Top

ಜೂನಿಯರ್​ ಯಶ್​​ಗೆ ಶೀಘ್ರದಲ್ಲೇ ನಾಮಕರಣ ಸಂಭ್ರಮ

ನೀವೆಲ್ಲಾ ಕೇಳ್ತಾ ಇದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೂನಿಯರ್​ ಯಶ್​ಗೆ ಹೆಸರು ಸಿಕ್ಕಿದೆ.

ಜೂನಿಯರ್​ ಯಶ್​​ಗೆ ಶೀಘ್ರದಲ್ಲೇ ನಾಮಕರಣ ಸಂಭ್ರಮ
X

ರಾಕಿಂಗ್​ ದಂಪತಿಗಳ ಮಕ್ಕಳಿಬ್ರೂ ಇದೀಗ ಸೋಶಿಯಲ್​ ಮೀಡಿಯಾ ಸ್ಟಾರ್ಸ್​. ಐರಾ ಮತ್ತು ಜೂನಿಯರ್​ ಯಶ್ ಫೋಟೋಗಳು ವಿಡಿಯೋಗಳಂತೂ ವೈರಲ್​ ಆಗ್ತಾನೇ ಇರುತ್ತೆ. ದೀಗ ರಾಧಿಕಾಪಂಡಿತ್​ ಜೂನಿಯರ್ ರಾಖೀಭಾಯ್​ ಕುರಿತಾದ ಹೊಸ ಸಮಾಚಾರವೊಂದನ್ನ ಶೇರ್ ಮಾಡಿಕೊಂಡಿದ್ದಾರೆ.

ರಾಕಿಂಗ್​ ಸ್ಟಾರ್ ದಂಪತಿಯಷ್ಟೇ ಅವರ ಮಕ್ಕಳು ಕೂಡ ಸಖತ್​ ಫೇಮಸ್. ಸೋಶಿಯಲ್​ ಮೀಡಿಯಾದಲ್ಲಿ ರಾಕಿಂಗ್​ ಮಕ್ಕಳಿಗೇ ಅವರದ್ದೇ ಆದ ಫ್ಯಾನ್ ಫಾಲೋಯಿಂಗ್​​ ಇದೆ. ಯಶ್ ಮತ್ತು ರಾಧಿಕಾಪಂಡಿತ್​ ಕೂಡ ತಮ್ಮ ಮಕ್ಕಳ ಫೋಟೋನೇ ಆಗಲಿ. ಅವರ ಹೆಸರನ್ನೇ ಆಗಲೇ ಸಖತ್ ಸ್ಪೆಷಲ್​ ಆಗಿ ರಿವೀಲ್​ ಮಾಡಿದರು.

ಈ ಹಿಂದೆ ಕೂಡ ಸಖತ್​ ಡಿಫ್ರೆಂಟ್​ ಆಗಿ ಫೋಟೋ ಶೂಟ್ ಮಾಡಿಸಿ ಐರಾಳ ಫೇಸ್ ರಿವಿಲ್​ ಮಾಡಿದ್ದ ರಾಕಿಂಗ್​ ದಂಪತಿ, ಐರಾಳಿಗೆ ಏನ್​ ಹೆಸರಿಡಬಹುದು ಅನ್ನೋದು ಕೂಡ ಅಷ್ಟೇ ಸುದ್ದಿಯಾಗಿತ್ತು..ಅಭಿಮಾನಿಗಳು ಐರಾಗೇ ಸಾವಿರಾರು ಹೆಸರುಗಳನ್ನ ಸಜೆಸ್ಟ್ ಮಾಡಿದರು. ಕೊನೆಗೆ ಯಶ್ ಮತ್ತು ರಾಧಿಕಾ ಹೆಸರು ಸೇರಿಕೊಳ್ಳುವಂತೆ ಐರಾ ಹೆಸರನ್ನು ಫೈನಲ್ ಮಾಡಿದರು ರಾಕಿಂಗ್​ ದಂಪತಿ.

ಅಂತೆಯೇ ಜೂನಿಯರ್​ ಯಶ್ ಫೋಟೋ ಕೂಡ, ಫೋಟೋಶೂಟ್ ಮಾಡಿಸೋದ್ರ ಮೂಲಕ ರಿವೀಲ್​ ಮಾಡಿದರು. ಸದ್ಯ ಜೂನಿಯರ್ ಯಶ್​ಗೆ ಏನ್​ ಹೆಸರಿಡಬಹುದು ಅನ್ನೋ ಕ್ಯೂರಿಯಾಸಿಟಿ ಹುಟ್ಟಿಕೊಂಡಿದೆ. ರೀಸೆಂಟಾಗಿ ರಾಕಿಂಗ್​ ಸ್ಟಾರ್ ಯಶ್, ತಮ್ಮ ಮಗನನ್ನ ಕೆಂಚು ಅಂತ ಕರೆದಿದ್ದ ವಿಡಿಯೋ ವೈರಲ್​ ಆಗೋದ್ರ ಮೂಲಕ , ಪೆಟ್ ನೇಮ್​ ರಿವೀಲ್​ ಆಗಿತ್ತು. ಆದರೆ ಈಗ ಸದ್ಯದಲ್ಲೇ ಜೂನಿಯರ್ ಯಶ್​ಗೆ ನಾಮಕರಣ ನೆರವೇರಲಿದೆ.

ಅಂದ್ಹಾಗೇ ಸ್ವತಃ ರಾಧಿಕಾ ಪಂಡಿತ್​ ಈ ವಿಚಾರವನ್ನ ಹಂಚಿಕೊಂಡಿದ್ದು ನೀವೆಲ್ಲಾ ಕೇಳ್ತಾ ಇದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜೂನಿಯರ್​ ಯಶ್​ಗೆ ಹೆಸರು ಸಿಕ್ಕಿದೆ. ಸದ್ಯದಲ್ಲೇ ಅಪ್​ಡೇಟ್​ ಮಾಡ್ತಿವಿ ಅಂತ ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕೊರೊನಾ ಸಮಸ್ಯೆ ಇರೋದರಿಂದ ಬಹಳ ಸಿಂಪಲ್​ ಆಗಿ ಕೆಲವೇ ಜನರ ಸಮ್ಮುಖದಲ್ಲಿ ಜೂ.ಯಶ್ ನಾಮಕರಣ ಕಾರ್ಯಕ್ರಮ ನೆರವೇರಲಿದ್ದು, ಸದ್ಯದಲ್ಲೇ ಕೆಂಚು ರಿಯಲ್​ ನೇಮ್​ ರಿವೀಲ್​ ಆಗಲಿದೆ.

Next Story

RELATED STORIES