Top

ಶೂಟಿಂಗ್​ ಮಧ್ಯೆ ಸತೀಶ್​ ನೀನಾಸಂ ಮೈಸೂರು ಸಿಟಿ ರೌಂಡ್ಸ್​​​​

ನೀನಾಸಂ ಸತೀಶ್​ ಮೈಸೂರಿನ ರಸ್ತೆಗಳಲ್ಲಿ ಓಡಾಡಿಕೊಂಡು, ಸಖತ್​ ಎಂಜಾಯ್​ ಮಾಡುತ್ತಿದ್ದಾರೆ.

ಶೂಟಿಂಗ್​ ಮಧ್ಯೆ ಸತೀಶ್​ ನೀನಾಸಂ ಮೈಸೂರು ಸಿಟಿ ರೌಂಡ್ಸ್​​​​
X

ಅಭಿನಯ ಚತುರ ನೀನಾಸಂ ಸತೀಶ್​ ಸದ್ಯ ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಡೆ ಶೂಟಿಂಗ್​, ಮತ್ತೊಂದು ಕಡೆ ಮೈಸೂರು ರೌಂಡ್​ ಹೊಡಿತಾ, ಚಿತ್ರತಂಡದ ಜೊತೆ ಎಂಜಾಯ್​ ಮಾಡ್ತಿದ್ದಾರೆ.

ಮೈಸೂರಿನಲ್ಲಿ ನೀನಾಸಂ ಸತೀಶ್, ಹರಿಪ್ರಿಯಾ ಅಭಿನಯದ ಪೆಟ್ರೋಮ್ಯಾಕ್ಸ್​ ಶೂಟಿಂಗ್​ ಭರದಿಂದ ಸಾಗ್ತಾಯಿದೆ. ಸಂಜೆ 6 ಗಂಟೆಗೆ ಶೂಟಿಂಗ್​ ಪ್ಯಾಕ್​ಅಪ್​ ಆಗ್ತಿದ್ದ ಹಾಗೇ, ನೀನಾಸಂ ಸತೀಶ್​ ಮೈಸೂರಿನ ರಸ್ತೆಗಳಲ್ಲಿ ಓಡಾಡಿಕೊಂಡು, ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಮೈಸೂರು ದಸರಾ ಲೈಟಿಂಗ್ಸ್​ ಸಂಭ್ರಮವನ್ನು ಕಣ್ತುಂಬಿಕೊಂಡಿದ್ದಾರೆ.

ಮೈಸೂರು ದಸರಾ ನೋಡುವ ಆಸೆ ಯಾರಿಗಿರಲ್ಲ ಹೇಳಿ ಆದರೆ ಜನಪ್ರಿಯ ನಟರು ಜನಸಾಮಾನ್ಯರಂತೆ ಜಾಲಿಯಾಗಿ ನಿಂತು ದಸರಾ ವೀಕ್ಷಿಸಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಅಭಿಮಾನಿಗಳು ಅವರನ್ನು ನೋಡಲು ಮುಗಿ ಬೀಳುತ್ತಾರೆ. ಇದಕ್ಕಾಗಿ ನಟ ನಿನಾಸಂ ಸತೀಶ್ ಭರ್ಜರಿ ಪ್ಲಾನ್ ಮಾಡಿ, ಸಾಮಾನ್ಯ ಜನರ ನಡುವೆ, ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ ಹಾಕಿ, ಮಾರು ವೇಷದಲ್ಲಿ ಸತೀಶ್ ಬೀದಿ ಬದಿಗಳಲ್ಲಿ ಓಡಾಡಿಕೊಂಡು, ತಿಂಡಿ-ತಿನಿಸುಗಳ ರುಚಿ ಸವಿದಿದ್ದಾರೆ.

ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್​ ಚಿತ್ರದ ಶೂಟಿಂಗ್​ ಭರ್ಜರಿಯಾಗಿ ನಡೆಯುತ್ತಿದೆ. 'ನೀರ್‌ದೋಸೆ' ಖ್ಯಾತಿಯ ವಿಜಯ್ ಪ್ರಸಾದ್ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಹಗಲೆಲ್ಲ ಸಿನಿಮಾ ಶೂಟಿಂಗ್ ನಡೆಸಿದರೆ, ರಾತ್ರಿ ವೇಳೆ ತಮ್ಮ ಸ್ನೇಹಿತರೊಂದಿಗೆ ಮೈಸೂರು ಸುತ್ತಾಡ್ತಾ ಇದ್ದಾರೆ. ಅರಮನೆ ಸೇರಿದಂತೆ ಮೈಸೂರಿನ ವಿವಿಧ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಿ, ಆನಂದಿಸಿದ್ದಾರೆ.

Next Story

RELATED STORIES