ಗಿಫ್ಟ್​ ವೊಂದು ಸಿಕ್ಕಿದೆ. ಇಡೀ ಟೀಮ್​ ಸೇರಿ ಹ್ಯಾಪಿ ಬರ್ತ್​ಡೇ ಅಂತ ಹಾಡಿನ ಮೂಲಕ ವಿಶ್ ಮಾಡುತ್ತಿದ್ದಾರೆ.

ಸೆಪ್ಟಂಬರ್ 10. ಸ್ಯಾಂಡಲ್​​ವುಡ್​ ಎವರ್​ಗ್ರೀನ್​ ಹೀರೋ ರಮೇಶ್​ ಅರವಿಂದ್​ ಹುಟ್ಟುಹಬ್ಬ. ಸದ್ಯ 100 ಅನ್ನೋ ಸಿನಿಮಾದಲ್ಲಿ ಬ್ಯುಸಿಯಾಗಿರೋ ರಮೇಶ್​ ಅರ್​ವಿಂದ್ ಈ ಚಿತ್ರದಲ್ಲಿ ಪೊಲೀಸ್​ ಅಧಿಕಾರಿಯ ಪಾತ್ರದಲ್ಲಿ ಮಿಂಚೋದರ ಜೊತೆಗೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಹುಟ್ಟುಹಬ್ಬದ ಪ್ರಯುಕ್ತ 100 ಚಿತ್ರದ ಲಿರಿಕಲ್​ ಸಾಂಗೊಂದು ರಿಲೀಸ್ ಆಗಿದೆ.


ವಿಶೇಷ ಅಂದ್ರೆ ಈ ಹಾಡು ಕೂಡ ಬತ್​ರ್ಡೇ ಸೆಲೆಬ್ರೇಷನ್ ಸಾಂಗ್ ಆಗಿದ್ದು, ಈ ಹಾಡಿನಲ್ಲಿ ರಮೇಶ್​ ಅರ್​​ವಿಂದ್ ಬರ್ತ್​ಡೇ ಸೆಲೆಬ್ರೇಟ್ ಮಾಡಲಾಗುತ್ತೆ. ರಂಗು ರಂಗಿನ ಪಾರ್ಟಿಯಲ್ಲಿ ವಿ ವಿಶ್​ ಯು ಹ್ಯಾಪಿ ಬರ್ತ್​ಡೇ ಅಂತ ಹಾಡಿ ಕುಣಿದಿದ್ದಾರೆ ನಾಯಕಿಯರಾದ ಪೂರ್ಣ ಮತ್ತು ರಚಿತಾರಾಮ್. ಈ ಹಾಡಿಗೆ ರವಿ ಬಸ್ರೂರು ಮ್ಯೂಸಿಕ್​ ಮಾಡಿದ್ದಾರೆ. ಧನು ಮಾಸ್ಟರ್ ಕೊರಿಯೊಗ್ರಫಿ ಕೂಡ ಇದೆ.

ಇನ್ನೂ 100 ಸಿನಿಮಾದ ಸ್ಟೋರಿಲೈನ್​ ಕೂಡ ಸಖತ್​ ಡಿಫ್ರೆಂಟಾಗಿದ್ದು, ಸೋಷಿಯಲ್‌ ಮೀಡಿಯಾ ಹೇಗೆ ಹೆಣ್ಣುಮಕ್ಕಳ ಬದುಕಿಗೆ ಮಾರಕವಾಗುತ್ತದೆ. ತಂತ್ರಜ್ಞಾನವನ್ನು ಬಳಸಿಕೊಂಡು ನಯವಂಚಕರು ಮಹಿಳೆಯರ ಖಾಸಗೀ ಬದುಕಿನ ಮೇಲೆ ಯಾವೆಲ್ಲಾ ರೀತಿ ಕಣ್ಣಿಡುತ್ತಾರೆ? ಏನೆಲ್ಲಾ ಆಟವಾಡುತ್ತಾರೆ? ಎಂಬ ವಿವರವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿರುವ ಸಿನಿಮಾ 100.

ಅಂದ್ಹಾಗೇ ಈ ಹಿಂದೆ ಉಪ್ಪು ಹುಳಿ ಖಾರಾ, ಪಡ್ಡೆಹುಲಿ ಸಿನಿಮಾಗಳಿಗೆ ಬಂಡವಾಳ ಹಾಕಿದ್ದ ರಮೇಶ್​ ರೆಡ್ಡಿ 100 ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯದಲ್ಲೇ ಸಿನಿಮಾ ರಿಲೀಸ್​ ಆಗಲಿದೆ.

Next Story

RELATED STORIES