Top

ಹಸೆಮಣೆ ಏರಲು ಸಜ್ಜಾದ ಸೌತ್ ಬ್ಯೂಟಿ ಕಾಜಲ್ ಅಗರ್​ವಾಲ್​

ಮದುಮಗಳು ಕಾಜಲ್​ ಕೈಯಲ್ಲಿ ಮೂಡಿದ ಮದರಂಗಿ ರಂಗು

ಹಸೆಮಣೆ ಏರಲು ಸಜ್ಜಾದ ಸೌತ್ ಬ್ಯೂಟಿ ಕಾಜಲ್ ಅಗರ್​ವಾಲ್​
X

ಟಾಲಿವುಡ್​​ ಸ್ಟಾರ್​ ನಟಿ ಕಾಜಲ್​ ಅಗರ್​ವಾಲ್​ ಸದ್ಯ ಮದುವೆ ಸಂಭ್ರಮದಲ್ಲಿದ್ದಾರೆ. ಶುಕ್ರವಾರ ಹಸೆಮಣೆ ಏರಲು ರೆಡಿಯಾಗಿರೋ ಮದುಮಗಳು ಕಾಜಲ್​ ಸದ್ಯ ಮೆಹಂದಿ ಶಾಸ್ತ್ರದ ಸುಂದರ ಪೋಟೋಗಳನ್ನ ತಮ್ಮ ಸೋಶಿಯಲ್​ ಮೀಡಿಯಾ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕೈ ತುಂಬಾ ಮದರಂಗಿ ರಂಗು.. ಮುಖದಲ್ಲಿ ತುಂಬಿ ತುಳುಕುತ್ತಿರೋ ಖುಷಿ. ಮದುಮಗಳಾಗುವ ಸಂದರ್ಭದಲ್ಲಿ ಹೆಣ್ಣಿನ ಸೌಂದರ್ಯ ಮತ್ತಷ್ಟು ಹೆಚ್ಚುತ್ತಂತೆ. ಥೇಟ್ ರೀತಿ ಕಾಜಲ್​​​​ ಅಗರ್​​ವಾಲ್​ ಸೌಂದರ್ಯ ಕೂಡ ಮೆಹೆಂದಿ ರಂಗಿನಲ್ಲಿ ಹೊಳೆಯುತ್ತಿದೆ. ಸೌತ್ ಬ್ಯೂಟಿ ಕಾಜಲ್​​ ಅಗರ್​ವಾಲ್​​ ಶುಕ್ರವಾರ ಹಸೆಮಣೆ ಏರಲಿದ್ದಾರೆ. ಮದುವೆಗೂ ಮುನ್ನ ಮೆಹೆಂದಿ ಶಾಸ್ತ್ರ ನಡೆದಿದ್ದು ಅದರ ಮುದ್ದಾದ ಫೋಟೋವೊಂದನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು, ಅಭಿಮಾನಿಗಳ ಮುಖದಲ್ಲಿ ಸಂತೋಷ ಮೂಡಿಸಿದ್ದಾರೆ.


ಹೌದು ಟಾಲಿವುಡ್ ನಟಿ ಕಾಜಲ್ ಅಗರ್​ವಾಲ್​ ಕಂಕಣಭಾಗ್ಯ ಕೂಡಿ ಬಂದಿದೆ. ತಮ್ಮ ಬಹುಕಾಲದ ಗೆಳೆಯ ಗೌತಮ್​ ಕಿಚುಲು ಜೊತೆ ಹಸೆಮಣೆ ಹತ್ತಲಿದ್ದಾರೆ ಮಿಸ್​ ಅಗರ್​ವಾಲ್​. ತಾವು ಬಹಳ ದಿನಗಳಿಂದ ಇಷ್ಟ ಪಟ್ಟಿದ್ದ ಗೌತಮ್ ಎಂಬುವವರನ್ನು ಕೈ ಹಿಡಿಯಲು ಕಾಜಲ್ ಅಗರ್​​ವಾಲ್ ಸಜ್ಜಾಗಿದ್ದಾರೆ. ಶುಕ್ರವಾರ ಈ ಜೋಡಿ ಮುಂಬೈನಲ್ಲಿ ಸಿಂಪಲ್ ಆಗಿ ಮದುವೆಯಾಗಲಿದ್ದಾರೆ. ಕುಟುಂಬಸ್ಥರು ಹಾಗೂ ಆಪ್ತರನ್ನ ಒಳಗೊಂಡ ಪ್ರೈವೇಟ್​ ಮದುವೆ ಸಮಾರಂಭ ಇದಾಗಲಿದೆ. ಕೊರೊನಾ ಇರೋದ್ರಿಂದ ಸರಳವಾಗಿಯೇ ಮದುವೆಯಾಗಲು ಕಾಜಲ್ ನಿರ್ಧರಿಸಿದ್ದಾರೆ.

