Top

ಶಿವಣ್ಣನಿಗೆ ಬಹುಮುಖ ನಟ, ರಕ್ಷಿತ್​​​​​​​​​​​​​​​​ಗೆ ಅತ್ತ್ಯುತ್ತಮ ನಟ ಅವಾರ್ಡ್

ಸ್ಯಾಂಡಲ್​​ವುಡ್​ಗೆ ದಾದಾ ಸಾಹೇಬ್​ ಫಾಲ್ಕೆ ಸೌತ್ ಪ್ರಶಸ್ತಿಯ ಗರಿ

ಶಿವಣ್ಣನಿಗೆ ಬಹುಮುಖ ನಟ, ರಕ್ಷಿತ್​​​​​​​​​​​​​​​​ಗೆ ಅತ್ತ್ಯುತ್ತಮ ನಟ ಅವಾರ್ಡ್
X

2020ನೇ ವರ್ಷದ ದಾದಾ ಸಾಹೇಬ್​ ಫಾಲ್ಕೆ ಸೌತ್​ ಅವಾರ್ಡ್​ ಅನೌನ್ಸ್​ ಆಗಿದೆ. ಈ ವರ್ಷ ಆರು ಅವಾರ್ಡ್​ಗಳು ನಮ್ಮ ಸ್ಯಾಂಡಲ್​ವುಡ್​ ಪಾಲಾಗಿದ್ದು, ಹ್ಯಾಟ್ರಿಕ್​ ಹೀರೋ, ಸಿಂಪಲ್​ ಸ್ಟಾರ್ ಸೇರಿದಂತೆ ಮತ್ಯಾರಿಗೆಲ್ಲಾ ಪ್ರಶಸ್ತಿ ಬಂದಿದೆ.

ಪ್ರತಿವರ್ಷದಂತೆ, ಈ ವರ್ಷ ಕೂಡ ದಾದಾ ಸಾಹೇಬ್​ ಫಾಲ್ಕೆ ಸೌತ್ ಅವಾರ್ಡ್​ ಪಟ್ಟಿ ಬಿಡುಗಡೆಯಾಗಿದೆ. 2020ರ ಸಾಲಿನಲ್ಲಿ ಬರೋಬ್ಬರಿ 6 ದಾದಾ ಫಾಲ್ಕೆ ಸೌತ್​ ಪ್ರಶಸ್ತಿಗಳು ಸ್ಯಾಂಡಲ್​ವುಡ್ ಪಾಲಾಗಿದೆ. ಸಿನಿಮಾದಿಂದ ಸಿನಿಮಾಗೇ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಸಿನಿಪ್ರಿಯರನ್ನ ರಂಜಿಸ್ತಿರೋ ಬಹುಮುಖ ನಟನಾಗಿ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.

ಇನ್ನು ಅವನೇ ಶ್ರೀಮನ್ನಾರಯಣ ಚಿತ್ರದ ಅಭಿನಯಕ್ಕಾಗಿ 2020ರ ದಾದಾ ಸಾಹೇಬ್​ ಫಾಲ್ಕೆ ಸೌತ್​ ಅವಾರ್ಡ್​ ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ಪಾಲಾಗಿದೆ.

ಕನ್ನಡದ ಅತ್ತುತ್ಯಮ ನಟಿಯಾಗಿ ತಾನ್ಯಾ ಹೋಪ್​ ಆಯ್ಕೆಯಾಗಿದ್ದಾರೆ. ಯಜಮಾನ ಚಿತ್ರದಲ್ಲಿ ಚಾಲೆಂಜಿಂಗ್​ ಸ್ಟಾರ್ ಜೊತೆ ಬಸಣ್ಣಿಯಾಗಿ ಹೆಜ್ಜೆ ಹಾಕಿದ್ದ, ತಾನ್ಯಾಗೇ ಇದೇ ಯಜಮಾನ ಚಿತ್ರಕ್ಕಾಗಿ ಅವಾರ್ಡ್​ ಸಿಕ್ಕಿದೆ.

ಇನ್ನು ಅತ್ಯುತ್ತಮ ಸಿನಿಮಾ ಮೂಕಜ್ಜಿಯ ಕನಸುಗಳು ಆಗಿದ್ದು, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪ್ರೀಮಿಯರ್ ಪದ್ಮಿನಿ ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಪಡೆದಿಕೊಂಡಿದ್ದಾರೆ. ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ವಿ ಹರಿಕೃಷ್ಣ ಪಾಲಾಗಿದೆ.

ಸ್ಯಾಂಡಲ್​ವುಡ್​ಗೆ ಒಟ್ಟಾರೆ 6 ಅವಾರ್ಡ್​ಗಳು ಸಿಕ್ಕಿದೆ, ಇನ್ನು ತೆಲುಗಿನಲ್ಲಿ ಬೆಸ್ಟ್ ಆಕ್ಟ್ರಿಸ್​ ಅವಾರ್ಡ್​ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ ಕೈ ಸೇರಿದೆ. ಅತ್ತುತ್ತಮ ಸಿನಿಮಾ ನಾನಿ ಮ್ತತು ಶ್ರದ್ಧಾ ಶ್ರೀನಾಥ್​ ಅಭಿನಯದ ಜೆರ್ಸಿ ಆಗಿದೆ.

ಇನ್ನು ತಮಿಳಿನಲ್ಲಿ ಬಹುಮುಖ ನಟ ಪ್ರಶಸ್ತಿಗೆ ಅಜಿತ್ ಕುಮಾರ್ ಭಾಜನರಾಗಿದ್ದಾರೆ. ಅತ್ಯುತ್ತಮ ನಟ ಧನುಷ್ ಪಾಲಾದರೆ ಅತ್ಯುತ್ತಮ ನಟಿ ಪ್ರಶಸ್ತಿ ಜ್ಯೋತಿಕಾಗೆ ಸಿಕ್ಕಿದೆ.

Next Story

RELATED STORIES