Top

ಮತ್ತೆ ತೆರೆಮೇಲೆ ಅಬ್ಬರಿಸಲಿರೋ ಶಿವಣ್ಣ ಡಾಲಿ ಜೋಡಿ

ದಸರಾ ಹಬ್ಬಕ್ಕೆ ಅಫೀಶಿಯಲ್​ ಆಗಿ ಕೆಲಸ ಶುರುಮಾಡಿದ ಚಿತ್ರತಂಡ

ಮತ್ತೆ ತೆರೆಮೇಲೆ ಅಬ್ಬರಿಸಲಿರೋ ಶಿವಣ್ಣ ಡಾಲಿ ಜೋಡಿ
X

ಟಗರು ಸಿನಿಮಾದಲ್ಲಿ ಟಗರು ಶಿವ ಮತ್ತು ಡಾಲಿ ಕಾಂಬಿನೇಷನ್​ ಎಷ್ಟರಮಟ್ಟಿಗೆ ಸೂಪರ್​ ಹಿಟ್ ಆಯ್ತು ಅನ್ನೋದು ಗೊತ್ತೇಯಿದೆ. ಇವರಿಬ್ಬರ ಕಳ್ಳ ಪೊಲೀಸ್ ಆಟ, ಡೈಲಾಗ್​ ವಾರ್ ಅಂತೂ ಥಿಯೇಟರ್ ಅಂಗಳದಲ್ಲಿ ಧೂಳೆಬ್ಬಿಸಿತ್ತು. ಇದೀಗ ಈ ಹಿಟ್ ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆ.

ಟಗರು ಸಿನಿಮಾದಿಂದ ಧನಂಜಯ, ಡಾಲಿಯಾಗಿ ಸೆಕೆಂಡ್ ಇನ್ನಿಂಗ್ಸ್​ ಆರಂಭಿಸಿದ್ದು, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದು ಕಡೆ ಶಿವಣ್ಣನ ಮಾಸ್ ಹಿಟ್​ ಸಿನಿಮಾಗಳ ಲಿಸ್ಟ್​ಗೆ ಮತ್ತೊಂದು ಸಿನಿಮಾ ಆಗಿ ಟಗರು ಕೂಡ ಸೇರಿಕೊಳ್ತು. ಟಗರು ಚಿತ್ರದಲ್ಲಿ ಟಗರು ಶಿವ ಮತ್ತು ಡಾಲಿ ಕಾಂಬಿನೇಷನ್​ ಸೂಪರ್​ ಹಿಟ್ ಆಗಿತ್ತು. ಚಿತ್ರದಲ್ಲಿ ಇಬರಿಬ್ಬರ ಡೈಲಾಗ್​ ವಾರ್ ಅಂತೂ ಸಖತ್​ ಕಿಕ್​ ಕೊಟ್ಟಿತ್ತು.

ಟಗರು ನಂತರ ಸಿನಿಪ್ರಿಯರು ಮತ್ತೊಮ್ಮೆ ಸೆಂಚೂರಿ ಸ್ಟಾರ್ ಜೊತೆ ಡಾಲಿ ನಟಿಸಿದ್ರೆ ಚೆನ್ನಾಗಿರುತ್ತೆ ಅಲ್ವಾ ಅಂತ ಅಂದುಕೊಳ್ತಿರುವಾಗ್ಲೇ, ಧನಂಜಯ ಮತ್ತೆ ಶಿವಣ್ಣನ ಜೊತೆ ಸ್ಕ್ರೀನ್​ ಶೇರ್ ಮಾಡ್ತಿರೋ ನ್ಯೂಸ್​ ಕೊಟ್ರು. ಆದರೆ, ಇದೀಗ ಈ ಚಿತ್ರದ ಬಗ್ಗೆ ಒಂದಷ್ಟು ಹೊಸ ಸುದ್ದಿ ಹೊರಬಿದ್ದಿದೆ. ದಸರಾ ಹಬ್ಬಕ್ಕೆ ಈ ಹೊಸ ಚಿತ್ರ ಅಧಿಕೃತವಾಗಿ ಕೆಲಸ ಆರಂಭಿಸಿದೆ. ದಸರಾ ಹಬ್ಬಕ್ಕೆ ಪೂಜೆ ನೆರವೇರಿಸಿ, ಪ್ರೊಡಕ್ಷನ್​ ನಂಬರ್ 2 ಹೆಸರಿನಲ್ಲಿ ಪ್ರೀ ಪ್ರೊಡಕ್ಷನ್​ ಕೆಲಸ ಶುರುಮಾಡಿರೋ ಫೋಟೋವೊಂದನ್ನ ಸ್ವತಃ ಧನಂಜಯ್ ಶೇರ್ ಮಾಡಿದ್ದಾರೆ.

ಅಂದ್ಹಾಗೇ ಈ ಹೊಸ ಚಿತ್ರಕ್ಕೆ ಅನೂಪ್​ ಸೀಳಿನ್​ ಸಂಗೀತ ನಿರ್ದೇಶನ ಮಾಡ್ತಿದ್ದು, ಸಾಂಗ್​ ರೆಕಾರ್ಡಿಂಗ್​ ಕೆಲಸ ಆರಂಭವಾಗಿದೆ.ಅಂದ್ಹಾಗೇ ಈ ಚಿತ್ರಕ್ಕೆ ಟೈಟಲ್​ ಫಿಕ್ಸ್​ ಆಗಿಲ್ಲ.ಆದ್ರೆ ಈ ಹೊಸ ಚಿತ್ರದ ಮೂಲಕ ತಮಿಳಿನ ಟ್ಯಾಲೆಂಟೆಡ್​ ಡೈರೆಕ್ಟರ್ ವಿಜಯ್​ ಮಿಲ್ಟನ್​ ಕನ್ನಡಕ್ಕೆ ಬರ್ತಿದ್ದಾರೆ.ಸದ್ಯದಲ್ಲೇ ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬೀಳಲಿದ್ದು,ಭರದಿಂದ ಪ್ರೀ ಪ್ರೊಡಕ್ಷನ್​ ಕೆಲಸ ಶುರುಮಾಡಿರೋ ಟೀಂ, ಸದ್ಯದಲ್ಲೇ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ.

Next Story

RELATED STORIES