Top

ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಂದ ಸಾಮಾಜಿಕ ಕಾರ್ಯ

  • ಸೆಪ್ಟೆಂಬರ್​ 18. ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್​ ಅವರ 70 ಜಯಂತೋತ್ಸವ.
  • ಸಾಹಸಸಿಂಹನ ಅಭಿಮಾನಿಗಳೆಲ್ಲಾ ಸೇರಿ ರಾಜ್ಯಾದ್ಯಂತ 70 ಸಾವಿರ ಸಸಿ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಂದ ಸಾಮಾಜಿಕ ಕಾರ್ಯ
X

ಸೆಪ್ಟೆಂಬರ್​ 18..ದಿವಂಗತ ಸಾಹಸಸಿಂಹ ಡಾ.ವಿಷ್ಣುವರ್ಧನ್​ ಅವರ ಹುಟ್ಟುಹಬ್ಬ. ಸಾಹಸಸಿಂಹನ 70ನೇ ವರ್ಷದ ಜಯಂತೋತ್ಸವನ್ನ, ವಿಷ್ಣು ಅಭಿಮಾನಿಗಳು ಈ ಬಾರಿ ಬಹಳ ಅರ್ಥಪೂರ್ಣವಾಗಿ ಆಚರಿಸ್ತಾ ಇದ್ದಾರೆ. ನೆಚ್ಚಿನ ನಟನನ್ನ ಆದರ್ಶವಾಗಿಟ್ಟುಕೊಟ್ಟು, ಒಂದಷ್ಟು ಸಾಮಾಜಿಕ ಕಾರ್ಯಗಳನ್ನ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದಾರೆ.

ಸೆಪ್ಟೆಂಬರ್​ 18. ಅಭಿನಯ ಭಾರ್ಗವ. ಡಾ ವಿಷ್ಣುವರ್ಧನ್​ ಅವರ 70 ಜಯಂತೋತ್ಸವ. ಪ್ರತಿ ವರ್ಷ ವಿಷ್ಣು ಅಭಿಮಾನಿಗಳು, ತಮ್ಮ ಆರಾಧ್ಯದೈವ, ನೆಚ್ಚಿನ ನಟ ವಿಷ್ಣುವರ್ಧನ್​ ಅವರ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸ್ತಾ ಇದ್ರು. ಸಮಾಧಿಗೆ ಪೂಜೆ ಸಲ್ಲಿಸಿ, ಒಂದಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಳ್ತಾ ಇದ್ರು. ಆದರೆ, ಈ ಬಾರಿ ಕೊರೊನಾ ಸಮಸ್ಯೆಯಿಂದ ಹುಟ್ಟುಹಬ್ಬದ ಕಾರ್ಯಕ್ರಮವನ್ನ ಅದ್ದೂರಿಯಾಗಿ ಆಚರಿಸೋಕ್ಕೆ ಆಗದೇ ಇದ್ರು ಬಹಳ ಅರ್ಥಪೂರ್ಣವಾಗಿ ಆಚರಿಸ್ತಾ ಇದ್ದಾರೆ.

ಆಗಸ್ಟ್ ಒಂದರಿಂದ್ಲೇ ಸಾಹಸಸಿಂಹನ ಜಯಂತೋತ್ಸವದ ಕಾರ್ಯಕ್ರಮಗಳು ಶುರುವಾಗಿದ್ದು, ಸೆಪ್ಟೆಂಬರ್​ 18 ರವರೆಗೂ ಮುಂದುವರೆಯಲಿದೆ. ಈಗಾಗಲೇ ವಿಷ್ಣು ಸೇನಾ ಸಮಿತಿ ಈ ಬಗ್ಗೆ ಕರೆ ಕೊಟ್ಟಿದ್ದು, ಸಾಹಸಸಿಂಹನ ಅಭಿಮಾನಿಗಳೆಲ್ಲಾ ಸೇರಿ ರಾಜ್ಯಾದ್ಯಂತ 70 ಸಾವಿರ ಸಸಿ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಸ್ಟ್ ಒಂದರಿಂದ ಈ ಕಾರ್ಯಕ್ರಮ ಶುರುವಾಗಿದ್ದು, ಈವರೆಗೂ 16 ಸಾವಿರ ಸಸಿಗಳನ್ನ ನೆಡಲಾಗಿದೆ.

ಪ್ರಸ್ತುತ ರಾಜ್ಯದಲ್ಲಿ ರಕ್ತದ ಕೊರತೆ ಬಹಳ ದೊಡ್ಟಮಟ್ಟದಲ್ಲಿರೋದ್ರಿಂದ, ಡಾ.ವಿಷ್ಣು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಕನಿಷ್ಠ 700 ರಿಂದ ಗರಿಷ್ಠ 7000 ಯುನಿಟ್ ತನಕ ರಕ್ತದಾನ ಮಾಡುವ ನಿರ್ಧಾರವನ್ನು ತಾಳಿದ್ದು, ಈಗಾಗಲೇ ಸುಮಾರು 300 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ ಹಾಗೂ ಶಾಲಾ ಮಕ್ಕಳಿಗೆ ಡಾ.ವಿಷ್ಣುವರ್ಧನ್ ಅವರ ವೇಷಭೂಷಣ, ಅಭಿನಯ, ಗಾಯನ ಸ್ಪರ್ಧೆಯನ್ನು ಆಯೋಜಿಸಿದ್ದು, ಮಕ್ಕಳು ವಿಡಿಯೋಮಾಡಿ ಕಳುಹಿಸಿದ್ದಲ್ಲಿ ವಿಜೇತರಾದವ್ರಿಗೆ ಬಹುಮಾನ ನೀಡಲಾಗ್ತಿದೆ.

ಇನ್ನು ಸೆಪ್ಟೆಂಬರ್​ 18ರಂದು ಹುಟ್ಟುಹಬ್ಬವಿರೋದ್ರಿಂದ, 17ನೇ ತಾರೀಖು, ಶಿಕ್ಷೆಯ ಅವಧೀ ಮುಗಿದಿರುವ 10 ಖೈದಿಗಳನ್ನು ಗುರುತಿಸಿ ಅವರು ಪಾವತಿಸಬೇಕಾದ ದಂಡವನ್ನು ಸಮಿತಿಯೇ ಭರಿಸಿ, ಅವರಿಗೆ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಪ್ರಮುಖ ಕಾರ್ಯಕ್ರಮಗಳ ಜೊತೆಗೆ ಇನ್ನು ಕೆಲವು ಸಮಾಜಮುಖಿ ಕಾರ್ಯಕ್ರಮಗಳನ್ನ, ಸಾಹಸಸಿಂಹ ಹುಟ್ಟುಹಬ್ಬದ ಪ್ರಯ್ತುಕ್ತ ಹಮ್ಮಿಕೊಳ್ಳಲಾಗಿದೆ. ಒಟ್ನಲ್ಲಿ ಸಾಹಸಸಿಂಹ ದೈಹಿಕವಾಗಿ ಅಗಲಿದ್ರೂ, ನೆನಪುಗಳ ಮೂಲಕ ಅಭಿಮಾನಿಗಳ ಮನದಲ್ಲಿ ಅಜರಾಮರ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ.

Next Story

RELATED STORIES