Top

ಸೋಶಿಯಲ್​ ಮೀಡಿಯಾದಲ್ಲಿ ಜೋರಾಗಿದೆ 'ಸಲಗ' ಹವಾ

  • ಸಲಗ ಚಿತ್ರದ 'ಮಳೆಯೇ ಮಳೆಯೇ' ಮೆಲೋಡಿ ಸಾಂಗ್ ಸೋಶೀಯಲ್​ ಮೀಡಿಯಾದಲ್ಲಿ ವೈರಲ್.
  • ಇದೀಗ ನ್ಯಾಷನಲ್, ಇಂಟರ್ ನ್ಯಾಷನಲ್​ ಕ್ರಿಕೆಟ್ ಪ್ಲೇಯರ್ಸ್​ ಕೂಡ ಸಲಗ ಹಾಡಿಗೆ ಫಿದಾ.
  • ಥಿಯೇಟರ್​ ಓಪನ್​ ಆಗುತ್ತಿದ್ದ ಹಾಗೇ ತೆರೆಗೆ ಬರೋಕ್ಕೆ ರೆಡಿಯಿದೆ ಸಲಗ.

ಸೋಶಿಯಲ್​ ಮೀಡಿಯಾದಲ್ಲಿ ಜೋರಾಗಿದೆ ಸಲಗ ಹವಾ
X

ಸ್ಯಾಂಡಲ್​ವುಡ್​ನಲ್ಲಿ ಸಲಗ ಹಾಡಿನ ಹವಾ ಜೋರಾಗಿದೆ. ರೀಸೆಂಟಾಗಿ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ರಿಲೀಸ್​ ಮಾಡಿದ್ದ ಮಳೆಯೇ ಮಳೆಯೇ ಸಾಂಗ್​ ಸದ್ಯ ಸೋಶಿಯಲ್​ ಮೀಡಿಯಾಗಿ ಸಖತ್​ ಸೌಂಡ್​ ಮಾಡುತ್ತಿದೆ. ಚಂದನವನದ ಸೆಲೆಬ್ರೆಟಿಸ್ ಮಾತ್ರವಲ್ಲದೇ, ಇದೀಗ ಕ್ರಿಕೆಟ್​ ಲೋಕದ ತಾರೆಯರು ಕೂಡ ಸಲಗ ಸಾಂಗ್​ಗೆ ತಲೆದೂಗುತ್ತಿದ್ದಾರೆ.

ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​​ಪೆಕ್ಡೆಡ್​ ಸಿನಿಮಾ ಸಲಗ. ಈಗಾಗಲೇ ಸಲಗದ ಸಾಕಷ್ಟು ಸ್ಯಾಂಪಲ್​ಗಳು ಸಿನಿಪ್ರಿಯರ ಗಮನ ಸೆಳೆದಿದ್ದು, ಇದೀಗ ಮಳೆಯೇ ಮಳೆಯೇ ಮೆಲೋಡಿ ಸಾಂಗ್ ಸೋಶೀಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಸಲಗ ಚಿತ್ರದ ಈ ಹಾಡನ್ನ ಸ್ವತಃ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಮೆಚ್ಚಿಕೊಂಡಿದ್ದು, ಸಾಕಷ್ಟು ಸ್ಯಾಂಡಲ್​​ವುಡ್​ ಸೆಲೆಬ್ರೆಟಿಗಳ ಗಮನ ಸೆಳೆದಿದೆ. ಇದೀಗ ನ್ಯಾಷನಲ್, ಇಂಟರ್ ನ್ಯಾಷನಲ್​ ಕ್ರಿಕೆಟ್ ಪ್ಲೇಯರ್ಸ್​ ಕೂಡ ಸಲಗ ಹಾಡಿಗೆ ಫಿದಾ ಆಗಿರೋದು ವಿಶೇಷ.

ಈ ಹಾಡನ್ನ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದ ಹಾಗೇ ಕ್ರಿಕೆಟಿಗರಾದ ವಿಜಯ್​ ಭಾರದ್ವಾಜ್, ಜಿ.ಕೆ ಅನಿಲ್​ಕುಮಾರ್, ಕೆ.ಸಿ ಕಾರ್ಯಪ್ಪ,ಭಾರತೀಯ ಮಹಿಳಾ ಕ್ರಿಕೆಟ್​ ಆಟಗಾರ್ತಿ ವನಿತಾ, ದಕ್ಷಿಣ ಆಫ್ರಿಕಾದ ಆಟಗಾರ ಹರ್ಷಲ್​ ಗಿಬ್ಸ್ , ಇಂಗ್ಲೆಂಡ್​ ಓವೈಸಿ ಷಾ ಮುಂತಾದವ್ರು ಈ ಹಾಡನ್ನ ಮೆಚ್ಚಿಕೊಂಡಿದ್ದು, ತಮ್ಮ ಟ್ವೀಟರ್​ನಲ್ಲಿ ಶೇರ್ ಮಾಡೋದರ ಜೊತೆ ಈ ಹಾಡಿನ ಬಗ್ಗೆ ಬರೆದುಕೊಂಡಿದ್ದು, ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಈಗಾಗ್ಲೇ ಸಲಗ ಚಿತ್ರದ ಸೂರಿ ಅಣ್ಣ ಸಾಂಗ್​ ದೊಡ್ಡ ಮಟ್ಟದಲ್ಲಿ ಹೈಪ್​ ಕ್ರಿಯೇಟ್ ಮಾಡಿದ್ದು, ಅಂತದ್ದೇ ಕ್ರೇಜ್ ಈ ಮೆಲೋಡಿ ಹಾಡಿಗೂ ಶುರುವಾಗಿದೆ. ಸಲಗ ಮೇಕಿಂಗ್​ ನೋಡುತ್ತಿದ್ರೆ, ಸ್ಯಾಂಪಲ್​ಗಳನ್ನ ನೋಡುತ್ತಿದ್ರೆ, ಸ್ಯಾಂಡಲ್​​ವುಡ್​ನ ಹಿಟ್ ಸಿನಿಮಾಗಳ ಲಿಸ್ಟ್​ನಲ್ಲಿ ಸಲಗ ಕೂಡ ಸೇರಲಿದೆ ಅನ್ನೋ ಟಾಕ್​ ಶುರುವಾಗಿದೆ.

ಸದ್ಯ ಸಲಗ ಕ್ರೇಜ್​ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಒಂದಲ್ಲ ಒಂದು ವಿಶೇಷತೆಗಳಿಂದ ಸುದ್ದಿ ಮಾಡ್ತಾನೇ ಇದೆ. ಈಗಾಗಲೇ ಶೂಟಿಂಗ್​ ಕಂಪ್ಲೀಟ್ ಆಗಿದ್ದು, ಥಿಯೇಟರ್​ ಓಪನ್​ ಆಗುತ್ತಿದ್ದ ಹಾಗೇ ತೆರೆಗೆ ಬರೋಕ್ಕೆ ರೆಡಿಯಿದೆ ಸಲಗ.

Next Story

RELATED STORIES