Top

ಕಸ್ತೂರಿ ಮಹಲ್​ ಚಿತ್ರಕ್ಕೆ ನಾಯಕಿ ಆಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆ

ಮೊದಲು ರಚಿತಾ ರಾಮ್​ ಆಯ್ಕೆಯಾಗಿದ್ದರು. ಕಾರಣಾಂತರದಿಂದ ಅವರು​ ಚಿತ್ರತಂಡದಿಂದ ಹೊರಬಿದ್ದರು. ಈಗ ಕಸ್ತೂರಿ ಮಹಲ್ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ.

ಕಸ್ತೂರಿ ಮಹಲ್​ ಚಿತ್ರಕ್ಕೆ ನಾಯಕಿ ಆಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆ
X

ಬೆಂಗಳೂರು: 'ಕಸ್ತೂರಿ ನಿವಾಸ' ಶೀರ್ಷಿಕೆಯೊಂದಿಗೆ ಆರಂಭವಾದ ಈ ಚಿತ್ರ. ಡಾ.ರಾಜ್ ಕುಟುಂಬ ಹಾಗೂ ಅಭಿಮಾನಿಗಳ ಮೇಲಿರುವ ಗೌರವದಿಂದ 'ಕಸ್ತೂರಿ ಮಹಲ್' ಎಂದು ಹೆಸರು ಬದಲಿಸಿದ್ದು ಈಗ ಹಳೆಯ ವಿಷಯ.

ಈ ಚಿತ್ರದ ನಾಯಕಿ ಆಗಿ ಮೊದಲು ರಚಿತಾ ರಾಮ್​ ಆಯ್ಕೆಯಾಗಿದ್ದರು. ಕಾರಣಾಂತರದಿಂದ ರಚಿತಾ ರಾಮ್​ ಚಿತ್ರತಂಡದಿಂದ ಹೊರ ನಡೆದಿದ್ದು, ಈಗ ಕಸ್ತೂರಿ ಮಹಲ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿರುವ ಬಗ್ಗೆ ನಟಿ ಶಾನ್ವಿ ಶ್ರೀವಾಸ್ತವ್ ಅವರು ತಮ್ಮ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಹಾರಾರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶಿಸುತ್ತಿದ್ದಾರೆ. ಅವರೇ ಚಿತ್ರಕ್ಕೆ ಕಥೆ-ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದು ಅವರ ನಿರ್ದೇಶನದ 50ನೇ ಚಿತ್ರವಾಗಿದೆ.

ಅಕ್ಟೋಬರ್ 5ರಿಂದ ಕಸ್ತೂರಿ ಮಹಲ್​ಗೆ ಕೊಟ್ಟಿಗೆಹಾರದಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಶ್ರೀಭವಾನಿ ಆರ್ಟ್ಸ್ ಹಾಗೂ ರುಬಿನ್ ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀಶ್ ಆರ್​.ಸಿ ಹಾಗೂ ರುಬಿನ್ ರಾಜ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ ಸೌಂದರ್ ರಾಜ್ ಅವರ ಸಂಕಲನವಿದೆ.

ಶಾನ್ವಿ ಶ್ರೀವಾಸ್ತವ್, ಸ್ಕಂಧ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ, ಶೃತಿ ಪ್ರಕಾಶ್, ಕಾಶಿಮಾ, ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Next Story

RELATED STORIES