Top

ಕ್ರಿಸ್​ಮಸ್​ ಹಬ್ಬಕ್ಕೆ ಅಭಿಮಾನಿಗಳಿಗೆ 'ಯುವರತ್ನ 'ಸ್ಪೆಷಲ್​ ಗಿಫ್ಟ್

ಡಿಸೆಂಬರ್ 25ಕ್ಕೆ ರಿಲೀಸ್​ ಆಗಲಿದೆ ನೀನಾದೆ ನಾ ಸಾಂಗ್​

ಕ್ರಿಸ್​ಮಸ್​ ಹಬ್ಬಕ್ಕೆ ಅಭಿಮಾನಿಗಳಿಗೆ ಯುವರತ್ನ ಸ್ಪೆಷಲ್​ ಗಿಫ್ಟ್
X

ಯಾವುದೇ ಹಬ್ಬಕ್ಕೆ ಸಿನಿಮಾತಂಡದಿಂದ, ಅಭಿಮಾನಿಗಳಿಗೆ ಉಡುಗೊರೆ ಕೊಡೋದು ವಾಡಿಕೆ. ಸಿನಿಮಾದ ಹೊಸ ಪೋಸ್ಟರ್, ಟೀಸರ್, ಟ್ರೈಲರ್​ಗಳನ್ನ ಬಿಡುಗಡೆ ಮಾಡೋದರ ಮೂಲಕ ಅಭಿಮಾನಿಗಳ ಹಬ್ಬದ ಸಂಭ್ರಮವನ್ನ ಹೆಚ್ಚಿಸ್ತಾರೆ ಚಿತ್ರತಂಡ. ಅದರಂತೆ ಇದೀಗ ಕ್ರಿಸ್ಮಸ್ ​ ಹಬ್ಬದ ಸಂಭ್ರಮವನ್ನ ಡಬಲ್​ ಮಾಡೋಕ್ಕೆ ಯುವರತ್ನ ಟೀಮ್​​ ಸ್ಪೆಷಲ್​ ಗಿಫ್ಟ್​ವೊಂದನ್ನು ಕೊಡೋಕ್ಕೆ ರೆಡಿಯಾಗಿದೆ.

ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಮೋಸ್ಟ್ ಎಕ್ಸ್​ಪೆಕ್ಡೆಡ್​ ಸಿನಿಮಾ ಯುವರತ್ನ. ಶೂಟಿಂಗ್​ ಕಂಪ್ಲೀಟ್ ಮಾಡಿ ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್​ನಲ್ಲಿ ಬ್ಯುಸಿಯಾಗಿದೆ. ಇತ್ತೀಚಿಗಷ್ಟೆ ಯುವರತ್ನ ಚಿತ್ರದ ಪವರ್ ಆಫ್ ಯೂಥ್ ಲಿರಿಕಲ್​ ಹಾಡು ಬಿಡುಗಡೆಯಾಗಿತ್ತು. ಈ ಸಾಂಗ್​ ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. 4 ಮಿಲಿಯನ್​​​​​​ಕ್ಕಿಂತಲೂ ಹೆಚ್ಚು ವೀವ್ಸ್​ ಪಡೆದು ಕಮಾಲ್ ಮಾಡಿತ್ತು. ಇದೀಗ ಯುವರತ್ನ ಸಿನಿಮಾದ ಮತ್ತೊಂದು ಸಾಂಗ್​ ರಿಲೀಸ್ ಆಗಲಿದೆ.

ಸಂತೋಷ್​ ಆನಂದ್​ ರಾಮ್​ ನಿರ್ದೇಶನದ, ಹೊಂಬಾಳೆ ಫಿಲಂಸ್​ನ ಮೋಸ್ಟ್​ ಎಕ್ಸ್​ಪೆಕ್ಟ್​ಟೆಡ್​ ಸಿನಿಮಾ ಯುವರತ್ನ. ಪುನೀತ್​ ರಾಜ್​​ಕುಮಾರ್ ಅಭಿನಯಿಸಿರೋ ಈ ಚಿತ್ರದ ಎರಡನೇ ಹಾಡು 'ನೀನಾದೆ ನಾ' ಇದೇ ಡಿಸೆಂಬರ್ 25ರಂದು ಹೊಂಬಾಳೆ ಫಿಲಂಸ್ ಯುಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆಯಾಗಲಿದೆ. ಪೋಸ್ಟರ್ ನೋಡಿದರೆ ಇದೊಂದು ರೊಮ್ಯಾಂಟಿಕ್ ಹಾಡು ಅನ್ನೋದು ಗೊತ್ತಾಗುತ್ತೆ. ಈ ಸಾಂಗ್​​​ ಬಿಡುಗಡೆಗೆ ಕೌಂಟ್​ಡೌನ್ ಸ್ಟಾರ್ಟ್​ ಆಗಿದೆ.

ನೀನಾದೆ ನಾ ರೊಮ್ಯಾಂಟಿಕ್​ ಹಾಡಿನ ಸಾಹಿತ್ಯವನ್ನು ಕನ್ನಡದಲ್ಲಿ ಗೌಸ್ ಪೀರ್ ಬರೆದಿದ್ದು, ತೆಲುಗಿನಲ್ಲಿ ರಮಜೋಗಯ್ಯ ಶಾಸ್ತ್ರಿಯವರು ಬರೆದಿದ್ದಾರೆ. ಇನ್ನು ಈ ಹಾಡಿಗೆ ಗಾಯಕಿ ಶ್ರೇಯಾ ಘೋಷಾಲ್ ಹಾಗೂ ಮೆಲೋಡಿ ಕಿಂಗ್​​ ಅರ್ಮಾನ್ ಮಲಿಕ್ ದನಿಯಾಗಿದ್ದಾರೆ.

ಮೊದಲ ಹಾಡನ್ನ ಡಿಸೆಂಬರ್​ 2ರಂದು ಕುರುಬರಹಳ್ಳಿಯ ರಾಜಕುಮಾರ್ ಪ್ರತಿಮೆ ಎದುರು ಅಭಿಮಾನಿಗಳೇ ರಿಲೀಸ್​ ಮಾಡಿದ್ದರು. ಈ ಹಾಡು ಕೂಡ ವಿಶೇಷವಾಗಿ ರಿಲೀಸ್ ಆಗುತ್ತಾ ಅಂತ ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

Next Story

RELATED STORIES