Top

ನ್ಯೂ ಲುಕ್​​ನಲ್ಲಿ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ ಮಿಂಚು

ರಕ್ಷಿತ್​ ಶೆಟ್ಟಿ ಅಭಿನಯದ 777 ಚಾರ್ಲಿ ಶೂಟಿಂಗ್​ಗೆ ನಡೀತಿದೆ ಸಕಲ ಸಿದ್ಧತೆ.

ನ್ಯೂ ಲುಕ್​​ನಲ್ಲಿ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ ಮಿಂಚು
X

ಚಾರ್ಲಿ 777 ಶೂಟಿಂಗ್​ಗೆ ನಡೀತಿದೆ ಸಕಲ ಸಿದ್ಧತೆ 

ಕೊರೊನಾ ಮತ್ತು ಲಾಕ್​ಡೌನ್​ನಿಂದ ತತ್ತರಿಸಿ ಹೋಗಿದ್ದ ಸ್ಯಾಂಡಲ್​ವುಡ್​, ಸದ್ಯ ಸಖತ್​ ಆ್ಯಕ್ಟಿವ್​ ಆಗಿದೆ. ಎಲ್ಲಾ ಸ್ಟಾರ್​ಗಳು ಶೂಟಿಂಗ್​ ಅಖಾಡಕ್ಕೆ ಇಳಿದಿದ್ದಾರೆ. ಇದೀಗ ಸಿಂಪಲ್​ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ 777 ಚಾರ್ಲಿ ಶೂಟಿಂಗ್​ ಶುರುಮಾಡೋ ಯೋಚನೆಯಲ್ಲಿದ್ದು, ಬೇಕಾದ ತಯಾರಿಗಳನ್ನ ಮಾಡ್ಕೊಳ್ತಿದ್ದಾರೆ.

ಕೊರೊನಾ ಮತ್ತು ಲಾಕ್​ಡೌನ್​ನಿಂದ ಸ್ಯಾಂಡಲ್​ವುಡ್​ ಸೈಲೆಂಟಾಗಿತ್ತು. ಭರದಿಂದ ಸಾಗ್ತಿದ್ದ ಸಿನಿಮಾ ಶೂಟಿಂಗ್​ಗಳಿಗೆ ಬ್ರೇಕ್ ಬಿದ್ದಿತ್ತು. ಇದೀಗ ಒಂದೊಂದೇ ಬಿಗ್​ ಬಜೆಟ್​ ಸಿನಿಮಾಗಳು ಮತ್ತೆ ಶೂಟಿಂಗ್​ ಶುರುಮಾಡಿದೆ. ಅದೇ ಹಾದಿಯಲ್ಲಿ ಅರ್ಧಕ್ಕೆ ನಿಂತಿದ್ದ 777 ಚಾರ್ಲಿ ಶೂಟಿಂಗ್​ ಕೂಡ ಸದ್ಯದಲ್ಲೇ ಶುರುವಾಗಲಿದೆ.


ರೀಸೆಂಟಾಗಿ 777 ಚಾರ್ಲಿ ಸಿನಿಮಾದಲ್ಲಿ ನಟಿಸೋಕ್ಕೆ ತರಬೇತಿವುಳ್ಳ ನಾಯಿಗಳು ಬೇಕಿವೆ ಅಂತ ಹುಡುಕ್ತಿದ್ದ ಚಿತ್ರತಂಡ ಇದೀಗ, ಶೂಟಿಂಗ್​ ಮಾಡೋಕ್ಕೆ ಪ್ಲಾನ್​ ಮಾಡಿಕೊಳ್ತಿದೆ. ಈ ಬಗ್ಗೆ ಚಿತ್ರ ನಿರ್ದೇಶಕ ಕಿರಣ್​ ರಾಜ್, ನಾಯಕ ರಕ್ಷಿತ್ ಶೆಟ್ಟಿ ಮತ್ತು ಚಿತ್ರತಂಡ ಕೂತು ಚರ್ಚೆ ಮಾಡಿ, ಬೇಕಾದ ಸಿದ್ಧತೆ ಮಾಡಿಕೊಳ್ತಿದೆ. ಅದರ ಒಂದಷ್ಟು ಫೋಟೋಗಳನ್ನ ಡೈರೆಕ್ಟರ್ ಕಿರಣ್​ ರಾಜ್​ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಅಂದ್ಹಾಗೇ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಗಡ್ಡ ಬಿಟ್ಟು,ಮಾಸ್​ ಲುಕ್​ನಲ್ಲಿ ಮಿಂಚಿದ್ದು , ಲಾಕ್​​ಡೌನ್​ ನಂತರ ಲುಕ್​ ಕೊಂಚ ಬದಲಾಗಿದೆ. ಬಿಯರ್ಡ್​ ಲುಕ್ ಜೊತೆಗೆ ಕೊಂಚ ಲಾಂಗ್ ಹೇರ್​ ಬಿಟ್ಟಿದ್ದು,ಈ ಲುಕ್​ ಕೂಡ ಸಖತ್ ಸ್ಟೈಲಿಶ್​ ಆಗಿದೆ.


ಈಗಾಗಲೇ ಚಿತ್ರದ ಟೀಸರ್, ಮೇಕಿಂಗ್​, ಫೋಟೋಗಳು 777 ಚಾರ್ಲಿ ಬಗ್ಗೆ ಕುತೂಹಲ ಮೂಡಿಸಿದ್ದು, ಮುಂದಿನ ಭಾಗದ ಚಿತ್ರೀಕರಣದ ಬಗ್ಗೆ ಸ್ವತಃ ಚಿತ್ರತಂಡವೇ ಎಕ್ಸೈಟ್ ಆಗಿದ್ಯಂತೆ. ಸದ್ಯ ಲಾಕ್​ಡೌನ್​ನಿಂದ ಅರ್ಧಕ್ಕೆ ನಿಂತಿದ್ದ ಸಿನಿಮಾಗಳೆಲ್ಲಾ ಮತ್ತೆ ಶೂಟಿಂಗ್​ ಶುರುಮಾಡಿದ್ದು, ಸ್ಯಾಂಡಲ್​ವುಡ್​ ಸಹಜ ಸ್ಥಿತಿಗೆ ಮರಳುವತ್ತ ಪ್ರಯತ್ನಸ್ತಿದೆ.

Next Story

RELATED STORIES