ಇನ್ನು, 'ಮಿಸ್​ ಅಗರ್​ವಾಲ್'​​ ಆಗಿ ತಾವು ಕೊನೆಯ ಎರಡು ದಿನಗಳನ್ನ ಕಳೆಯಲಿದ್ದಾರೆ ಅಂತ ಕಾಜಲ್​ ತಮ್ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ರು. ಅಭಿಮಾನಿಗಳಿಗೆ ಅವರ ಆ ಪೋಸ್ಟ್​ ಬೇಸರ ತರಿಸಿತ್ತಾದ್ರೂ, ಸದ್ಯ ಅವರ ಮೆಹೆಂದಿ ಫೋಟೋ ನೋಡಿ ಸಖತ್​ ಖುಷಿಯಾಗಿದ್ದಾರೆ.

ರೀಸೆಂಟಾಗಿ ಸ್ನೇಹಿತೆಯರ ಜೊತೆ ಬ್ಯಾಚುಲರ್​ ಪಾರ್ಟಿ ಮುಗಿಸಿ, ಮೊನ್ನೆಯಷ್ಟೇ ಭಾವಿ ಪತಿ ಜೊತೆ, 78 ಸಾವಿರದ ದುಬಾರಿ ಉಡುಗೆ ತೊಟ್ಟು, ನವರಾತ್ರಿ ಸಂಭ್ರಮವನ್ನ ಕೂಡ ಆಚರಿಸಿದ್ದಾರೆ.


ಪಂಜಾಬಿ ಕುಟುಂಬಕ್ಕೆ ಸೇರಿದ ಕಾಜಲ್ ಅಗರ್​​ವಾಲ್ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದ ಮುಂಬೈನಲ್ಲಿ. ಮೊದಲಿನಿಂದಲೂ ಸಿನಿಮಾದಲ್ಲಿ ಆಸಕ್ತಿಯಿದ್ದ ಕಾಜಲ್ ಅಗರ್​ವಾಲ್​​​​ಗೆ 2004 ರಲ್ಲಿ ಹಿಂದಿ ಚಿತ್ರವೊಂದರಲ್ಲಿ ಚಿಕ್ಕ ಪಾತ್ರ ದೊರೆಯಿತು. ಆದರೆ ಈ ಸಿನಿಮಾ 2008 ರಲ್ಲಿ ಬಿಡುಗಡೆಯಾಯಿತು. 2007 ರಲ್ಲಿ ತೆಲುಗಿನ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ತೆಲುಗಿನಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ ಕಾಜಲ್ ಅಗರ್​​ವಾಲ್​​​​​​ ಅವರನ್ನು ತೆಲುಗು ಪ್ರೇಕ್ಷಕರು ಅಪ್ಪಿಕೊಂಡರು. ಅಲ್ಲಿಂದ ಅವರು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲೇ ಹೆಚ್ಚು ಸಕ್ರಿಯರಾದರು.

ಮಗಧೀರ, ಡಾರ್ಲಿಂಗ್, ಆರ್ಯ 2, ಮಿ. ಪಫೆಕ್ಟ್, ಸಿಂಗಂ, ಬ್ಯುಸ್ನೆಸ್ ಮ್ಯಾನ್, ತುಪಾಕಿ, ಬಾದ್​ಷಾ, ಟೆಂಪರ್, ಮಾರಿ, ಜನತಾ ಗ್ಯಾರೇಜ್, ನೇನೇ ರಾಜು ನೇನೆ ಮಂತ್ರಿ, ಸೀತ, ಇಂಡಿಯನ್ 2, ಪ್ಯಾರಿಸ್ ಪ್ಯಾರಿಸ್ ಸೇರಿ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಜಲ್ ಅಗರ್​​ವಾಲ್ ನಟಿಸಿದ್ದಾರೆ. ಇದೀಗ ಈ ಬ್ಯೂಟಿ ಜೀವನದ ಮತ್ತೊಂದು ಘಟ್ಟಕ್ಕೆ ಕಾಲಿಡುತ್ತಿದ್ದು ಕಾಜಲ್ ಅಗರ್​ವಾಲ್ ವೈಯಕ್ತಿಕ ಜೀವನ ಸಂತೋಷವಾಗಿರಲಿ ಅಂತ ಅಭಿಮಾನಿಗಳು ಹಾರೈಸುತ್ತಿದ್ದಾರೆ.

Next Story

RELATED STORIES