Top

'RRR' ಆರ್ಭಟಕ್ಕೆ ಸೋಶಿಯಲ್ ಮೀಡಿಯಾ ಶೇಕ್

ರೋಮಾಂಚನ ಸೃಷ್ಟಿಸಿದ ‘ರೌದ್ರ ರಣ ರುಧೀರ’ ಟೀಸರ್​

RRR ಆರ್ಭಟಕ್ಕೆ  ಸೋಶಿಯಲ್ ಮೀಡಿಯಾ ಶೇಕ್
X

ಟಾಲಿವುಡ್​ನ ಬಹುನಿರೀಕ್ಷಿತ ತ್ರಿಬಲ್​ ಆರ್, ಚಿತ್ರದಿಂದ ಒಂದೊಂದೇ ಸ್ಯಾಂಪಲ್​ಗಳು ರಿಲೀಸ್​ ಆಗ್ತಿದ್ದು,ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ರೀಸೆಂಟಾಗಿ ಶೂಟಿಂಗ್​ ಪ್ರಾರಂಭವಾಗಿರೋ ವಿಡಿಯೋ ಝಲಕ್​ ರಿಲೀಸ್ ಮಾಡಿದ್ದ ತ್ರಿಬಲ್​ ಆರ್ ಟೀಂ, ಜೂನಿಯರ್​ ಎನ್​ಟಿಆರ್​ ಕ್ಯಾರೆಕ್ಟರ್​ ಇಂಟ್ರೋಡ್ಯೂಸ್​ ಮಾಡಿದ್ದಾರೆ. 5 ಭಾಷೆಗಳಲ್ಲೂ ಟೀಸರ್ ಸಖತ್​ ಸೌಂಡ್​ ಮಾಡುತ್ತಿದೆ.

ಆ ಧ್ವನಿ. ಆ ದೃಶ್ಯ. ಆ ಆಕ್ಷನ್​. ಆ ಡೈಲಾಗ್​​. ಒಂದಕ್ಕಿಂದ ಒಂದು ಮೈ ನವಿಳೇರುವಂತೆ ಮಾಡುತ್ತೆ. ಆತ ಸಮುದ್ರಗಳನ್ನೇ ಹೆದರಿಸಿದಾತ. ಸಾಮ್ರಾಜ್ಯಗಳೇ ತಲೆ ಬಾಗಿಸುವಂತೆ ಮಾಡಿದವನು. ಒಂದೊಂದು ಡೈಲಾಗ್​ನಲ್ಲೂ ಮಿಂಚಿದೆ. ಬೆಂಕಿಯಿದೆ. ಅವನ ಆರ್ಭಟ ಹಾರುವ ಭಾವುಟ ಇದ್ದಂತೆ. ಅವನ ಪ್ರತಾಪ ಕಗ್ಗತ್ತಲ ಸೀಳಿ ಬರುವ ಸೂರ್ಯ ತಾಪ. ಅವನು ಭೂಮಿತಾಯಿಯ ಎದೆಹಾಲು ಕುಡಿದ ಹೆಮ್ಮೆಯ ಕಂದ. ಅವನೇ ಕೋಂಡು ಹೆಬ್ಬುಲಿ ಕೊಮುರಂ ಭೀಮ್​.

ಹೌದು ಆರ್​​ಆರ್​ಆರ್​ ಟೀಸರ್​ ಆರ್ಭಟಕ್ಕೆ ಸೋಶಿಯಲ್ ಮೀಡಿಯಾ ಶೇಕ್ ಆಗುತ್ತಿದೆ. ಗೋಂಡು ಹೆಬ್ಬುಲಿ ಅವತಾರ ಕಂಡು ಫ್ಯಾನ್ಸ್ ಫುಲ್​ ಥ್ರಿಲ್ ಆಗಿದ್ದಾರೆ. ಮ್ಯಾಜಿಕ್​ ಡೈರೆಕ್ಟರ್ ರಾಜಮೌಳಿ ಮತ್ತೊಮ್ಮೆ ಟೀಸರ್​ನಲ್ಲೇ ಮೋಡಿ ಮಾಡಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ಜಾದು ಮಾಡಿ ರಾಜಮೌಳಿ ಆರ್​ಆರ್​ಆರ್​ಟೀಸರ್​ನಲ್ಲಿ ಜ್ಯೂನಿಯರ್​ ಎನ್​ಟಿಆರ್ ರಣವಾತಾರ ತೋರಿಸಿದ್ದಾರೆ. ಕೊಮುರಂ ಭೀಮ್​ ಘರ್ಜನೆಗೆ ಭಾರತೀಯ ಚಿತ್ರರಂಗ ವೈಬ್ರೇಟ್ ಆಗುತ್ತಿದೆ. ಅಭಿಮಾನಿಗಳಲ್ಲಿ ರೋಮಂಚನದ ಕರೆಂಟ್ ಪಾಸ್ ಆಗಿದೆ. ಫ್ಯಾನ್ಸ್ ಹೃದಯದಲ್ಲಿ ಅಭಿಮಾನದ ಜ್ವಾಲಾಮುಖಿ ಎದ್ದಿದೆ.

ಟ್ವಿಟ್ಟರ್‌ನಲ್ಲಿ ಆರ್‌ಆರ್‌ಆರ್‌ ಟ್ರೆಂಡಿಂಗ್‌ನಲ್ಲಿದೆ. ಯೂಟ್ಯೂಬ್​​ನಲ್ಲಿ ಮಿಲಿಯನ್​ಗಟ್ಟಲೇ ವಿವ್ಯ ಪಡೆದುಕೊಳ್ತಿದೆ. ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. 5 ಭಾಷೆಯಲ್ಲಿ ಬಿಡುಗಡೆಯಾಗಿರುವ ಟೀಸರ್​ ಫಾನ್ಸ್​ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. 1 ನಿಮಿಷ 32 ಸೆಕೆಂಡ್‍ಗಳ ಟೀಸರ್​​​ನಲ್ಲಿ ಎನ್‍ಟಿಆರ್ ಆ್ಯಕ್ಷನ್‍ಗೆ ರಾಮ್‍ಚರಣ್ ವಾಯ್ಸ್ ನೀಡಿದ್ದಾರೆ. ಕನ್ನಡದಲ್ಲೂ ರಾಮ್​ಚರಣ್​ ಧ್ವನಿ ನೀಡಿದ್ದು. ಮಗಧೀರನ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇನ್ನು ರಾಮ್​​ಚರಣ್​ ಹುಟ್ಟುಹಬ್ಬಕ್ಕೆ 'ಭೀಮ್ ಫಾರ್ ರಾಮರಾಜು' ಎಂದು ರಾಮ್ ಚರಣ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ಕೊರೊನಾ ಲಾಕ್‍ಡೌನ್ ಕಾರಣದಿಂದ ಎನ್‍ಟಿಆರ್ ಟೀಸರ್ ಬಿಡುಗಡೆ ತಡವಾಗಿದೆ. ಸದ್ಯ ಕೋಮರಂ ಭೀಮ್ ಜಯಂತಿ ವಿಶೇಷವಾಗಿ 'ರಾಮ್‍ರಾಜು ಫಾರ್ ಭೀಮ್' ಟೀಸರ್ ಬಿಡುಗಡೆ ಮಾಡಲಾಗಿದೆ.

ಹೌದು ಒಟ್ಟು 5 ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿ ಈ ಚಿತ್ರ ರಿಲೀಸ್ ಆಗಲಿದೆ. ಬಾಲಿವುಡ್ ನಟರಾದ ಅಜಯ್ ದೇವಗನ್, ಆಲಿಯಾ ಭಟ್ ಈ ಸಿನಿಮಾದಲ್ಲಿ ನಟಿಸುತ್ತಿರೋದು ವಿಶೇಷವಾಗಿದೆ. ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿರುವ 'ಆರ್‌ಆರ್‌ಆರ್‌' ಸಿನಿಮಾಗೆ 400 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಹೂಡಲಾಗಿದೆ.

ಬಾಹುಬಲಿ ಬಳಿಕ ರಾಜಮೌಳಿ ನಿರ್ದೇಶನ ಮಾಡುತ್ತಿರೋ ಮೊದಲ ಸಿನಿಮಾ ಇದು. ಹೀಗಾಗಿ ಸಹಜವಾಗಿಯೇ ಈ ಸಿನಿಮಾದ ಮೇಲೆ ಸಿನಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿದೆ. ಅದರಲ್ಲೂ ಜೂನಿಯರ್ ಎನ್​ಟಿಆರ್, ರಾಮ್​ಚರಣ್ ಕಾಂಬಿನೇಷನ್ ಮತ್ತಷ್ಟು expectation ಹೆಚ್ಚಿಸಿದೆ. ಸದ್ಯ ಶೂಟಿಂಗ್ ಭರದಿಂದ ಸಾಗಿದ್ದು. ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

Next Story

RELATED STORIES